ಇನ್ಮುಂದೆ ನಿತ್ಯ ವಾಕ್ ಮಾಡುತ್ತೇನೆ: ಬಸವರಾಜ ಬೊಮ್ಮಾಯಿ
ಬೆಂಗಳೂರು ಸೆಪ್ಟಂಬರ್ 29, "ಹೃದಯದ ಆರೋಗ್ಯ ರಕ್ಷಣೆಗಾಗಿ ಇನ್ನು ಮುಂದೆ ದಿನನಿತ್ಯ ಅರ್ಧ ತಾಸು ಬಿರುಸಿನ ನಡಿಗೆ ಮಾಡುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶ್ವ ಆರೋಗ್ಯ ದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಅವರು ಮಾತನಾಡಿದರು. ನಂತರ ವಿಧಾನಸೌಧದಿಂದ ಕಬ್ಬನ್ ಉದ್ಯಾನ ಮಾರ್ಗವಾಗಿ ಕಂಠೀರವ ಕ್ರೀಡಾಂಗಣದವರೆಗೂ ಬಿರುಸಿನ ನಡಿಗೆಯ ಮೂಲಕವೇ ತೆರಳಿದರು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮತ್ತು ಸಂಸದ ಪಿ.ಸಿ. ಮೋಹನ್ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಹೃದಯದ ಆರೋಗ್ಯಕ್ಕೆ ನಡಿಗೆ ತುಂಬಾ ಅವಶ್ಯಕ ಎಂಬುದನ್ನು ವೈದ್ಯರು ಹೇಳುತ್ತಾರೆ. ಅದರಂತೆ ಪ್ರತಿಯೊಬ್ಬರೂ ಸಹ ನಿತ್ಯ ನಡಿಗೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಾನೂ ಯಾವಾಗಲಾದರೂ ಒಮ್ಮೆ ವಾಕಿಂಗ್ ಮಾಡುತ್ತಿದ್ದೆ. ಆದರೆ, ಇಂದಿನಿಂದ ನಿಯಮಿತವಾಗಿ ಮಾಡುತ್ತೇನೆ. ಹೊರಗಡೆ ಬಂದು ವಾಕಿಂಗ್ ಮಾಡುವುದು ಸಾಧ್ಯ ಆಗದಿದ್ದಾಗ ಮನೆಯಲ್ಲಿಯೇ ವಾಕರ್‌ನಲ್ಲಿ ಕನಿಷ್ಟ ಅರ್ಧತಾಸು ನಡೆಯುವಂತಹ ಪ್ರತಿಜ್ಞೆ ಮಾಡಿದ್ದೇನೆ ಎಂದು ಹೇಳಿದರು.

ಮನುಷ್ಯನಿಗೆ ಹೃದಯ ಬಹುಮುಖ್ಯವಾದ ಅಂಗ. ನಿರಂತರವಾಗಿ ಬಡಿಯತ್ತಿರಬೇಕಾದರೆ ಮನುಷ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗಿರಬೇಕಾಗುತ್ತದೆ. ಹೃದಯಕ್ಕೆ ಮಾನಸಿಕ ಆರೋಗ್ಯವೂ ಮುಖ್ಯ. ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಮಾನಸಿಕ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಆರೋಗ್ಯಪೂರ್ಣ ಕರ್ನಾಟಕ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಗಮನಕೊಡಬೇಕು ಎಂದರು.
ಇದಕ್ಕೂ ಮುನ್ನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಜ್ಞಾ ವಿಧಿಯಲ್ಲಿ, ಹೃದಯದಿಂದ ಬಾಂಧವ್ಯ ಬೆಸೆಯೋಣ ಎಂಬ ಘೋಷವಾಕ್ಯದಡಿ, "ಬಿರುಸಿನ ನಡಿಗೆ ಆರೋಗ್ಯದ ಕಡೆಗೆ" ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ತಲುಪಿದರು. ಸಾಂಕ್ರಾಮಿಕ ರೋಗದಿಂದ ಸಂಭವಿಸುವ ಮರಣಗಳಲ್ಲಿ ಶೇ.25ರಷ್ಟು ಹೃದ್ರೋಗದಿಂದಲೇ ಸಂಭವಿಸುತ್ತವೆ. ಹೀಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು" ಎಂದರು.

ಸಾಂಕ್ರಾಮಿಕ ರೋಗಗಳಿಂದ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಶೇ.25ರಷ್ಟು ಸಾವುಗಳು ಹೃದ್ರೋಗದಿಂದಲೇ ಸಂಭವಿಸುತ್ತವೆ ಎಂದು ವೈದ್ಯಕೀಯ ದಾಖಲೆಗಳು ಹೇಳುತ್ತವೆ. ಈ ಕಾರಣದಿಂದ ಹೃದಯದ ಕಡೆಗೆ ಎಲ್ಲರೂ ಹೆಚ್ಚಿನ ಗಮನ ನೀಡಬೇಕು. ಆರೋಗ್ಯಪೂರ್ಣ ಸಮಾಜ ಕಟ್ಟಲು ಎಲ್ಲರೂ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಅಕ್ಟೋಬರ್ 1 ಹಿರಿಯ ನಾಗರಿಕರ ದಿನ ಇದೆ. 2020- 2030 ವಿಶ್ವ ಹಿರಿಯ ನಾಗರಿಕರ ದಶಕ ಎಂದು ಘೋಷಿಸಲಾಗಿದೆ. 60 ವರ್ಷ ತುಂಬಿದ ಎಲ್ಲರೂ ದೀರ್ಘಾವಧಿ ಬದುಕಲು ಅವರ ಆರೋಗ್ಯ ತಪಾಸಣೆ ನಿರಂತರವಾಗಿ ನಡೆಯಬೇಕು. ಅವರೂ ಸಹ ಗೌರವಯುತವಾಗಿ ತಮ್ಮ ಬದುಕನ್ನು ನಡೆಸಲು ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಪ್ರತಿಜ್ಞಾ ವಿಧಿ:
ಪ್ರತಿಜ್ಞಾ ವಿಧಿ ಬೋಧಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, "ನನ್ನ ಹೃದಯದ ಆರೋಗ್ಯಕ್ಕಾಗಿ ನನ್ನ ಸಾಮರ್ಥ್ಯ ಅನುಸಾರ ಶ್ರಮ ಜೀವನ ಅನುಸರಿಸುತ್ತೇನೆ. ಮತ್ತು ನನ್ನ ಕುಟುಂಬದ ಸದಸ್ಯರನ್ನು ಸ್ನೇಹಿತರನ್ನು ಸಹೋದ್ಯೋಗಿಗಳನ್ನು ನನ್ನ ಸಂಪರ್ಕದಲ್ಲಿ ಇರುವ ಐದು ಜನರನ್ನಾದರೂ ನಿತ್ಯ ನಡಿಗೆಗೆ ಪ್ರೇರೇಪಿಸುತ್ತೇನೆ. ವಾರದಲ್ಲಿ ಕನಿಷ್ಠ 150 ನಿಮಿಷ ನಡೆಯಲು ಸನ್ನದ್ಧನಾಗಿದ್ದೇನೆ" ಎಂದುರು.
ಹೃದಯ ಆರೋಗ್ಯದ ಕುರಿತು ಸಂಪರರ್ಣ ಮಾಹಿತಿ ಹೊಂದಿರುವಂತಹ ಎನ್.ಸಿ.ಡಿ. ಆರೋಗ್ಯ ತಪಾಸಣಾ ಪುಸ್ತಕವನ್ನೂ ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಆರೋಗ್ಯದ ಕುರಿತು ಜಾಗೃತಿ ಮೂಡಲು ಹೊರಟ ವಾಹನಗಳಿಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಠೀರವ ಕ್ರೀಡಾಂಣದ ಬಳಿ ಚಾಲನೆ ನೀಡಿದರು.












Click it and Unblock the Notifications