ಚಿಕನ್ ಪ್ರಿಯರಿಗೆ ಶಾಕ್: ಏಕಾಏಕಿ ದರ ಏರಿಕೆ ಯಾಕೆ ಗೊತ್ತಾ..?
ಬೆಂಗಳೂರು, ಮಾರ್ಚ್ 03: ಈ ಬಾರಿ ನಿರೀಕ್ಷೆಗೂ ಮೀರಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ತಾಪಮಾನ ಏರಿಕೆಯ ಪರಿಣಾಮ ಜೋರಾಗಿದೆ. ರಾಜ್ಯದಲ್ಲಿ ನೀರಿನ ಕೊರೆತೆ ಹೆಚ್ಚಾಗುತ್ತಿದ್ದು, ಬಿರು ಬಿಸಿಲಿಗೆ ಜನ ತತ್ತರಿಸಿದ್ದಾರೆ. ಒಂದೆಡೆ ಜಾನುವಾರು, ಪಕ್ಷಿಗಳಿಗೂ ಕುಡಿಯುವ ನೀರಿನ ಕೊರೆತೆ ಉಂಟಾಗುತ್ತಿದ್ದು, ಮತ್ತೊಂದೆಡೆ ಬಿಸಿಲಿನ ತಾಪಕ್ಕೆ ಪ್ರಾಣಿ-ಪಕ್ಷಿಗಳು ಸಾವನ್ನಪ್ಪುತ್ತಿದೆ.
ತಾಪಮಾನ ಏರಿಕೆಯ ಪರಿಣಾಮ ಕುಕ್ಕಟೋದ್ಯಮಕ್ಕೂ ತಟ್ಟಿದ್ದು, ಫೌಲ್ಟ್ರಿ ಫಾರಂನಲ್ಲಿ ಕೋಳಿಗಳು ಸಾವನ್ನಪ್ಪುತ್ತಿದೆ. ಬಿಸಿಲ ತಾಪಕ್ಕೆ ಕೋಳಿ ಬೆಳವಣಿಗೆ ಕುಂಠಿತ, ಮರಣ ಪ್ರಮಾಣ ಹೆಚ್ಚಳವಾಗುತ್ತಿದೆ. ಹೀಗಾಗಿ ಕೋಳಿ ಮಾಂಸ ಉತ್ಪಾದನೆ ಕುಸಿದಿದ್ದು, ಚಿಕನ್ ದರ ಏಕಾಏಕಿ ಏರಿಕೆಯಾಗಿದೆ. ಕೋಳಿ ಮಾಂಸದ ದರ ಒಂದೇ ವಾರದಲ್ಲಿ ಕೆಜಿಗೆ ಈವತ್ತರಿಂದ ಎಪ್ಪತು ರೂಪಾಯಿ ಏರಿಕೆಯಾಗಿದೆ.

ಫೌಲ್ಟ್ರಿ ಫಾರಂನಲ್ಲಿರುಬ ಕೋಳಿಗಳು ಬೇಸಿಗೆಯಲ್ಲಿ ಆಹಾರಕ್ಕಿಂತ ಹೆಚ್ಚಾಗಿ ನೀರು ಸೇವಿಸುತ್ತವೆ ಇದರಿಂದ ತೂಕ ಗಣನೀಯವಾಗಿ ಕಮೆಯಾಗುತ್ತದೆ. ಸಾಮಾನ್ಯ ದಿನಗಳಲ್ಲಿ 40 ದಿನಕ್ಕೆ ಎರಡೂವರೆ ಕೆಜಿ ತೂಕ ಬರುವ ಕೋಳಿ, ಬೇಸಿಗೆಯಲ್ಲಿ ಒಂದೂವರೆಯಿಂದ ಒಂದು ಮುಕ್ಕಾಲು ಕೆಜಿ ಮಾತ್ರ ತೂಗುತ್ತದೆ.
ಜೊತೆಗೆ ಕೋಳಿಗಳಿಗೆ ಬಿಸಿಲಿನ ಝಳ ಹಾಗೂ ಸೆಕೆ ತಾಳಲಾರದೆ ಸಾವನ್ನಪ್ಪುತ್ತದೆ. ಬೇಸಿಗೆಯಲ್ಲಿ ಐಬಿಎಚ್ ಸೋಂಕು ತಗುಲುವುದರಿಂದ, ರೋಗ ನಿರೋಧಕ ಶಕ್ತಿ ಕುಂದುತ್ತದೆ. ಹೀಗಾಗಿ ಬೇಡಿಕೆ ಇರುವಷ್ಟು ಕೋಳಿ ಮಾಂಸ ಉತ್ಪಾದನೆ ಇಲ್ಲ. ಆದರೆ ಕೋಳಿ ಮಾಂಸದ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಕಳೆದ ಒಂದು ತಿಂಗಳಲ್ಲಿ ಅನೇಕ ಬಾರಿ ಕೋಳಿ ದರ ಏರಿಕೆಯಾಗಿದ್ದು, ಒಂದು ವಾರದ ಹಿಂದೆ 180 ರೂಪಾಯಿ ಇದ್ದ ಒಂದು ಕೆಜಿ ಕೋಳಿ ಮಾಂಸದ ಬೆಲೆ 250 ರೂಪಾಯಿಗೆ ತಲುಪಿದೆ. ಇನ್ನು ಜಿಲ್ಲೆಗಳಿಗೆ ಅನುಗುಣವಾಗಿ ಬೆಲೆಯಲ್ಲಿ ಏರಿಳಿತ ಬದಲಾವಣೆಗಳಿದೆ.
ಪ್ರಸ್ತುತ ಕೋಳಿ ಮರಿ ದರ 50 ರೂಪಾಯಿ ನಿಗದಿಯಾಗಿದ್ದು, ಉತ್ಪಾದನಾ ವೆಚ್ಚ ನೂರರ ಗಡಿ ದಾಟಿದೆ. ಒಂದು ಕೆಜಿ ತೂಕದ ಕೋಳಿ ಬೆಳೆಸಲು 130ರಿಂದ 140 ರೂಪಾಯಿ ಖರ್ಚಾಗುತ್ತಿದ್ದು, ಸದ್ಯ ಕೋಳಿ ಮಾಂಸದ ದರ ಇನ್ನೂರೈವತ್ತರ ಗಡಿ ದಾಟಿ ಸಾಗುತ್ತಿದೆ.
-
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
ಬೆಂಗಳೂರಿಗರೇ ಎಚ್ಚರ; ಸೂರ್ಯನ ಪ್ರತಾಪಕ್ಕೆ ಕೂಲ್ ಸಿಟಿ ಕಂಗಾಲು: ಮುಂದಿನ ಎರಡು ದಿನ ತಾಪಮಾನ ಮತ್ತಷ್ಟು ಏರಿಕೆ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?










Click it and Unblock the Notifications