• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂದು, ಇಂದು: ಡಿ.ಕೆ.ಶಿವಕುಮಾರ್ ಸಹೋದರರ ಡಬಲ್ ಸ್ಟ್ಯಾಂಡರ್ಡ್

|

ರಾಮನಗರ ಜಿಲ್ಲೆ, ಕನಕಪುರ ತಾಲೂಕಿನಲ್ಲಿ ತಲೆ ಎತ್ತಲಿರುವ ವಿಶ್ವದ ಅತಿದೊಡ್ಡ ಏಸುಕ್ರಿಸ್ತನ ಪ್ರತಿಮೆ ಅನಾವರಣಕ್ಕೆ ಮಾಜಿ ಸಚಿವ, ಸ್ಥಳೀಯ ಶಾಸಕರೂ ಆಗಿರುವ ಡಿ.ಕೆ.ಶಿವಕುಮಾರ್ ಶಿಲಾನ್ಯಾಸ ನೆರವೇರಿಸಿದ್ದಾರೆ.

ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ತಾಣದಲ್ಲಿ ಭಾರೀ ಪರವಿರೋಧ ಚರ್ಚೆ ಎದುರಾಗಿದೆ. ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ, ಈ ಏಕಶಿಲೆ ವಿಗ್ರಹ 114 ಅಡಿ ಎತ್ತರದ್ದು.

ಅಂದು ಗುಜರಾತ್ ನಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ್ದಕ್ಕೆ ಲೇವಡಿ ಮಾಡಿದ್ದ ಡಿಕೆ ಸಹೋದರರು ಈಗ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಲಾಗುತ್ತಿದೆ. ಪ್ರತಿಮೆ ನಿರ್ಮಾಣದ ಶಿಲಾನ್ಯಾಸವನ್ನು ಡಿಕೆಶಿ, ಕ್ರಿಸ್ಮಸ್ ಹಬ್ಬದಂದು ನೆರವೇರಿಸಿದ್ದರು.

ಡಿ.ಕೆ.ಶಿವಕುಮಾರ್ ಬಗ್ಗೆ ಸಂಸದ ಅನಂತ್‌ಕುಮಾರ್ ಹೆಗಡೆ ವ್ಯಂಗ್ಯ

ಕಪಾಲಿಬೆಟ್ಟದ ಹತ್ತು ಎಕರೆ ಜಾಗವನ್ನು ಡಿ.ಕೆ. ಶಿವಕುಮಾರ್ ತಮ್ಮ ಸ್ವಂತ ಹಣವನ್ನು ಕಟ್ಟಿ ಸರಕಾರದಿಂದ ಪಡೆದಿದ್ದು, ಪ್ರತಿಮೆ ನಿರ್ಮಾಣ ಟ್ರಸ್ಟ್ ನವರಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಹಸ್ತಾಂತರಿಸಿದ್ದಾರೆ. ಪ್ರತಿಮೆ ನಿರ್ಮಾಣ ಸಂಬಂಧ, ಸಾಮಾಜಿಕ ತಾಣದಲ್ಲಿ ಬಂದ ಆಯ್ದ ಪ್ರತಿಕ್ರಿಯೆಗಳು:

ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಟ್ರಸ್ಟ್ ಪರವಾಗಿ ಕೃತಜ್ಞತೆ

ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಟ್ರಸ್ಟ್ ಪರವಾಗಿ ಕೃತಜ್ಞತೆ

ಹಾರೋಬೆಲೆ ಗ್ರಾಮದಲ್ಲಿ ಶೇಕಡಾ 99 ರಷ್ಟು ಮಂದಿ ಕ್ರೈಸ್ತ ಸಮುದಾಯದವರಿದ್ದು, ಈ ಕಾರ್ಯದ ಅನುಷ್ಠಾನಕ್ಕೆ ಕಾರಣೀಭೂತರಾದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಟ್ರಸ್ಟ್ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ. 114 ಅಡಿ ಎತ್ತರದ ಪ್ರತಿಮೆ ಪೈಕಿ 13 ಅಡಿ ಮೆಟ್ಟಿಲುಗಳು ಇದ್ದು, ಅದರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.

ಅವರು ಮಾಡುತ್ತಿರುವ ಹಿಂದೂ ಮುಗ್ದ ಜನರ ಮತಾಂತರಕ್ಕೆ ನನ್ನ ವಿರೋಧ.

ಅವರು ಮಾಡುತ್ತಿರುವ ಹಿಂದೂ ಮುಗ್ದ ಜನರ ಮತಾಂತರಕ್ಕೆ ನನ್ನ ವಿರೋಧ.

ಇದು ಅಲ್ಲಿನ ಮೊದಲ ಚಿತ್ರ. ನಾವು ಇಂತಹ ಘಟನೆಗಳನ್ನು ಕೇರಳದಲ್ಲಿ ನೋಡ್ತೀವಿ. ಮೊದಲು ಬಂದು ಶಿಲುಬೆ ಸ್ಥಾಪಿಸುತ್ತಾರೆ. ಆಮೇಲೆ ಆ ಜಾಗವನ್ನು ವಶ ಪಡಿಸಿಕೊಳ್ಳುತ್ತಾರೆ. ಅಲ್ಲಿಯ ಜನರನ್ನು ಮತಾಂತರ ಮಾಡುತ್ತಾರೆ. ಆಮೇಲೆ ಒಂದು ಗ್ರಾಮವೇ ಸೃಷ್ಟಿ ಆಗುತ್ತೆ. ಇಂತಹ ಉದಾಹರಣೆಗಳು ಕೇರಳದಲ್ಲಿ ಧಾರಾಳವಾಗಿ ಸಿಗುತ್ತದೆ. ನಮ್ಮಿಂದ ಏನು ಮಾಡಕ್ಕಾಗಲ್ಲ. ನಮ್ಮವರು ಜಾತಿ ಜಾತಿ ಆ ನೋವಿನಿಂದ ಇನ್ನಿತರ ಧರ್ಮಕ್ಕೆ ಕನ್ವರ್ಟ್ ಆಗ್ ಬಿಡುತ್ತಾರೆ. ಇದೇ, ನೋವಿನ ವಿಷಯ. ಅವರ ಧರ್ಮ ವಿರೋಧಿ ನಾನಲ್ಲ. ಅವರು ಮಾಡುತ್ತಿರುವ ಹಿಂದೂ ಮುಗ್ದ ಜನರ ಮತಾಂತರಕ್ಕೆ ನನ್ನ ವಿರೋಧ.

ಈಗಲೂ ಎಚ್ಡಿಕೆ - ಡಿಕೆಶಿ ಜೋಡೆತ್ತುಗಳೇ...!

ನಿಮ್ಮಂತಹ ಜನನಾಯಕರಿಂದ ನಾವು ಇಲ್ಲಿ ಶಾಂತಿಯುತವಾಗಿ ನೆಲೆಸಿದ್ದೇವೆ

ನಿಮ್ಮಂತಹ ಜನನಾಯಕರಿಂದ ನಾವು ಇಲ್ಲಿ ಶಾಂತಿಯುತವಾಗಿ ನೆಲೆಸಿದ್ದೇವೆ

ಡಿ ಕೆ ಶಿವಕುಮಾರ್ ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ನಿಮ್ಮಂತಹ ಜನನಾಯಕರಿಂದ ನಾವು ಇಲ್ಲಿ ಶಾಂತಿಯುತವಾಗಿ ನೆಲೆಸಿದ್ದೇವೆ. ಈ ರೀತಿಯ ಒಳ್ಳೆಯ ಕೆಲಸಗಳು ಇನ್ನೂ ಮುಂದುವರಿಯುತ್ತಿರಲಿ ಎಂದು ಏಸುವಿನಲ್ಲಿ ಪ್ರಾರ್ಥಿಸುತ್ತೇನೆ. ಇದೊಂದು ಒಳ್ಳೆಯ ಕೆಲಸ, ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

ಬಾಲಗಂಗಾಧರನಾಥ ಸ್ವಾಮಿಗಳ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಪುತ್ಥಳಿ ನಿರ್ಮಿಸಿ

ಬಾಲಗಂಗಾಧರನಾಥ ಸ್ವಾಮಿಗಳ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಪುತ್ಥಳಿ ನಿರ್ಮಿಸಿ

ಸನ್ಮಾನ್ಯ ಡಿ ಕೆ ಶಿವಕುಮಾರ್ ರವರೇ ನಮ್ಮ ಜಿಲ್ಲೆಯವರಾದ ಬಾಲಗಂಗಾಧರನಾಥ ಸ್ವಾಮಿಗಳ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಪುತ್ಥಳಿ ನಿರ್ಮಿಸಿ ನಿಮಗೊಂದು ಕೀರ್ತಿ ಬರುತ್ತದೆ. ನಿಮಗೆ ದೇವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಆಯಸ್ಸು ಸುಖ ಶಾಂತಿ ನಮ್ಮದಿ ನಿಡಲಿ ಎಂದು ದೇವರಗೇ ಬೇಡಿಕೊಳ್ಳುತ್ತೇನೆ ಸರ್..

ಸೋನಿಯಾ ಗಾಂಧಿಯ ಕೃಪೆಯಿಂದ ಮುಂದಿನ ಬಾರಿ ಮುಖ್ಯಮಂತ್ರಿ

ಸೋನಿಯಾ ಗಾಂಧಿಯ ಕೃಪೆಯಿಂದ ಮುಂದಿನ ಬಾರಿ ಮುಖ್ಯಮಂತ್ರಿ

ದೇಶದಲ್ಲಿ. ಸಮಾನತೆಯ ಧರ್ಮ ಕಪಾಡಲು ಶ್ರಮಿಸಿದ. ಶಾಂತಿ ನೆಲಸಲು. ಕಾರಣೀಭೂತರಾದ ಯೇಸುರವರ ಸಲಹೆಗಳನ್ನೂ ಪಾಲಿಸಲು ದೇಶದ ಜನತೆಗೆ ದಯಪಾಲಿಸಲಿ. ಸೋನಿಯಾ ಗಾಂಧಿಯ ಕೃಪೆಯಿಂದ ಮುಂದಿನ ಬಾರಿ ಮುಖ್ಯಮಂತ್ರಿ ಬಯಸಿದ ಹಾಗೆ ಕಾಣುತ್ತಿದೆ , ಅದರ ಫಲವೇ ಇದು...

English summary
World's Biggest Jesus Christ Statue in Harobele Village, Kanakapura Taluk In Ramnagar District By DK Shivakumar: Social Media Comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X