ಕರ್ನಾಟಕ; ಎಲ್ಲಾ ನ್ಯಾಯಾಲಯದ ಸಮಯಗಳ ಪರಿಷ್ಕರಣೆ

ಬೆಂಗಳೂರು, ಜನವರಿ 01 : ಕರ್ನಾಟಕದ ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಕಲಾಪಗಳು ಆರಂಭವಾಗಲಿವೆ.

ಡಿಸೆಂಬರ್ 18, 2019ರಂದು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಕರ್ನಾಟಕ ಹೈಕೋರ್ಟ್ ಒಪ್ಪಿಗೆ ನೀಡಿದೆ. 2020ರ ಜನವರಿ 1ರಿಂದಲೇ ಅನ್ವಯವಾಗುವಂತೆ ನ್ಯಾಯಾಲಯ ಕಾರ್ಯ ಕಲಾಪಗಳ ಸಮಯಗಳನ್ನು ಪರಿಷ್ಕರಣೆ ಮಾಡಲಾಗಿದೆ.

ಒಟ್ಟು 2 ಹಂತದಲ್ಲಿ ನ್ಯಾಯಾಲಯದ ಕಲಾಪಗಳನ್ನು ವಿಭಾಗಿಸಲಾಗಿದೆ. ಮಧ್ಯಾಹ್ನ 2 ರಿಂದ 2.45ರ ತನಕ ಊಟದ ಸಮಯವಾಗಿರುತ್ತದೆ. ಬುಧವಾರದಿಂದಲೇ ಈ ವೇಳಾಪಟ್ಟಿ ಜಾರಿಗೆ ಬರಲಿದೆ. ಬೆಳಗ್ಗೆ 11ಕ್ಕೆ ನ್ಯಾಯಾಲಯದ ಕಲಾಪ ಆರಂಭಗೊಳ್ಳಲಿದೆ.

law

ವೇಳಾಪಟ್ಟಿ ಹೀಗಿದೆ

* ಬೆಳಗ್ಗೆ 11 ರಿಂದ 2 ಮೊದಲ ಹಂತದ ಕಲಾಪ
* ಮಧ್ಯಾಹ್ನ 2 ರಿಂದ 2.45 ಊಟದ ವಿರಾಮ
* 2.45 ರಿಂದ 5.45 ಎರಡನೇ ಹಂತದ ಕಲಾಪ

ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಸಿಬ್ಬಂದಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ಕೆಲಸ ಮಾಡಬೇಕಿದೆ. ಮಧ್ಯಾಹ್ನ 2 ರಿಂದ 2.45ರ ತನಕ ಊಟದ ವಿರಾಮ ಇರುತ್ತದೆ.

ಪ್ರತಿ ತಿಂಗಳ 4ನೇ ಶನಿವಾರ ಅರ್ಧದಿನ ಮಾತ್ರ ನ್ಯಾಯಾಲಯಗಳು ಕಾರ್ಯ ನಿರ್ವಹಣೆ ಮಾಡಲಿವೆ. ಆದರೆ, ಅಂದು ಯಾವುದೇ ಪ್ರಕರಣಗಳ ವಿಚಾರಣೆ ನಡೆಯುವುದಿಲ್ಲ.

Juducial offcers ಮೂರನೇ ಶನಿವಾರದ ಬದಲು 4ನೇ ಶನಿವಾರದ ಅರ್ಧ ದಿನವನ್ನು ನ್ಯಾಯಾಲಯದ ಪರಿಶೀಲನೆ, ಜೈಲುಗಳ ಭೇಟಿಗೆ ಬಳಸಿಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+