Health Tips: ಚಳಿಗಾಲದಲ್ಲಿ ಜ್ವರ-ಉಸಿರಾಟ ಸಮಸ್ಯೆಯಿಂದ ದೂರವಿರಲು ವೈದ್ಯರ 5 ಸಲಹೆಗಳು
ಬೆಂಗಳೂರು: ಚಳಿಗಾಲದಲ್ಲಿ ಕೆಮ್ಮು, ಶೀತ ಮತ್ತು ಜ್ವರ (ಫ್ಲೂ) ಹಾಗೂ ಉಸಿರಾಟ ಸಮಸ್ಯೆ (ನ್ಯುಮೋನಿಯಾ)ಯ ಸೋಂಕುಗಳು ಎಲ್ಲಾ ಕಡೆ ಕಾಣಿಸಿಕೊಳ್ಳುತ್ತವೆ. ಸುತ್ತಮುತ್ತ ಇರುವವರಲ್ಲಿ ಯಾರಾದರೊಬ್ಬರು ಕೆಮ್ಮು, ಶೀತದಿಂದ ಬಳಲುತ್ತಿರುವುದನ್ನು ನೀವು ಗಮನಿಸಿರಬಹುದು ಇಲ್ಲವೇ ನೀವೇ ಆ ಬಾಧೆಗೆ ಒಳಗಾಗಿರಬಹುದು. ಅದು ಯಾಕೆಂದರೆ ಶೀತ ವಾತಾವರಣದಲ್ಲಿ ವೈರಸ್‌ಗಳ ಹರಡುವಿಕೆ ಸುಲಭ. ಹಾಗಾಗಿ ಈ ಸಮಯದಲ್ಲಿ ಹೆಚ್ಚು ಜನರು ಕಾಯಿಲೆಗೆ ತುತ್ತಾಗಬಹುದು. ಹಾಗಂತ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಆಗಾಗ್ಗೆ ಕೈ ತೊಳೆಯುವುದು, ಉತ್ತಮ ಆಹಾರ ಸೇವನೆ ಮತ್ತು ದೇಹವನ್ನು ಬೆಚ್ಚಗಿರಿಸಿಕೊಳ್ಳುವಂತಹ ಸರಳ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಮತ್ತು ನಿಮ್ಮ ಕುಟುಂಬವನ್ನು ಈ ಕಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು.
ಅನೇಕ ಲಕ್ಷಣಗಳು ಒಂದೇ ರೀತಿ ಇರುವುದರಿಂದ, ಅದು ಸಾಮಾನ್ಯ ಜ್ವರ ಅಥವಾ ಅದಕ್ಕಿಂತ ಗಂಭೀರವಾದ ಕಾಯಿಲೆಯೇ ಎಂದು ಪತ್ತೆ ಹಚ್ಚುವುದು ಕಷ್ಟವಾಗಬಹುದು. ಜ್ವರ, ಕೆಮ್ಮು, ಆಯಾಸ, ಗಂಟಲು ನೋವು, ಮೈಕೈ ನೋವು ಮತ್ತು ಉಸಿರಾಟದ ತೊಂದರೆ ಇವೆಲ್ಲವೂ ಜ್ವರ ಅಥವಾ ನ್ಯುಮೋನಿಯಾದಂತಹ ಉಸಿರಾಟದ ಸೋಂಕಿನ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳು ಮುಂದುವರಿದರೆ ಅಥವಾ ಉಲ್ಬಣಗೊಂಡರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ದೆಹಲಿಯ ಡಾ. ಅರುಣ್ ವಾಧ್ವಾ ಕ್ಲಿನಿಕ್‌ನ ಮಕ್ಕಳ ತಜ್ಞರಾದ ಎಂಬಿಬಿಎಸ್, ಎಂಡಿ ಡಾ. ಅರುಣ್ ವಾಧ್ವಾ ಅವರು ಈ ಅವಧಿಯಲ್ಲಿ ನಿಖರವಾಗಿ ರೋಗ ನಿರ್ಣಯ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ. ಈ ಕುರಿತು ವಿವರವಾಗಿ ಮಾತನಾಡುವ ಅವರು, "ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿರುವಾಗ, ಚೇತರಿಸಿಕೊಳ್ಳಲು ಮತ್ತು ಮುಂದೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಲು ಸರಿಯಾಗಿ ರೋಗ ನಿರ್ಣಯ ಮಾಡುವುದು ಬಹಳ ಮುಖ್ಯ. ನಿಮಗೆ ಅನಾರೋಗ್ಯ ಅನ್ನಿಸಿದರೆ, ಅದನ್ನು ನಿರ್ಲಕ್ಷಿಸಬೇಡಿ. ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲು ತಕ್ಷಣ ವೈದ್ಯರನ್ನು ಸಂಪರ್ಕಿಸಿ" ಎಂದು ಹೇಳಿದರು.
ಸಕಾಲಿಕ ತಪಾಸಣೆಯ ಅಗತ್ಯತೆ
ನಮ್ಮ ಆಧುನಿಕ ಕಾಲದ ವೇಗದ ಜೀವನದಲ್ಲಿ, ಯಾರೂ ಅನಾರೋಗ್ಯದಿಂದ ಮನೆಯಲ್ಲಿ ಕೂರಲು ಬಯಸುವುದಿಲ್ಲ. ಇಲ್ಲಿ ' ರ‍್ಯಾಪಿಡ್ ಟೆಸ್ಟಿಂಗ್' (ತ್ವರಿತ ತಪಾಸಣೆ) ಪ್ರಮುಖ ಪಾತ್ರ ವಹಿಸುತ್ತದೆ, ಈ ತಪಾಸಣೆ ಜ್ವರ ಮತ್ತು ಉಸಿರಾಟ ಸಮಸ್ಯೆಯಂತಹ ಉಸಿರಾಟದ ಕಾಯಿಲೆಗಳನ್ನು ಪತ್ತೆಹಚ್ಚಲು ತ್ವರಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಬಾಟ್ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕರಾದ ಡಾ. ಸೋನು ಭಟ್ನಾಗರ್ ಅವರು ಸಕಾಲಿಕ ತಪಾಸಣೆಯ ಮಹತ್ವದ ಕುರಿತು ಮಾತನಾಡಿ, "ಉಸಿರಾಟದ ಸೋಂಕುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ತ್ವರಿತ ತಪಾಸಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ವಿವಿಧ ಉಸಿರಾಟದ ಕಾಯಿಲೆಗಳಿಗೆ ತ್ವರಿತ ತಪಾಸಣಾ ಆಯ್ಕೆಗಳು ಲಭ್ಯವಿವೆ. ಇವು ವೇಗವಾದ ಮತ್ತು ನಿಖರವಾದ ರೋಗ ನಿರ್ಣಯಕ್ಕೆ ಸಹಾಯ ಮಾಡುತ್ತವೆ" ಎಂದು ಹೇಳಿದರು.
ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ತೆಗೆದುಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಇಲ್ಲಿವೆ:
1. ತಪಾಸಣೆ ಮಾಡಿಸಿಕೊಳ್ಳಿ: ನಿಮಗೆ ಯಾವ ಕಾರಣಕ್ಕೆ ಅನಾರೋಗ್ಯ ಉಂಟಾಗುತ್ತಿದೆ ಎಂದು ತಿಳಿಯುವುದು ಗುಣಮುಖರಾಗಲು ಮೊದಲ ಹೆಜ್ಜೆಯಾಗಿದೆ. ನಿಮಗೆ ಉಸಿರಾಟದ ಸೋಂಕಿನ ಲಕ್ಷಣಗಳಿದ್ದರೆ, ನಿಮ್ಮ ವೈದ್ಯರೊಂದಿಗೆ ಮಾತನಾಡಿ ಮತ್ತು ತ್ವರಿತ ತಪಾಸಣೆ ಮಾಡಿ. ರ‍್ಯಾಪಿಡ್ ಟೆಸ್ಟ್ ಗಳು ತ್ವರಿತ ಉತ್ತರಗಳನ್ನು ನೀಡುತ್ತವೆ. ಇದರಿಂದ ವೈದ್ಯರು ಸರಿಯಾದ ಚಿಕಿತ್ಸೆಯನ್ನು ಆಯ್ಕೆ ಮಾಡಲು ಮತ್ತು ನೀವು ಬೇಗನೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.
2. ನಿಮ್ಮ ಸ್ಥಿತಿಯನ್ನು ಗಮನಿಸುತ್ತಿರಿ: ನಿಮ್ಮ ರೋಗ ಲಕ್ಷಣಗಳು ಮತ್ತು ಅವುಗಳ ತೀವ್ರತೆಯ ಮೇಲೆ ನಿಗಾ ಇಡಿ. ನಿಮ್ಮ ಜ್ವರ ಹೆಚ್ಚಾಗುತ್ತಿದ್ದರೆ ಅಥವಾ ಪರಿಸ್ಥಿತಿ ಹದಗೆಡುತ್ತಿದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
3. ಚಿಕಿತ್ಸೆ ಪಡೆಯಿರಿ: ಆರಂಭಿಕ ಹಂತದಲ್ಲಿ ಸೂಕ್ತ ರೋಗನಿರ್ಣಯ ಮಾಡಿದರೆ ನೀವು ತಕ್ಷಣ ಚಿಕಿತ್ಸೆಯನ್ನು ಪಡೆಯಬಹುದು. ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ವೈದ್ಯರು ಸೂಚಿಸಿದ ಔಷಧಿಗಳ ಸಂಪೂರ್ಣ ಕೋರ್ಸ್ ಮತ್ತು ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುವುದು ಅವಶ್ಯ.
4.ನಿಮ್ಮ ಬಗ್ಗೆ ಕಾಳಜಿ ವಹಿಸಿ: ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ಚೆನ್ನಾಗಿ ನಿದ್ರೆ ಮಾಡಿ. ಒತ್ತಡವಿಲ್ಲದೆ ಇರುವುದನ್ನು ರೂಢಿಸಿಕೊಳ್ಳಿ, ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಿ. ಉದಾಹರಣೆಗೆ ನೀರು, ಎಳನೀರು ಅಥವಾ ತಾಜಾ ಜ್ಯೂಸ್ ಕುಡಿಯುತ್ತಿರಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.
5.ಮನೆಯಲ್ಲೇ ಇರಿ: ನಿಮಗೆ ಅನಾರೋಗ್ಯದ ಲಕ್ಷಣಗಳಿದ್ದರೆ, ನೀವು ವಿಶ್ರಾಂತಿ ಪಡೆಯಲು ಮತ್ತು ಗುಣಮುಖರಾಗಲು ಮನೆಯಲ್ಲಿಯೇ ಇರಿ, ಇತರರಿಂದ ದೂರವಿರಿ. ಇದರಿಂದ ಸೋಂಕು ಇತರ ಜನರಿಗೆ ಹರಡದಂತೆ ತಡೆಯಲು ಸಹಾಯವಾಗುತ್ತದೆ.
ಚಳಿ ಹೆಚ್ಚಿರುವುದರಿಂದ ಹೆಚ್ಚು ಜಾಗರೂಕರಾಗಿರುವುದು ಮತ್ತು ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ನೀವು ಆರೋಗ್ಯವಾಗಿದ್ದಾಗ ಕೈ ತೊಳೆಯುವುದು, ಕಿಕ್ಕಿರಿದ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಅಂತರವನ್ನು ಕಾಯ್ದುಕೊಳ್ಳುವಂತಹ ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಫ್ಲೂ ಮತ್ತು ನ್ಯುಮೋನಿಯಾ ಲಸಿಕೆಗಳು ರಕ್ಷಣೆ ಪಡೆಯಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿವೆ. ಈ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಚಳಿಗಾಲದಲ್ಲಿ ಸುರಕ್ಷಿತವಾಗಿ ಇರಬಹುದು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಕೂಡ ಆರೋಗ್ಯವಾಗಿಡಬಹುದು. ನಿಮಗೆ ಚಳಿಗಾಲದ ಬೆಚ್ಚಗಿನ ಶುಭ ಹಾರೈಕೆಗಳು!
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications