• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಪ್ರಾಬಲ್ಯ ಮುರಿಯಲಿದೆ ಕಾಂಗ್ರೆಸ್?

|

ಬೆಂಗಳೂರು, ಫೆಬ್ರವರಿ 28 : ಬೆಂಗಳೂರು ನಗರದಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಬೊಮ್ಮನಹಳ್ಳಿ. ಇದು ಬಿಜೆಪಿಯ ಭದ್ರಕೋಟೆ, ಹಾಲಿ ಶಾಸಕರು ಸತೀಶ್ ರೆಡ್ಡಿ. ಈ ಬಾರಿ ಚುನಾವಣೆಯಲ್ಲಿಯೂ ಜಯಗಳಿಸಿದರೆ ಹ್ಯಾಟ್ರಿಕ್ ಬಾರಿಸುತ್ತಾರೆ.

ಗಾರ್ಮೆಂಟ್ಸ್‌ಗಳು, ಸಣ್ಣ ಕೈಗಾರಿಕೆಗಳು ಈ ಕ್ಷೇತ್ರದಲ್ಲಿ ಹೆಚ್ಚು. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 2 ಲಕ್ಷ ಮತದಾರರು ಇದ್ದರು. ಈ ಚುನಾವಣೆ ವೇಳೆಗೆ ಈ ಸಂಖ್ಯೆ ಹೆಚ್ಚಾಗಿರುತ್ತದೆ. ಸತತ ಎರಡು ಚುನಾವಣೆಗಳಲ್ಲಿ ಸತೀಶ್ ರೆಡ್ಡಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ಬಿಜೆಪಿ ಭದ್ರಕೋಟೆ ಬಸವನಗುಡಿಗೆ ಲಗ್ಗೆ ಹಾಕುವವರು ಯಾರು?

ಒಕ್ಕಲಿಗ, ಬ್ರಾಹ್ಮಣ, ಲಿಂಗಾಯತ ಸಮದಾಯದವರು ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಜನರ ಜೊತೆ ಸತೀಶ್ ರೆಡ್ಡಿ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಆದರೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳು ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.

ಬಿಟಿಎಂ ಲೇಔಟ್ : ಗೃಹ ಸಚಿವರ ವಿರುದ್ಧ ಯಾರಿಗೆ ಗೆಲುವು?

ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂಬುದು ಸದ್ಯದ ಮಾಹಿತಿ. ಲೋಕಸತ್ತಾ ಪಕ್ಷ ಸಹ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಕಳೆದ ಬಾರಿಯೂ ಲೋಕಸತ್ತಾ ಪಕ್ಷದಿಂದ ಡಾ.ಅಶ್ವಿನ್ ಮಹೇಶ್ ಚುನಾವಣೆ ಸ್ಪರ್ಧಿಸಿ 11,915 ಮತಗಳನ್ನು ಪಡೆದಿದ್ದರು...

ಸತೀಶ್ ರೆಡ್ಡಿ ಬಿಜೆಪಿ ಅಭ್ಯರ್ಥಿ

ಸತೀಶ್ ರೆಡ್ಡಿ ಬಿಜೆಪಿ ಅಭ್ಯರ್ಥಿ

ಕ್ಷೇತ್ರದ ಹಾಲಿ ಶಾಸಕ ಸತೀಶ್ ರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್ ಖಚಿತವಾಗಿದೆ. ಕ್ಷೇತ್ರದ ವ್ಯಾಪ್ತಿಯ 9 ವಾರ್ಡ್‌ಗಳ ಪೈಕಿ 8 ವಾರ್ಡ್‌ನಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಬಲಿಷ್ಠ ಕಾರ್ಯಕರ್ತರ ಪಡೆ, ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಸತೀಶ್ ರೆಡ್ಡಿ ಅವರಿಗೆ ಸಹಾಯಕವಾಗಲಿದೆ.

ಕಾಂಗ್ರೆಸ್ ಅಭ್ಯರ್ಥಿ ಯಾರು?

ಕಾಂಗ್ರೆಸ್ ಅಭ್ಯರ್ಥಿ ಯಾರು?

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿ.ನಾಗಭೂಷಣ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ. ಕವಿತಾ ರೆಡ್ಡಿ ಅವರು ಪಕ್ಷದ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.

ಮಾಜಿ ಮೇಯರ್ ಅಭ್ಯರ್ಥಿ?

ಮಾಜಿ ಮೇಯರ್ ಅಭ್ಯರ್ಥಿ?

ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಅವರು ಸಹ ಟಿಕೆಟ್ ಆಕಾಂಕ್ಷಿ. 'ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಸೂಚಿಸಿದರೆ ಕಣಕ್ಕಿಳಿಯುವೆ' ಎಂದು ಮಂಜುನಾಥ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌ನಿಂದ ಅಭ್ಯರ್ಥಿ ಯಾರು?

ಜೆಡಿಎಸ್‌ನಿಂದ ಅಭ್ಯರ್ಥಿ ಯಾರು?

2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಶರತ್‌ಚಂದ್ರಬಾಬು ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 10,621 ಮತಗಳನ್ನು ಪಡೆದಿದ್ದರು. ಈ ಬಾರಿಯೂ ಅವರು ಜೆಡಿಎಸ್‌ ಅಭ್ಯರ್ಥಿಯಾಗುವುದು ಖಚಿತವಾಗಿದೆ.

ಡಾ.ಅಶ್ವಿನ್ ಮಹೇಶ್

ಡಾ.ಅಶ್ವಿನ್ ಮಹೇಶ್

ಲೋಕಸತ್ತಾ ಪಕ್ಷದ ಡಾ.ಅಶ್ವಿನ್ ಮಹೇಶ್ ಅವರು ಕ್ಷೇತ್ರದಿಂದ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. 11,915 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಬಾರಿಯೂ ಅವರಿ ಕಣಕ್ಕಿಳಿಯುವ ಸಾಧ್ಯತೆ ಇದೆ.

2013ರಲ್ಲಿ ಯಾರಿಗೆ ಎಷ್ಟು ಮತಗಳು?

2013ರಲ್ಲಿ ಯಾರಿಗೆ ಎಷ್ಟು ಮತಗಳು?

2013ರ ಚುನಾವಣೆಯಲ್ಲಿ ಸತೀಶ್ ರೆಡ್ಡಿ 86, 552 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ನಾಗಭೂಷಣ ಅವರು 60,700 ಮತ, ಜೆಡಿಎಸ್‌ನ ಶರತ್‌ಚಂದ್ರ ಅವರು 10,621 ಮತಳನ್ನು ಪಡೆದಿದ್ದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress and JD (S) busy in making strategy to break BJP strong hold in Bommanahalli assembly constituency, Bengaluru. BJP leader Sathish Reddy sitting MLA of the constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more