Video Viral: ಬಸ್‌ನಲ್ಲಿ ಮಹಿಳೆಗೆ ಕಿರುಕುಳ ಆರೋಪ, ವ್ಯಕ್ತಿಗೆ ಚಪ್ಪಲಿ ಏಟು! ಹೆಣ್ಣುಮಕ್ಕಳಿಗೆ ಬಸ್ ಸುರಕ್ಷಿತವೇ?

ಬೆಂಗಳೂರು: ಮಹಿಳೆಯರು ಬಸ್‌ನಲ್ಲಿ ಹೊರಟರೂ ಸಹಿತ ಅವರಿಗೆ ಸುರಕ್ಷಿತೇ ಇಲ್ಲದಂತಾಗಿದೆ? ಎಂಬ ಪ್ರಶ್ನೆ ಮೂಡಿದೆ. ಕಾರಣ ಬಸ್‌ನಲ್ಲಿ ಸಂಚರಿಸುವಾಗ ವ್ಯಕ್ತಿಯೊಬ್ಬರಿಂದ ಸಹ ಮಹಿಳಾ ಪ್ರಯಾಣಿಕಳ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ. ತಾನೊಬ್ಬ ಸಾರಿಗೆ ಸಿಬ್ಬಂದಿ ಎನ್ನುತ್ತಿದ್ದಂತೆ ಅಲ್ಲಿದ್ದವರು ಚಪ್ಪಲಿಯಿಂದ ಗೂಸಾ ಕೊಟ್ಟಿದ್ದಾರೆ. ಬಸ್‌ನಲ್ಲಿ ನಡೆದ ಈ ಗಲಾಟೆಯ ವಿಡಿಯೋ ವೈರಲ್ ಆಗಿದ್ದು, ಇದು ಮಹಿಳೆಯರ ಸುರಕ್ಷತೆ ಕುರಿತು ಕಳವಳ ಹುಟ್ಟು ಹಾಕಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ಬಳಿ ಸಂಚರಿಸುವ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಕ್ಸ್‌ ಖಾತೆಯಲ್ಲಿ @karnatakaportf ಹ್ಯಾಂಡಲ್‌ನಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಇಂತಹ ಅನೇಕ ಘಟನೆಗಳು ನಡೆದರೂ ಅಹಿತ ಕೆಲವರು ಬುದ್ಧಿ ಕಲಿಯದೇ ಸುಖಾಸುಮ್ಮನೆ ಹೆಣ್ಣುಮಕ್ಕಳನ್ನು ಕೆಣಕುತ್ತಿದ್ದಾರೆ. ಇಂತಹ ಜನರನ್ನು ಚಪ್ಪಲಿಯಿಂದ ಹೊಡೆದರೂ, ಅವರು ಇನ್ನೂ ಪಾಠ ಕಲಿಯುತ್ತಿಲ್ಲ. ದಿನೇ ದಿನೇ ಸಾರ್ವಜನಿಕ ಬಸ್‌ಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

Women Harassed on Bus

ಚಪ್ಪಲಿಯಿಂದ ಏಟು ತಿಂದ ವ್ಯಕ್ತಿ

ಸಾಮಾನ್ಯವಾಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಮಹಿಳೆಯರೊಂದಿಗೆ ಗೌರವಯುತವಾಗಿ ವರ್ತಿಸಬೇಕು. ಈ ರೀತಿ ಆದರೆ ಮಹಿಳೆಯರು ಅಸುರಕ್ಷಿತರೆಂಬ ಭಾವನೆ ಮೂಡುತ್ತದೆ. ಸದರಿ ಘಟನೆಯಲ್ಲಿ ಒಬ್ಬ ವ್ಯಕ್ತಿ ಬಸ್‌ನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂಬ ಆರೋಪಕ್ಕೆ ಸಹ ಪ್ರಯಾಣಿಕರ ಆತನನ್ನು ಪ್ರಶ್ನಿಸಿದ್ದಾರೆ. ಬಳಿಕ ಮಹಿಳೆ ಆತನ ಕೃತ್ಯ ಕುರಿತು ತಿಳಿಸಿದ್ದಾರೆ. ನಡೆದ ಘಟನೆ ಸಂಪೂರ್ಣವಾಗಿ ತಿಳಿಯುತ್ತಿದ್ದಂತೆ ಬಸ್‌ನಲ್ಲಿದ್ದವರು ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಫೇಕ್ ಫುಡ್ ಡೆಲಿವರಿ ಮಾಡಿ ಸಿಕ್ಕಿಬಿದ್ದ ಜೊಮ್ಯಾಟೊ ಬಾಯ್: ಸಿಸಿಟಿವಿ ವಿಡಿಯೋ ವೈರಲ್
ಫೇಕ್ ಫುಡ್ ಡೆಲಿವರಿ ಮಾಡಿ ಸಿಕ್ಕಿಬಿದ್ದ ಜೊಮ್ಯಾಟೊ ಬಾಯ್: ಸಿಸಿಟಿವಿ ವಿಡಿಯೋ ವೈರಲ್

ಇದಷ್ಟೇ ಅಲ್ಲದೇ ಆತ ಸಾರಿಗೆ ಸಿಬ್ಬಂದಿ ಎಂದು ಕಂಡಕ್ಟರ್‌ಗೆ ಸುಳ್ಳು ಹೇಳಿಕೊಂಡು ಬಸ್‌ ಹತ್ತಿದ್ದಾನೆ. ಈ ಬಗ್ಗೆ ಗೊತ್ತಾಗುತ್ತಿದ್ದಂತೆ ಆತನನ್ನು ಜನರು ಹಾಗೂ ನಿರ್ವಾಹಕ ತರಾಟೆಗೆ ತೆಗೆದುಕೊಂಡಿದ್ದಾರೆ. ಶರ್ಟ್ ಕಾಲರ್ ಹಿಡಿದು ಎಳೆದಾಡಿದ್ದಾರೆ. ಇಂಥದ್ದೆ ಘಟನೆ ಸೋಲೂರಿನಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು, ಇದೀಗ ಕುಣಿಗಲ್ ನಂತರ ಬಿಳ ಮತ್ತದೇ ಘಟನೆ ನಡೆದಿದೆ.

ತಪ್ಪಿಸಿಕೊಳ್ಳಲು ವ್ಯಕ್ತಿ ಯತ್ನ

ಮಹಿಳೆ, ನಿರ್ವಾಹಕ ಮತ್ತು ಸಹ ಪ್ರಯಾಣಿಕರು ತನ್ನ ಮೇಲೆ ಕೋಪಗೊಂಡಿದ್ದಾರೆಂದು ತಿಳಿಯುತ್ತಿದ್ದಂತೆ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಮಹಿಳೆಯ ಪತಿ ಅವನನ್ನು ಓಡಿಹೋಗಲು ಬಿಡದೇ ಹಿಡಿದುಕೊಂಡಿದ್ದರು. ವ್ಯಕ್ತಿಯ ಅವಮಾನಕರ ನಡವಳಿಕೆಗೆ ಪತಿ ಸಹ ಆಕ್ರೋಶ ಹೊರ ಹಾಕಿದ್ದಾರೆ. ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಗಳು ಮರುಕಳಿಸಬಾರರು. ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡಬೇಕು.

ಆದರೆ ಇತ್ತೀಚೆಗೆ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಇಂತಹ ಕೇಸ್‌ಗಳು ಬಸ್‌, ಮೆಟ್ರೋ, ರೈಲುಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಇವು ಮರುಕಳಿಸಬಾರದೆಂದರೆ ಸದರಿ ಬಸ್ ನಲ್ಲಿ ಧರ್ಮದೇಟು ತಿಂದ ವ್ಯಕ್ತಿ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಬೇಕು. ಅಂದಾಗಲೇ ಮಹಿಳೆಯರು ಸುರಕ್ಷಿತವಾಗಿ ಸಂಚಾರ ಮಾಡಲು ಸಾಧ್ಯವೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+