ಯಕ್ಷಗಾನ ಕ್ಷೇತ್ರದ 'ರಾಜಕುಮಾರ' ಚಿಟ್ಟಾಣಿ ಇನ್ನಿಲ್ಲ!

Recommended Video

      yakshagana legend chittani ramchandra hegde passes away | Oneindia Kannada

      ಮಣಿಪಾಲ, ಅಕ್ಟೋಬರ್ 04: ಯಕ್ಷಗಾನ ದಿಗ್ಗಜ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರು ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರು ಮತ್ತು ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

      ನ್ಯುಮೋನಿಯಾ ಮತ್ತು ಲಘು ಪಾರ್ಶ್ವ ವಾಯುವಿನಿಂದ ಬಳಲುತ್ತಿದ್ದ ಅವರು ಇತ್ತೀಚಿಗೆ ಇಲ್ಲಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ.

      Yakshagana legend Chittani Ramachandra Hegde Passes Away

      ಪರಿಚಯ: ಜನವರಿ 1, 1933ರಲ್ಲಿ ಜನಿಸಿದ್ದ ಅವರು 2ನೇ ತರಗತಿಗೆ ಶಾಲೆ ಬಿಟ್ಟಿದ್ದರು. 7ನೇ ವರ್ಷದಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ್ದ ಅವರು ಬಡಗುತಿಟ್ಟಿನ ಶೈಲಿಯ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದರು. 14 ವರ್ಷಕ್ಕೆ ಯಕ್ಷಗಾನದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಹಿರಿಮೆ ಅವರದು.

      Chittani Ramachandra Hegde

      ಕೌರವ, ದುಷ್ಟಬುದ್ಧಿ, ಭಸ್ಮಾಸುರ ಸೇರಿದಂತೆ ವಿವಿಧ ಪ್ರಮುಖ ಪಾತ್ರಗಳಲ್ಲಿ, ಅದರಲ್ಲಿಯೂ ಖಳನಾಯಕನ ಪಾತ್ರದಲ್ಲಿ ಅವರು ಎತ್ತಿದ ಕೈ. ಆರಂಭದಲ್ಲಿ ಒಂದೆರಡು ವರ್ಷ ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿಕೊಂಡಿದ್ದು ಬಳಿಕ ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಅಭಿಮಾನಿಗಳ ಮನಗೆದ್ದರು.

      ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿದ್ದ ಇವರು, ಭಟ್ಟರ ನಿರ್ದೇಶನದಲ್ಲಿ 'ಕೃಷ್ಣಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಮಾಡಿದ ಬಳಿಕ ಯಕ್ಷಗಾನದ ಐಕಾನ್‌ ಆಗಿ ಮಿಂಚಿದವರು. ಯಕ್ಷಗಾನಕ್ಕೆ ಮೊದಲ ಪದ್ಮ ಪ್ರಶಸ್ತಿ ದಕ್ಕಿಸಿಕೊಂಡ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಯಕ್ಷಗಾನದ ರಾಜಕುಮಾರ ಎಂದೇ ಪ್ರಸಿದ್ಧಿ ಪಡೆದಿದ್ದ ಇವರಿಗೆ ಹಿರಿಯರು, ಕಿರಿಯರು ಎಂಬ ಭೇದ ಭಾವವೇ ಇರಲಿಲ್ಲ. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಸ್ವಭಾವ ಅವರದು.

      ೮೫ರ ವಯಸ್ಸಿನಲ್ಲಿಯೂ ಅಳುಕದೆ ಬಣ್ಣ ಹಚ್ಚಿ ಪಾತ್ರ ನಿಭಾಯಿಸುತ್ತಿದ್ದ ಅವರಿಗೆ ಸಾಟಿ ಇನ್ನೊಬ್ಬರಿಲ್ಲ. ಆದರೀಗ ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ ಹಾಗೂ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+