Women Free Travel: ಸರ್ಕಾರಿ ಬಸ್‌ಗಳ ಕೊರತೆ ಆಗದಂತೆ ಸೂಕ್ತ ಕ್ರಮ: ರಾಮಲಿಂಗಾರೆಡ್ಡಿ
ಬೆಂಗಳೂರು, ಜೂನ್ 11: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಭರವಸೆಗಳ ಪೈಕಿ ಒಂದಾಗಿರುವ 'ಶಕ್ತಿ ಯೋಜನೆ' ಇಂದು ಭಾನುವಾರ ಚಾಲನೆ ಸಿಕ್ಕಿದ್ದು, ಇಂದಿನಿಂದ ಮಹಿಳೆಯುರು ರಾಜ್ಯದಲ್ಲಿ ಉಚಿತವಾಗಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಸಂಚರಿಸಲಿದ್ದಾರೆ. ಎಲ್ಲೆಲ್ಲಿ ಬಸ್‌ಗಳ ಕೊರತೆ ಇದೆಯೆ ಗಮನಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಿಧಾನಸೌಧ ಮುಂದೆ ಸರ್ಕಾರದ 'ಶಕ್ತಿ ಯೋಜನೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉಚಿತ ಪ್ರಯಾಣ ಯೋಜನೆಯಾದ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ ಸುದ್ದಿಗಾರರಿಗೆ ಸಚಿವರು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಕೊರತೆಯಿರುವ ಕಡೆ ಬಸ್ಸುಗಳ ಸಂಖ್ಯೆಯನ್ನು ಶೀಘ್ರವೇ ಹೆಚ್ಚಿಸಲಾಗುವುದು. ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಮೂರು ತಿಂಗಳ ಕಾಲಾವಕಾಶವಿದೆ. ಸ್ಮಾರ್ಟ್ ಪಾಸ್‌ಗಳು ಯಾವುದೇ ಗೌಪ್ಯತೆಯನ್ನು ಉಲ್ಲಂಘಿಸುವಂತಿಲ್ಲ. ರಾಜ್ಯದ ಮಹಿಳೆಯರ ಸುಲಭ ಮತ್ತು ಸುರಕ್ಷತೆಯ ಪ್ರಯಾಣವೇ ಕಾಂಗ್ರೆಸ್ ಸರ್ಕಾರ ಗುರಿಯಾಗಿದೆ ಎಂದರು.
ಖಾಸಗಿ ಬಸ್ ಗಳಲ್ಲಿಯೂ ಉಚಿತ ಪ್ರಯಾಣ ವಿಸ್ತರಣೆ/ಫ್ರೀ ಟಿಕೆಟ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಸಂಬಂಧ ಸಚಿವರು ಸ್ಪಷ್ಟನೆ ನೀಡಿದರು. ಖಾಸಗಿ ಬಸ್‌ಗಳಿಗೆ ಮಹಿಳೆಯ ಉಚಿತ ಪ್ರಯಾಣಿ ಸೇವೆ ಕೊಡುವ ಚಿಂತನೆ ನಮ್ಮ ಮುಂದಿಲ್ಲ ಎಂದರು.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಓಡಾಟ ಏರಿಕೆ?
ಇನ್ನು ಮುಂದೆ ಮಹಿಳೆಯರು ಶಕ್ತಿ ಯೋಜನೆ ಭಾಗವಾಗಿ ಹೆಚ್ಚು ಸರ್ಕಾರಿ ಸಾರಿಗೆಯನ್ನೇ ಅವಲಂಬಿಸಲಿದ್ದಾರೆ. ಬೆಂಗಳೂರಿನ ಮೆಟ್ರೋ, ಖಾಸಗಿ ಸಾರಿಗೆ, ಆಟೋಗಳಲ್ಲಿ ಇನ್ನಿತರ ವಾಹನಗಳಲ್ಲಿ ಸಂಚಾರ ಕಡಿಮೆಯಾಗುತ್ತದೆ ಎನ್ನಲಾಗಿದೆ. ಆದರೆ ಬಸ್ ಕೊರತೆ ಉಂಟಾಗಬಹದು ಎಂದು ಉಂಟಾಗಿದ್ದ ಆತಂಕವನ್ನು ಸದ್ಯಕ್ಕೆ ಸಚಿವರು ದೂರಾಗಿಸಿದ್ದಾರೆ.
ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನೀಡಿದ ಎಲ್ಲ ಐದು ಗ್ಯಾರಂಟಿ ಕಾರ್ಯಕ್ರಮಗಳು ಸರ್ಕಾರ ರಚನೆ ಬಳಿಕ ಒಂದೊಂದಾಗೇ ಯಶಸ್ವಿಯಾಗಿ ಆಗುತ್ತಿವೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಆಯಾ ಶಾಸಕರು, ಸಂಸದರ ಸಮ್ಮುಖದಲ್ಲಿ ಏಕಾಕಲದಲ್ಲಿ ಚಾಲನೆ ನೀಡಲಿದ್ದಾರೆ. ಸದ್ಯ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಿಂದ ಮೆಜೆಸ್ಟಿಕ್‌ಗೆ ಆಗಮಿಸುತ್ತಾರೆ. ಸರ್ಕಾರವು ಆದಷ್ಟು ಬೇಗ ಅರ್ಹ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದೆ. ಸೇವಾ ಸಿಂಧು ಪೋರ್ಟಲ್ ಸರ್ವರ್ ನಿಧಾನವಾದರೆ, ಪರ್ಯಾಯ ವ್ಯವಸ್ಥೆ ಸಹ ಮಾಡಿಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಯಾವ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನೆರೆರಾಜ್ಯದಲ್ಲೂ 20km ಉಚಿತ ಪ್ರಯಾಣ
ಶಕ್ತಿ ಯೋಜನೆ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ರಾಜ್ಯದಲ್ಲಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಓಡಾಡಿದಂತೆ ಷರತ್ತ ಅನ್ವಯದಲ್ಲಿ ನೆರೆ ರಾಜ್ಯದಲ್ಲೂ 20 ಕಿಲೋ ಮೀಟರ್ ಓಡಾಡಲು ಅವಕಾಶ ನೀಡಿರುವುದಾಗಿ ತಿಳಿಸಿದ್ದಾರೆ.
ಅಂದರೆ ಬಳ್ಳಾರಿಯಿಂದ ಒಬ್ಬ ಮಹಿಳೆ ಆಂಧ್ರಪ್ರದೇಶಕ್ಕೆ ತೆರಳಿದರೆ, ನಮ್ಮ ರಾಜ್ಯದ ಬಸ್‌ನಲ್ಲಿಯೇ ಆಂಧ್ರ ಗಡಿಯಿಂದ ಸುಮಾರು 20 ಕಿಲೋ ಮೀಟರ್ ಉಚಿತವಾಗಿ ತೆರಳಬಹುದು. ನಂತರ ಅಲ್ಲಿನ ಬಸ್ ಹಿಡಿದು ತಮ್ಮ ಸ್ಥಳಕ್ಕೆ ಹೋಗಬಹುದು. ಈ ಉಚಿತ ಬಸ್ ಪ್ರಯಾಣ ಸೇವೆ ನೆರೆ ರಾಜ್ಯಗಳಿಗೆ ಅನ್ವಯವಾಗದು ಷರತ್ತಿನ ಕುರಿತು ಎಂದು ಅವು ಹೇಳಿದರು.












Click it and Unblock the Notifications