H.D.Kumaraswamy: ಕರ್ನಾಟಕದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಂದಿ ಮಾತನಾಡಲು ನಿರ್ಧರಿಸಿದ್ದೇಕೆ?
H.D.Kumaraswamy: ಈಗಾಗಲೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೇರಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಡುವೆಯೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಿಂದಿ ಕಲಿಯುವ ನಿರ್ಧಾರವನ್ನು ಮಾಡಿದ್ದಾರೆ. ಹಾಗಾದರೆ ದಿನದಲ್ಲಿ ಎಷ್ಟು ಗಂಟೆಗಳ ಹಿಂದಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಹಾಗೂ ಯಾಕೆ ಈ ನಿರ್ಧಾರ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವಾರಾಂತ್ಯ ಹೊರತುಪಡಿಸಿ ಬಿಟ್ಟು ಉಳಿದ ಪ್ರತಿ ದಿನಗವೂ 90 ನಿಮಿಷಗಳ ಕಾಲ ಹಿಂದಿ ಕಲಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಇನ್ನುಮುಂದೆ ಆನ್‌ಲೈನ್ ಮೂಲಕ ಹಿಂದಿಯನ್ನು ಕಲಿಯಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಹಿಂದಿ ಕಲಿಕೆಗಾಗಿಯೇ ಬೋಧಕರನ್ನು ನೇಮಿಸಿಕೊಂಡಿದ್ದು, ಹಿಂದಿ ಬರವಣಿಗೆ ಹಾಗೂ ಸುಲಭವಾಗಿ ಹಿಂದಿಯಲ್ಲಿ ಮಾತನಾಡುವುದನ್ನು ಅವರು ಹೇಳಿಕೊಡಲಿದ್ದಾರೆ. ಲೋಕಸಭೆಯಲ್ಲಿ ಹಿಂದಿಯಲ್ಲಿ ಮಾತನಾಡಲು ಹಾಗೂ ತಮ್ಮ ವಿಚಾರಗಳನ್ನು ಮಂಡನೆ ಮಾಡಲು ಕಷ್ಟ ಆಗುತ್ತಿರುವುದರಿಂದ ಎಚ್.ಡಿ.ಕುಮಾರಸ್ವಾಮಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಹಿಂದಿ ಕಲಿಕೆ ಕುರಿತು ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಭಾರತದಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಾರೆ. ಹೆಚ್ಚಿನ ಸಂಸದರು ಹಿಂದಿಯಲ್ಲಿ ಮಾತನಾಡುತ್ತಾರೆ. ನನ್ನ ಸಚಿವಾಲಯದ ಎಲ್ಲಾ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡುತ್ತಾರೆ. ಆದ್ದರಿಮದ ಹಿಂದಿ ಕಲಿಕೆ ನನಗೆ ಅನಿವಾರ್ಯ ಆಗಿದೆ. ಇದನ್ನು ಬಿಟ್ಟರೆ, ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆಯ ಸದಸ್ಯರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಹ ಎರಡು ಬಾರಿ ಸಂಸತ್ ಸದಸ್ಯರಾಗಿದ್ದರು. ಈ ಬಾರಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಮೊದಲ ಬಾರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ.
ಈಶಾನ್ಯ ರಾಜ್ಯಕ್ಕೆ ತೆರಳಿದ್ದಾಗಿನ ಘಟನೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಇತ್ತೀಚೆಗೆ ನಾನು ನಾಗಾಲ್ಯಾಂಡ್‌ಗೆ ತೆರಳಿದ್ದೆ. ಅಲ್ಲಿ ನನಗೆ ಇಂಗ್ಲೀಷ್ ಮಾತನಾಡುವ ಜನರಿಗಿಂತ ಹೆಚ್ಚು ಹಿಂದಿ ಮಾತನಾಡುವ ಜನರು ಸಿಕ್ಕಿದ್ದರು ಎಂದರು.
ಅಲ್ಲದೆ, ಜಾರ್ಖಂಡ್‌ನಲ್ಲಿಯೂ ಅದೇ ಘಟನೆ ಮರುಕಳಿಸಿತ್ತು. ಈ ಹಿನ್ನೆಲೆ ದೈನಂದಿನ ಕಲಿಕೆ ಸಹಾಯಕಾರಿ ಆಗಲಿದೆ ಎಂದು ಹೇಳಿದ್ದಾರೆ. 1996ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡ ಅವರಿಗೂ ಹಿಂದಿ ಭಾಷೆಯ ಸಮಸ್ಯೆ ಕಾಡಿತ್ತು. ಲೋಕಸಭೆಯಲ್ಲಿ ಮಾತನಾಡುವಾಗ ಅವರು ಭಾಷೆಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಬಳಿಕ ಕೆಲವೇ ತಿಂಗಳುಗಳಲ್ಲಿ ಹಿಂದಿ ಕಲಿತು ಸುಲಭವಾಗಿ ಮಾತನಾಡಲು ಪ್ರಾರಂಭಿಸಿದ್ದರು.












Click it and Unblock the Notifications