ಯಾದಗಿರಿ, ರಾಯಚೂರು ಜಿಲ್ಲಾ ಸುದ್ದಿಗಳ ಗುಚ್ಛ
ಯಾದಗಿರಿ, ಅಕ್ಟೋಬರ್ 12 : ಯಾದಗಿರಿ ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಧಾರಕಾರ ಮಳೆಯಾಗುತ್ತಿದೆ. ನಗರದ ಫಕರೂಲ್ಲಾ ಬಾಷಾ ದರ್ಗಾ ಸಂಪೂರ್ಣ ಜಲಾವೃತವಾಗಿದೆ. ತಗ್ಗು ಪ್ರದೇಶದಲ್ಲಿ ದರ್ಗಾ ಇರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ನುಗ್ಗಿದೆ. ನೀರಿನಿಂದಾಗಿ ದರ್ಗಾ ಮಿನಿ ಕೆರೆಯಂತಾಗಿದೆ.

* ಲಿಂಗಸುಗೂರು : ಲಿಂಗಸುಗೂರು ಸಮೀಪದ ಹಟ್ಟಿ ಪಟ್ಟಣದಲ್ಲಿ ಈಜಲು ಹೋದ ಬಾಲಕ ನೀರು ಪಾಲಾಗಿದ್ದಾನೆ. ಹಟ್ಟಿ ಕ್ಯಾಂಪ್‌ನ ಜಯಪ್ರಕಾಶ್ ಕಾಲೋನಿಯ ಕಿರಣ ಕುಮಾರ್ (9) ಮೃತಪಟ್ಟ ಬಾಲಕ. ಕಿರಣ ಕುಮಾರ್ ಪಟ್ಟಣದ ವಿನಾಯಕ ಶಾಲೆಯಲ್ಲಿ ಓದುತ್ತಿದ್ದ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಲಿಂಗಸುಗೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಹಾಯಕ ಆಯುಕ್ತರ ಕಚೇರಿ ಎದುರು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಧರಣಿ ಮಾಡಲಾಗುತ್ತಿದ್ದು ಅಮರಪ್ಪ ಎಂಬ ವ್ಯಕ್ತಿ ಅಸ್ವಸ್ಥಗೊಂಡಿದ್ದಾರೆ.












Click it and Unblock the Notifications