• search

ತೊಟ್ಟಿಗೆ ನವಜಾತ ಕಂದಮ್ಮನ ಬಿಸಾಕಿದ ನಿರ್ದಯಿ ಮಹಿಳೆ

By ಮೈಸೂರು ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮಂಡ್ಯ, ಅಕ್ಟೋಬರ್ 27 : ಅವಳು ಸಮಾಜಕ್ಕೆ ಕಂಗೆಣ್ಣಿಗೆ ಹೆದರಿ ತನ್ನ ಕರುಳಬಳ್ಳಿಯನ್ನೇ ಕಸದ ಬುಟ್ಟಿಗೆ ಎಸೆದು ಕ್ರೂರತನ ಮೆರೆದಿದ್ದಾಳೆ.

  ಮಂಡ್ಯದ ತಾವರೆಗೆರೆ ಬಡಾವಣೆಯಲ್ಲಿರುವ ಎಸ್.ಬಿ. ಸಮುದಾಯ ಭವನದ ಬಳಿ ಯುವಕನೊಬ್ಬನ ಜೊತೆ ಬೈಕ್‌ನಲ್ಲಿ ಬಂದ ಮಹಿಳೆಯೊಬ್ಬಳು ಕಸದ ತೊಟ್ಟಿಗೆ ವ್ಯಾನಿಟಿ ಬ್ಯಾಗ್‌ನ್ನು ಎಸೆದು ಹೋಗಿದ್ದಾಳೆ. ಕಸದ ತೊಟ್ಟಿಗೆ ವ್ಯಾನಿಟಿ ಬ್ಯಾಗ್‌ನ್ನು ಎಸೆದಿದ್ದನ್ನು ಕಂಡ ಹುಡುಗನೊಬ್ಬ ಅದರಲ್ಲೇನಿದೆ ಎಂದು ಕುತೂಹಲದಿಂದ ನೋಡಿದ್ದಾನೆ. ಆದರೆ ಅದರೊಳಗೆ ಆಗ ತಾನೆ ಹುಟ್ಟಿದ ನವಜಾತ ಗಂಡು ಶಿಶು ಇರುವುದನ್ನು ಕಂಡು ಅವನು ಬೆಚ್ಚಿ ಬಿದ್ದಿದ್ದಾನೆ.

  ಆದರೆ ಅಷ್ಟರಲ್ಲೇ ವ್ಯಾನಿಟಿ ಬ್ಯಾಗ್ ಎಸೆದಿದ್ದ ಮಹಿಳೆ ಮತ್ತು ಆ ಯುವಕ ಕಣ್ಮರೆಯಾಗಿದ್ದಳು. ಕಣ್ಣಾರೆ ಕಂಡ ಘಟನೆಯಿಂದ ವಿಚಲಿತನಾದ ಹುಡುಗ ವಿಷಯವನ್ನು ಸುತ್ತಮುತ್ತಲಿನವರಿಗೆ ತಿಳಿಸಿದ್ದಾನೆ. ಅಲ್ಲಿ ಜನ ಜಾತ್ರೆ ಸೇರಿದೆ. ಹೆಂಗಸರು ಮಗು ಎಸೆದ ತಾಯಿಗೆ ಮತ್ತು ಮಗುವಿನ ಜನ್ಮಕ್ಕೆ ಕಾರಣವಾದ ಪುರುಷನಿಗೆ ಜನ ಬಾಯಿಗೆ ಬಂದಂತೆ ಹಿಡಿ ಶಾಪ ಹಾಕಿದ್ದಾರೆ. [ವ್ಯಭಿಚಾರಿ ಹೆಂಡತಿಗೆ ಜೀವನಾಂಶ ಇಲ್ಲ]

  Women dumps new born child in the corporation bin in Mandya

  ಕಣ್ಣಾರೆ ಕಂಡ ಹುಡುಗ ಹೇಳುವಂತೆ ನಾನು ನಾಯಿಯೊಂದಿಗೆ ವಾಯುವಿಹಾರ ನಡೆಸುತ್ತಿದ್ದೆ ಆಗ ಯುವಕನೊಂದಿಗೆ ಬೈಕ್‌ನಲ್ಲಿ ಬಂದ ಮಹಿಳೆಯೊಬ್ಬಳು ಪಿಂಕ್ ಬಣ್ಣದ ವ್ಯಾನಿಟಿ ಬ್ಯಾಗನ್ನು ಕಸದ ತೊಟ್ಟಿಯಲ್ಲಿ ಹಾಕಿ ಪರಾರಿಯಾದರು. ನಾನು ಸ್ಥಳಕ್ಕೆ ಹೋಗಿ ನೋಡಿದಾಗ ವ್ಯಾನಿಟಿ ಬ್ಯಾಗ್‌ನಲ್ಲಿ ಮಗು ಇತ್ತು.

  ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ವಶಕ್ಕೆ ಪಡೆದು ಮಿಮ್ಸ್ ಆಸ್ಪತ್ರೆಯ ಶಿಶು ಆರೋಗ್ಯ ಘಟಕ್ಕೆ ರವಾನಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ಠಾಣೆ ಪೊಲೀಸರು ಶಿಶುವನ್ನು ಎಸೆದ ಮಹಿಳೆ ಮತ್ತು ಆ ಪುರುಷನಿಗಾಗಿ ಶೋಧ ಕೈಗೊಂಡಿದ್ದಾರೆ. [ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  An unidentified woman has dumped a newborn child in the corporation bin. The incident has happened in Mandya city on Monday. The woman came on bike with a man and threw the bag in which newborn child was there. The child has been admitted to VIMS hospital.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more