ಬಿಜೆಪಿ ನಾಯಕರಿಗೆ ರಮಾನಾಥ್ ರೈ ಪ್ರಶ್ನೆಗಳೇನು?
ಬೆಂಗಳೂರು, ಸೆಪ್ಟೆಂಬರ್ 04 : 'ನಾನು ಜೈಲಿಗೆ ಹೋಗಿಲ್ಲ. ಗಣಿ ಹಗರಣದಲ್ಲಿ ಸಿಕ್ಕಿಬಿದ್ದಿಲ್ಲ. ನಾನೇಕೆ ರಾಜೀನಾಮೆ ನೀಡಬೇಕು' ಎಂದು ಬಂಟ್ವಾಳ ಶಾಸಕ, ಅರಣ್ಯ ಸಚಿವ ರಮಾನಾಥ್ ರೈ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಮಾನಾಥ್ ರೈ ಅವರು, 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯವಿದೆ. ಇಂತಹ ವೇಳೆಯಲ್ಲಿ ಬಿಜೆಪಿ ಮಂಗಳೂರು ಚಲೋ ಬೈಕ್ ಜಾಥಾ ಹಮ್ಮಿಕೊಂಡು ಸಾಮರಸ್ಯ ಕೆಡಿಸುವ ಪ್ರಯತ್ನ ಮಾಡುತ್ತಿದೆ' ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿ ಮುಖ್ಯಾಂಶಗಳು
* ನಾನು ಜೈಲಿಗೆ ಹೋಗಿ ಬಂದಿಲ್ಲ. ಗಣಿ ಹಗರಣದಲ್ಲಿ ಸಿಕ್ಕಿಬಿದ್ದಿಲ್ಲ. ಕುತಂತ್ರ ಮಾಡಿಯೂ ಇಲ್ಲ. ನಾನು ಏಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು?
* ದಕ್ಷಿಣ ಕನ್ನಡ ಎಂದರೆ ಬುದ್ಧಿವಂತರ ಜಿಲ್ಲೆ. ಆದರೆ, ಇತ್ತೀಚೆಗೆ ಕೆಲವು ಮತೀಯವಾದಿ ಶಕ್ತಿಗಳಿಂದ ಸಾಮರಸ್ಯಕ್ಕೆ ತೊಡಕಾಗಿದೆ. ಜಿಲ್ಲೆಯ ಬಗ್ಗೆ ಹೊರ ಜಗತ್ತಿನಲ್ಲಿ ಒಳ್ಳೆಯ ಅಭಿಪ್ರಾಯಗಳು ಈಗ ಇಲ್ಲ
* ಜಲೀಲ್, ಹರ್ಷದ್, ಶರತ್ ಮಡಿವಾಳ ಹತ್ಯೆಯಾಯಿತು. ಮೂರು ಪ್ರಕರಣಗಳ ಆರೋಪಿಗಳ ಬಂಧನವಾಗಿದೆ. ಈಗ ಜಿಲ್ಲೆ ಶಾಂತಿಯುತವಾಗಿದೆ.
* ಸೆ.12ರಂದು ಮಂಗಳೂರಿನಲ್ಲಿ ಸಾಮರಸ್ಯದ ನಡಿಗೆ ಆಯೋಜಿಸಿದ್ದೇವೆ. ಪರಂಗಿಪೇಟೆಯಿಂದ ಮಾಣಿಯವರೆಗೆ ನಡಿಗೆ ಹಮ್ಮಿಕೊಳ್ಳಲಾಗಿದೆ. ಹತ್ಯೆಗಳಲ್ಲಿ ಭಾಗವಹಿಸಿದ ಸಂಘಟನೆಗಳನ್ನು ಹೊರತುಪಡಿಸಿ ಬೇರೆಯವರಿಗೆ ಆಹ್ವಾನ ನೀಡಿದ್ದೇವೆ.
* ಪಿಎಫ್‌ಡಿಐ, ಕೆಎಫ್‌ಡಿಐ ಸಂಘಟನೆ ನಿಷೇಧಕ್ಕೆ ಬಿಜೆಪಿ ಆಗ್ರಹಿಸುತ್ತಿದೆ. ನಮ್ಮ ಮುಂದೆ ಆಗ್ರಹಿಸುವ ಬದಲು ಅವರು ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿ ಚಲೋ ಕಾರ್ಯಕ್ರಮ ಮಾಡಲಿ. ಆಗ ಸಂಘಟನೆಗಳ ನಿಷೇಧವಾಗಲಿದೆ.
* ಮಂಗಳೂರು ಬಿಜೆಪಿಯವರ ನಾಗ್ಪುರ ವಿದ್ದಂತೆ. ಅಲ್ಲಿ ಮತೀಯ ಕ್ಷೇತ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಅವರ ಉದ್ದೇಶಗಳು ಈಡೇರುವುದಿಲ್ಲ. ಇವರ ನಾಟಕ ನಡೆಯುವುದಿಲ್ಲ.












Click it and Unblock the Notifications