Karnataka Elections: ಟಿಪ್ಪು ವಿರುದ್ಧ ಯತ್ನಾಳ್ ವಿವಾದಾತ್ಮಕ ಹೇಳಿಕೆ
ಧಾರವಾಡ ಮೇ 1: ಟಿಪ್ಪು ಸುಲ್ತಾನ್ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮೊನ್ನೆಯಷ್ಟೇ ರಾಜಕೀಯ ನಾಯಕರ ಬಗ್ಗೆ ನಾಲಿಗೆ ಹರಿಬಿಡುತ್ತಿದ್ದ ಯತ್ನಾಳ್ ಇಂದು ಧಾರವಾಡದಲ್ಲಿ ಟಿಪ್ಪು ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ಧಾರವಾಡದ ಹೀರೇಹಡಕುಡಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಯತ್ನಾಳ್ ಅವರು, 'ಅವನು ಯಾವ ಟಿಪ್ಪು ಸುಲ್ತಾನ್ ರೀ.. ಲಕ್ಷಾಂತರ ಹಿಂದೂಗಳನ್ನು ಕೊಂದಿದ್ದಾನೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾತ್ರವಲ್ಲದೆ 'ಟಿಪ್ಪು ಸುಲ್ತಾನ್ ಹರಾಂ ಕೋರ್' ಎಂದ ಯತ್ನಾಳ್ ಕರೆದಿದ್ದಾರೆ. 'ಅವನು ಯಾವ ಟಿಪ್ಪು ಸುಲ್ತಾನ್, ಟಿಪ್ಪು ಸುಲ್ತಾನ್ ಫೋಟೋ ಎಲ್ಲೆಡೆ ತೆಗೆಯುತ್ತೇವೆ. ಸಂಗೋಳ್ಳಿ ರಾಯಣ್ಣ, ಅಂಬೇಡ್ಕರ್ ಫೋಟೋ ಹಾಕಿಸುತ್ತೇವೆ' ಎಂದ ಯತ್ನಾಳ್ ಹೇಳಿದ್ದಾರೆ.
ಟಿಪ್ಪು ಬಗ್ಗೆ ಮಾತನಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮೊನ್ನೆಯಷ್ಟೇ ಯತ್ನಾಳ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು 'ವಿಷಕನ್ಯೆ' ಎಂದು ಕರೆದಿದ್ದರು. ಈ ಹೇಳಿಕೆ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿತ್ತು. ಸದ್ಯ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಯತ್ನಾಳ್ ವಿರುದ್ಧ ವಾಗ್ದಾಳಿಗಳು ಹೆಚ್ಚಾಗಿವೆ.












Click it and Unblock the Notifications