Sumalatha Ambareesh: ದರ್ಶನ್ ಸ್ವಂತ ಮಗ ಅಂತಿದ್ದ ಸುಮಲತಾ ಅಂಬರೀಶ್ ಸೈಲೆಂಟ್ ಆಗಿರುವುದೇಕೆ?
Sumalatha Ambareesh: ಚಿತ್ರದುರ್ಗ ಮುಳದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಆಗಿದ್ದು, ಎ2 ಆರೋಪಿ ನಟ ದರ್ಶನ್ ಆಗಿದ್ದಾನೆ.
ಇನ್ನು ಬಗ್ಗೆ ಈಗಾಗಲೇ ನಟಿ ರಮ್ಯ, ರಚಿತಾ ರಾಮ್, ಕಿಚ್ಚ ಸುದೀಪ್, ಉಪೇಂದ್ರ, ಉಮಾಶ್ರೀ ಸೇರಿದಂತೆ ಚಿತ್ರರಂಗದ ಹಲವು ನಟ, ನಟಿಯರು, ರಾಜಕಾರಣಿಗಳು ಪ್ರತಿಕ್ರಿಯಿಸಿದ್ದಾರೆ. ಆದರೆ ವೇದಿಕೆಗಳೆಲ್ಲ ತನ್ನ ಸ್ವಂತ ಮಗ ದರ್ಶನ್ ಎನ್ನುವವರೇ ಈ ವಿವಾರದಲ್ಲಿ ಇನ್ನೂ ಸೈಲೆಂಟ್ ಆಗಿರುವುದು ಕುತೂಹಲ ಹುಟ್ಟುಹಾಕಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಪರ ಯಾವ ಕುಟುಂಬದ ಸದಸ್ಯರು ಸಹ ನಿಂತಿಲ್ಲ. ಬದಲಾಗಿದೆ ಪತ್ನಿ ವಿಜಯಲಕ್ಷ್ಮಿಯೊಬ್ಬರೇ ದರ್ಶನ್‌ನನ್ನು ಹೊರತರು ವಕೀಲರನ್ನು ನೇಮಿಸುವ ಮೂಲಕ ಒಬ್ಬೊಂಟಿಯಾಗಿದೆ ಹೋರಾಟ ಮಾಡುತ್ತಿದ್ದಾರೆ.
ಮತ್ತೊಂದೆಡೆ ವೇದಿಕೆಗಳೆಲ್ಲ ದರ್ಶನ್ ನನ್ನ ಸ್ವಂತ ಮಗ ಇದ್ದ ಹಾಗೆ ಎಂದು ಹೇಳುತ್ತಿದ್ದ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಮಾತ್ರ ಈ ವಿಚಾರದ ಬಗ್ಗೆ ಯಾವುದೇ ಮಾತನಾಡದೇ ಸೈಲೆಂಟ್ ಆಗಿರುವುದು ಇದೀಗ ಕುತೂಹಲ ಸೃಷ್ಟಿಸಿದೆ. ಅಲ್ಲದೆ, ಅಭಿಷೇಕ್ ಅಂಬರೀಶ್ ಕೂಡ ಈ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.
ರವಿಚೇತನ್ ಹೇಳಿದ್ದೇನು: ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಇನ್ನು ದರ್ಶನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ ಖಳನಟ ರವಿಚೇತನ್ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಪ್ರಕರಣ ವಿಚಾರ ನಂಬುವುದಕ್ಕೆ ಆಗುತ್ತಿಲ್ಲ. ಯಾರೇ ಮಾಡಿದರೂ ತಪ್ಪು ತಪ್ಪೇ. ನನಗೆ ದರ್ಶನ್ 25 ವರ್ಷಗಳಿಂದ ಗೊತ್ತಿದೆ. ಆದರೆ ನಾನು ನೋಡಿರುವ ದರ್ಶನ್ ಇವರಲ್ಲ. ಈಗ ಅವರು ಆರೋಪಿಯಷ್ಟೇ, ಅಪರಾಧಿ ಅಲ್ಲ ಎಂದಿದ್ದಾರೆ. ಅಲ್ಲದೆ, ಮೊದಲಿಗೆ ಈ ವಿಷಯ ಕೇಳುತ್ತಿದ್ದಂತೆ ನನಗೆ ತುಂಬಾ ಶಾಕ್ ಆಯಿತು ಎಂದರು.
ನಟ ದರ್ಶನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಅವರು ಶೂಟಿಂಗ್ ಸೆಟ್‌ನಲ್ಲಿ ಹೀಗೆ ಇರುತ್ತಿರಲಿಲ್ಲ. ದರ್ಶನ್ ಸ್ನೇಹ ಜೀವಿಯಾಗಿದ್ದು, ಎಲ್ಲರೊಂದಿಗೆ ಬೆರೆಯುತ್ತಿದ್ದರು. ಇನ್ನು ಕೊರೊನಾ ಲಾಕ್‌ಡೌನ್ ವೇಳೆ ತುಂಬಾ ಜನರಿಗೆ ಅವರು ಸಹಾಯ ಮಾಡಿದ್ದಾರೆ. ಇನ್ನು ಸಿನಿಮಾಗಳಲ್ಲಿ ನಾನು ಅವರ ಜೊತೆ ಫೈಟ್ ಮಾಡಿದಷ್ಟು ಯಾರ ಜೊತೆಯೂ ಮಾಡಿಲ್ಲ. ನನಗೂ ಅದೆಷ್ಟೋ ಬಾರಿ ಪೆಟ್ಟಾದಾಗ ದರ್ಶನ್ ನನ್ನ ಕಡೆ ಹೆಚ್ಚಿನ ಕಾಳಜಿವಹಿಸಿದ್ದಾರೆ ಎಂದು ಹೇಳಿದ್ದಾರೆ.
"ಕುರುಕ್ಷೇತ್ರ ಸಿನಿಮಾ ಸೆಟ್‌ನಲ್ಲೂ ಪವಿತ್ರಾ ಗೌಡ ಬಂದಾಗ ಅವರನ್ನು ಸ್ನೇಹಿತೆ ಅಂತಾ ಪರಿಚಯ ಮಾಡಿಸಿದ್ದರು. ಅವರು ಕೂಡ ನಟಿಯೇ, ಆದರೆ ದರ್ಶನ್ ಅವರ ನಡುವಿನ ವೈಯಕ್ತಿಕ ವಿಚಾರದ ಬಗ್ಗೆ ನಮಗೆ ತಿಳಿದಿಲ್ಲ. ಸೆಟ್‌ನಲ್ಲಿ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ," ಎಂದರು. ಇನ್ನು "ರೇಣುಕಾಸ್ವಾಮಿ ಹತ್ಯೆ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಈ ಕೃತ್ಯವನ್ನು ಯಾರೇ ಮಾಡಿದರೂ ಅಂತಹವರ ವಿರುದ್ಧ ಕಠಿಣ ಶಿಕ್ಷೆಯಾಗಲಿ ಎಂದು ಎಂದು ರವಿಚೇತನ್ ಹೇಳಿದ್ದಾರೆ.












Click it and Unblock the Notifications