Pollution: ಭೀಮಾ ನದಿಗೆ ವಿಷದ ನೀರು! ಯಾದಗಿರಿ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮಕ್ಕೆ ರಾಮಲಿಂಗಾ ರೆಡ್ಡಿ ಸೂಚನೆ

ಯಾದಗಿರಿ: ಇಲ್ಲಿನ ಕೈಗಾರಿಕಾ ಪ್ರದೇಶಗಳಿಂದ ವಿಷಪೂರಿತ ನೀರು ಭೀಮಾ ನದಿಗೆ ಸೇರಿ ಕಲುಷಿತಗೊಳ್ಳುತ್ತಿರುವುದು ವರದಿ ಆಗಿದ್ದು, ಅದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ನಿಯಂತ್ರಿಸುವುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮುಖ ಜವಾಬ್ದಾರಿ ಆಗಿದೆ. ಕೂಡಲೇ ಸ್ಥಳ ಪರಿಶೀಲಿಸಿ, ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುಂತೆ ಸಚಿವರು ಸೂಚಿಸಿದ್ದಾರೆ.

ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿರುವ ವಿವಿಧ ಕಾರ್ಖಾನೆಗಳು ನಿಯಮ ಉಲ್ಲಂಘಿಸುತ್ತಿವೆ. ಸಂಸ್ಕರಿಸದ/ಕಲುಷಿತ ತ್ಯಾಜ್ಯ ನೀರನ್ನು ಹೊರ ಬಿಡಲಾಗುತ್ತಿದೆ. ಆ ನೀರು ನೇರವಾಗಿ ಭೀಮಾ ನದಿಗೆ ಸೇರುತ್ತಿದೆ. ಇದರಿಂದ ಜಾನುವಾರು, ಜಲಚರಗಳಿಗೆ, ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯ ಆತಂಕ ಶುರುವಾಗಿದೆ. ಪರಿಸರ ಮಾಲಿನ್ಯದ ಭೀತಿಯು ಉಂಟಾಗಲಿದೆ ಎಂದು ಸ್ಥಳೀಯರು ದೂರಿದ್ದರು. ಅವರ ಮನವಿಗೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಪಂದಿಸಿದ್ದಾರೆ.

Yadgir Pollution

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕೈಗಾರಿಕೆಗಳಿಂದ ಸಂಸ್ಕರಿಸದ/ಕಲುಷಿತ ತ್ಯಾಜ್ಯ ನೀರು ನದಿ ಸೇರುತ್ತಿರುವುದು ತೀರಾ ಕಳವಳಕಾರಿ. ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯ ನೀರನ್ನು ಸೂಕ್ತವಾಗಿ ಸಂಸ್ಕರಿಸದೇ ನದಿ ಹಾಗೂ ಜಲಮೂಲಗಳಿಗೆ ಹರಿಸುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ಜನ-ಜಾನುವಾರುಗಳ ಆರೋಗ್ಯ, ಕೃಷಿ ಚಟುವಟಿಕೆಗಳು ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಇಂತಹ ಘಟನೆಗಳನ್ನು ನಿಯಂತ್ರಿಸಬೇಕು. ಸದರಿ ಕೈಗಾರಿಕೆಗಳ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಚಿವರು ನಿರ್ದೇಶಿಸಿದ್ದಾರೆ.

ಅನುಸರಣಾ ವರದಿ ಸಲ್ಲಿಕೆಗೆ ಸೂಚನೆ

ಈ ಭಾಗದ ಜನರಿಗೆ, ಪರಿಸರದ ಮೇಲೆ ಹಚ್ಚಿನ ಸಮಸ್ಯೆ ಉಂಟಾಗುವ ಮೊಲದೇ ಪ್ರಕರಣದ ಗಂಭೀರತೆ ಅರಿತುಕೊಳ್ಳಬೇಕು. ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸಂಬಂಧಿತ ಕೈಗಾರಿಕೆಗಳ ವಿರುದ್ಧ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ತ್ಯಾಜ್ಯ ನೀರಿನ ಮಾದರಿ ಸಂಗ್ರಹಿಸಬೇಕು. ಅವುಗಳ ಗುಣಮಟ್ಟವನ್ನು ಪರೀಕ್ಷಿಸಿ, ನಿಯಮ ಉಲ್ಲಂಘಿಸಿದ ಕೈಗಾರಿಕೆಗಳ ವಿರುದ್ಧ ಯಾವುದೇ ವಿಳಂಬವಿಲ್ಲದೆ ಕಾನೂನುಬದ್ಧ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಕೈಗಾರಿಕೆಗಳು, ಮಾಲೀಕರಿಂದ ಈ‌ ರೀತಿಯ ಬೇಜಾಬ್ದಾರಿ ಕಾರ್ಯವೈಖರಿಗೆ ಕಾರಣರಾದ ಅಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಬೇಕು. ವಿಚಾರಣೆ ಕೈಗೊಂಡು ಅನುಸರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಹೇಳಿ ಪತ್ರ ಬರೆದಿದ್ದಾರೆ.

ನಿಯಮ ಉಲ್ಲಂಘಿಸಿರುವ ಕೈಗಾರಿಕೆಗಳು

ನಿಯಮಗಳ ಪ್ರಕಾರ, ಇಲ್ಲಿರುವ ಸುಮಾರು 50ಕ್ಕೂ ಅಧಿಕ ಕೈಗಾರಿಕೆಗಳಿಂದ ನಿತ್ಯ ಉತ್ಪತ್ತಿ ಆಗುವ ಬೃಹತ್ ಪ್ರಯಾಣ ತ್ಯಾಜ್ಯ ನೀರನ್ನು ಸಂಸ್ಕರಿಸಬೇಕು. ಅದ್ಯಾವುದನ್ನು ಮಾಡದೇ ನೇರವಾಗಿ ಹೊರ ಬಿಡುತ್ತಿರುವ ಪರಿಣಾಮ ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಮಕ್ಕಳು, ಮಹಿಳೆಯರ ಆರೋಗ್ಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಿಯಮ ಗಾಳಿ ತೂರಿ ಪರಿಸರ, ಜನ ಜೀವನಕ್ಕೆ ತೊಂದರೆ ಆಗುವಂತೆ ನಡೆದುಕೊಳ್ಳುತ್ತಿವೆ. ಇದರ ವಿರುದ್ಧ ಸಂಬಂಧಿತ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ರಾಜ್ಯ ವಾಯು ಮಾಲಿನ್ಯ ಮಂಡಳಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+