ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಯಾಲಿಸಿಸ್ ಮಾಡಿಸಿಕೊಳ್ಳಲು ಕೊರೊನಾ ಸೋಂಕಿತರು ಹಿಂದೇಟು: ಕಾರಣವೇನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ದೇಶಾದ್ಯಂತ ಇರುವ ಜನರಿಗೆ ಕೇವಲ ಕೊರೊನಾ ಸೋಂಕು ಮಾತ್ರ ಬಾಧಿಸುತ್ತಿಲ್ಲ, ಈ ಕೊರೊನಾ ಭಯದಲ್ಲಿ ಬೇರೆ ರೋಗಗಳು ಮರೆತು ಹೋಗಿವೆ. ಅಥವಾ ಜನರು ಭಯದಿಂದ ಆಸ್ಪತ್ರೆಗೆ ತೆರಳುವುದನ್ನು ನಿಲ್ಲಿಸಿದ್ದಾರೆ.

ಹಾಗೆಯೇ ಡಯಾಲಿಸಿಸ್ ಅವಶ್ಯಕತೆಯಿರುವ ಕೊವಿಡ್ 19 ರೋಗಿಗಳು ಅಧಿಕ ಚಿಕಿತ್ಸಾ ವೆಚ್ಚದ ಕಾರಣ ಡಯಾಲಿಸಿಸ್ ಮಾಡಿಸಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನಾರ್ಮಲ್ ಡಯಾಲಿಸಿಸ್ ರೋಗಿಗಳಿಗಿಂತ ಕೊರೊನಾ ಸೋಂಕಿತರ ಡಯಾಲಿಸಿಸ್ ವೆಚ್ಚ ಅಧಿಕವಾಗಿದೆ.

ಇಡೀ ತಂಡವು ಪ್ರತ್ಯೇಕತೆ, ಸಿಬ್ಬಂದಿ ಮತ್ತು ಪಿಪಿಇ ಕಿಟ್‌ಗಳ ಬಳಕೆಯಿಂದಾಗಿ. ಖಾಸಗಿ ಆಸ್ಪತ್ರೆಗಳಲ್ಲಿ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಡಯಾಲಿಸಿಸ್ ಮಾಡಬೇಕಾಗುತ್ತದೆ, ಆದರೆ ಕೆಲವರು ಮಾಡಿಸಿಕೊಳ್ಳುತ್ತಿಲ್ಲ, ಹೀಗಾಗಿ ಅದಕ್ಕೆ ಗಮನ ನೀಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಡಯಾಲಿಸಿಸ್ ಮಾಡಿಸಿಕೊಳ್ಳದೇ ಸ್ಕಿಪ್ ಮಾಡುತ್ತಿರುವವರು ಹೆಚ್ಚಿನ ಕೇರ್ ತೆಗೆದುಕೊಳ್ಳಬೇಕಾಗಿದೆ, ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿತರೊಂದಿಗೆ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಸಾಮಾನ್ಯ ರೋಗಿಗಳಿಂದ ಕೊರೊನಾ ಸೋಂಕಿತರಿಗೆ ಡಯಾಲಿಸಿಸ್ ಖರ್ಚು ಅಧಿಕ

ಸಾಮಾನ್ಯ ರೋಗಿಗಳಿಂದ ಕೊರೊನಾ ಸೋಂಕಿತರಿಗೆ ಡಯಾಲಿಸಿಸ್ ಖರ್ಚು ಅಧಿಕ

ವ್ಯಕ್ತಿಯೊಬ್ಬರು ನಿತ್ಯ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು, ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು, ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ದರ ನೋಡಿ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ, ಸಾಮಾನ್ಯ ರೋಗಿಗಳಿಗೆ ಡಯಾಲಿಸಿಸ್ ಮಾಡಲು 3ರಿಂದ 5 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ ಕೊರೊನಾ ಸೋಂಕಿತರಿಗೆ ಸುಮಾರು 10 ಸಾವಿರ ರೂ. ಹಣ ನೀಡಬೇಕಾಗಿದೆ.

ಹಲವು ಮಂದಿ ಡಯಾಲಿಸಿದ್ ಸ್ಕಿಪ್ ಮಾಡುತ್ತಿದ್ದಾರೆ

ಹಲವು ಮಂದಿ ಡಯಾಲಿಸಿದ್ ಸ್ಕಿಪ್ ಮಾಡುತ್ತಿದ್ದಾರೆ

ಅವರು ಅಂತಹ ಹಲವರು ಇತ್ತೀಚೆಗೆ ಡಯಾಲಿಸಿಸ್ ಸ್ಕಿಪ್ ಮಾಡುತ್ತಿದ್ದಾರೆ, ಆದರೆ ಹೀಗೆ ಮಾಡುವುದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಎಂದು ರೇಗಲ್ ಆಸ್ಪತ್ರೆ ವೈದ್ಯ ಡಾ.ಸುರಿ ರಾಜು ಹೇಳಿದ್ದಾರೆ.

ಸಿಬ್ಬಂದಿ ಮತ್ತು ಉಪಕರಣ ಹೆಚ್ಚಿನ ಪ್ರಮಾಣದಲ್ಲಿ ಬೇಕು

ಸಿಬ್ಬಂದಿ ಮತ್ತು ಉಪಕರಣ ಹೆಚ್ಚಿನ ಪ್ರಮಾಣದಲ್ಲಿ ಬೇಕು

ಸಿಬ್ಬಂದಿ ಮತ್ತು ಉಪಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿರುವ ಕಾರಣ ಹೆಚ್ಚಿನ ದರ ವಿಧಿಸಲಾಗುತ್ತಿದೆ. ನಿರ್ವಹಣೆ ಕೂಡ ಅಧಿಕವಾಗುತ್ತಿದೆ, ಒಂದು ಡಯಾಲೈಸರ್ ಅನ್ನು ಐದರಿಂದ ಆರು ರೋಗಿಗಳಿಗೆ ಬಳಕೆ ಮಾಡಬಹುದಾಗಿದೆ, ಆದರೆ ಕೋವಿಡ್-19 ರೋಗಿಗಳಿಗೆ ಒಮ್ಮೆ ಬಳಸಿದರೇ ಮತ್ತೆ ಉಪಯೋಗಿಸಲಾಗದು, ಹೀಗಾಗಿ ಹಲವು ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ನಿರಾಕರಿಸುತ್ತಿದ್ದಾರೆ.

ಡಯಾಲಿಸಿಸ್ ನಿರಾಕರಿಸುವುದರಿಂದ ಆಗುವ ಅಪಾಯ

ಡಯಾಲಿಸಿಸ್ ನಿರಾಕರಿಸುವುದರಿಂದ ಆಗುವ ಅಪಾಯ

ಡಯಾಲಿಸಿಸ್ ಚಿಕಿತ್ಸೆ ನಿರಾಕರಿಸುವುದರಿಂದ ರೋಗಿಗಳು ಅಪಾಯ ತಂದೊಡ್ಡಿಕೊಳ್ಳುವ ಸಾಧ್ಯತೆಯಿದೆ, ಕೊರೊನಾ ರೋಗಿಗಳಿಗೆ ಡಯಾಲಿಸಿಸ್ ಗೆ 11 ರಿಂದ 15 ಸಾವಿರ ರು ದರ ವಿಧಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗೆ ಹೃದಯ, ಕಿಡ್ನಿ, ಕಣ್ಣು, ಮಧುಮೇಹ ಯಾವುದೇ ಸಮಸ್ಯೆ ಇದ್ದರೂ ಜನರು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದಾರೆ.

Recommended Video

Muttappa Rai ಪುತ್ರ Ricky Rai ಮನೆ ಮೇಲೆ CCB ದಾಳಿ | Oneindia kannada

English summary
Doctors have observed a disturbing trend: Covid-positive patients who require dialysis are skipping sessions as the cost of a Covid dialysis unit is much higher than normal dialysis unit in private hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X