ಆ ಮಗುವಿನ ಮುಖ ನೋಡಿ ಕುಮಾರಸ್ವಾಮಿ ಭಾವುಕರಾಗಿದ್ದೇಕೆ?

Subscribe to Oneindia Kannada

ಬೆಂಗಳೂರು, ಫೆಬ್ರವರಿ 14: ಅದು ಆಟೋ, ಕ್ಯಾಬ್ ಚಾಲಕ ಮಾಲಕರೊಂದಿಗಿನ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿಯವರ ಸಂವಾದ; ಬೆಂಗಳೂರಿನ ಪುರಭವನದಲ್ಲಿ ನಡೆಯುತ್ತಿತ್ತು. ಅಲ್ಲಿಗೆ ಎಲ್ಲಾ ಆಟೋ ಚಾಲಕರಂತೆ ಆ ಇಬ್ಬರು ದಂಪತಿಗಳೂ ಬಂದರು. ಅವರ ಜತೆಗೊಂದು ಪುಟ್ಟ ಬಾಲಕಿ. ಆಕೆಯ ಮುಖವನ್ನು ಮಾಸ್ಕ್ ನಿಂದ ಮುಚ್ಚಲಾಗಿತ್ತು..

ಆಟೋ ಕ್ಯಾಬ್ ಚಾಲಕ ಮಾಲಿಕರೊಂದಿಗೆ ಗಂಭೀರವಾಗಿ ಸಂವಾದ ನಡೆಸುತ್ತಿದ್ದ ಕುಮಾರಸ್ವಾಮಿ ಆ ಬಾಲಕಿಯ ಮುಖವನ್ನೊಮ್ಮೆ ನೋಡಿ ಸುಮ್ಮನಾದರು; ಅವರಿಗೇನೂ ಅನ್ನಿಸಲಿಲ್ಲ. ಆದರೆ ಯಾವಾಗ ಆ ಬಾಲಕಿಯ ಮುಖದ ಮಾಸ್ಕ್ ತೆಗೆದರೋ ಕುಮಾರಸ್ವಾಮಿಯವರ ಕಣ್ಣುಗಳು ತೇವವಾದವು..

ಅಭಿವೃದ್ಧಿ ನೀಲನಕ್ಷೆ ರೆಡಿ, ಅಧಿಕಾರ ಸಿಕ್ಕರೆ ಅನುಷ್ಠಾನ:ಎಚ್‌ಡಿಕೆ

ಇಷ್ಟಕ್ಕೂ ಕುಮಾರಸ್ವಾಮಿ ಭಾವುಕತೆಗೆ ಜಾರಿದ್ದೇಕೆ? ಆ ಮಗುವನ್ನು ನೋಡಿದಾಗ ಅವರಿಗೆ ಅನಿಸಿದ್ದೇನು?

In Pics: ಆಟೋ, ಟ್ಯಾಕ್ಸಿ ಡ್ರೈವರ್ ಕುಟುಂಬದೊಂದಿಗೆ ಕುಮಾರಸ್ವಾಮಿ

ವರ್ಷ ಹಿಂದಿನ ಕಥೆ

ವರ್ಷ ಹಿಂದಿನ ಕಥೆ

ಈ ಕಥೆ ನಡೆದಿದ್ದು ಒಂದು ವರ್ಷದ ಕೆಳಗೆ. ಅಲ್ಲಿಗೆ ಬಂದಿದ್ದ ಮಗುವಿಗೆ ರೋಗ ನಿರೋಧಕ ಶಕ್ತಿ ಕ್ಷೀಣಿಸುವ ಕಾಯಿಲೆಯಿತ್ತು. ಇದಕ್ಕೆ ಚಿಕಿತ್ಸೆ ನೀಡಬೇಕಾದರೆ ಮೂವತ್ತು ಲಕ್ಷ ವೆಚ್ಚವಾಗಲಿದೆ. ಇಲ್ಲದಿದ್ದರೆ ನಿಮ್ಮ ಮಗು ಜೀವಂತವಾಗಿ ಉಳಿಯೋದು ಕಷ್ಟ ಎಂದು ವರ್ಷದ ಕೆಳಗೆ ವೈದ್ಯರು ಹೇಳಿದ್ದರು.

ಫೆ.17ರಂದು ಜೆಡಿಎಸ್‌ನಿಂದ ಐತಿಹಾಸಿಕ ಸಮಾವೇಶ

ಬಡ ಆಟೋ ಡ್ರೈವರ್

ಬಡ ಆಟೋ ಡ್ರೈವರ್

ಆ ಬಡ ಆಟೋ ಡ್ರೈವರ್ ದಂಪತಿಗಳಿಗೆ ವೈದ್ಯರ ಮಾತು ಕೇಳಿ ಆಕಾಶವೇ ಕಳಚಿ ತಲೆಗೆ ಬಿದ್ದಂತಹ ಅನುಭವ. ತಮ್ಮ ಬಂಧುಗಳು ಮಿತ್ರರು, ರಾಜಕಾರಣಿಗಳು, ಸಿನಿಮಾ ನಟರ ಮನೆಬಾಗಿಲಿಗೆ ಅಲೆದಾಡಿದರೂ ಲಕ್ಷ ರೂಪಾಯಿ ಹೊಂದಿಸೋಕು ಆ ಬಡ ಚಾಲಕ ಕುಟುಂಬಕ್ಕೆ ಸಾಧ್ಯವಾಗಲೇ ಇಲ್ಲ. ಇಡೀ ಕುಟುಂಬ ತಮ್ಮ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂತು.

ಸಹಾಯಕ್ಕಾಗಿ ಕುಮಾರಸ್ವಾಮಿಗೆ ಮೊರೆ

ಸಹಾಯಕ್ಕಾಗಿ ಕುಮಾರಸ್ವಾಮಿಗೆ ಮೊರೆ

ಸಾಕಷ್ಟು ಬಡವರಿಗೆ ಕುಮಾರಸ್ವಾಮಿಯವರು ಸಹಾಯ ಮಾಡಿದ್ದ ವಿಚಾರ ತಿಳಿದು ಕೊನೆಯ ಪ್ರಯತ್ನ ನೋಡೋಣ ಎಂಬ ಭರವಸೆ ಮೇಲೆ ಆ ದಂಪತಿಗಳು ಮಗುವಿನ‌ ಜತೆ ಕುಮಾರಸ್ವಾಮಿ ಮನೆಯತ್ತ ಹೆಜ್ಜೆ ಹಾಕಿದರು. ಮಗುವಿನ‌ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಅಂಗಲಾಚಿದರು.

ರೂ. 32 ಲಕ್ಷ ಖರ್ಚು

ರೂ. 32 ಲಕ್ಷ ಖರ್ಚು

ಆದರೆ ಚಿಕಿತ್ಸೆಗೆ ಬರೊಬ್ಬರಿ 30 ಲಕ್ಷ ರೂ. ಹಣ ಹೊಂದಿಸಬೇಕಿದ್ದರೂ ಆ ಮಗುವನ್ನು ನೋಡಿ ಕುಮಾರಸ್ವಾಮಿಯವರು ನಾನಿದ್ದೇನೆ ನಿಮ್ಮ ಮಗುವಿನ ಸಂಪೂರ್ಣ ಚಿಕಿತ್ಸೆಯ ಹೊಣೆ ನನ್ನದೇ ಎಂದು ಆಶ್ವಾಸನೆ ನೀಡಿದ್ದರು. ಮಾತ್ರವಲ್ಲ ಆ ಮಗುವಿನ ಚಿಕಿತ್ಸೆಗಾಗಿ ಹಂತ ಹಂತವಾಗಿ 32 ಲಕ್ಷ ವ್ಯಯ ಮಾಡಿದರು. ಸಾವಿನ ಅಂಚಿನಲ್ಲಿದ್ದ ಒಂದು ಬಡ ಆಟೋ ಚಾಲಕನ ಕುಟುಂಬದ ಮಗುವಿನ ಜೀವವನ್ನು ಉಳಿಸಿದರು.

ಕಣ್ಣೆದುರು ಬಂದ ಘಟನೆ

ಕಣ್ಣೆದುರು ಬಂದ ಘಟನೆ

ಇಂದು ಮತ್ತೆ ಆ ಮಗುವಿನ ಮುಖವನ್ನು ನೋಡುತ್ತಿದ್ದಂತೆ ಕುಮಾರಸ್ವಾಮಿ ಗದ್ಗತಿತರಾದರು. ಅವರಿಗೆ ತಾವು ಮಾಡಿದ್ದ ಸಹಾಯ, ಮಗುವಿನ ಅವತ್ತಿನ ಮುಖ ಎಲ್ಲವೂ ಕಣ್ಣೆದುರು ಬಂತು. ಅವರ ಕಣ್ಣಂಚಿನಲ್ಲೂ ನೀರಿತ್ತು. ಆ ಇಡೀ ದೃಶ್ಯಾವಳಿ ನೋಡಿ ಇಡೀ ಸಭಾಂಗಣವೇ ಒಂದು ಕ್ಷಣ ಭಾವುಕವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Today JDS state president HD Kumaraswamy took an interaction with auto and cab drivers in Town Hall, Bengaluru. An emotional scenario took place in the midst of the interaction.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ