ಕನಕಪುರದಲ್ಲಿ ಕರಡಿಗಳನ್ನು ಕೊಂದವರ್ಯಾರು?

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ರಾಮನಗರ, ಜನವರಿ 6: ಎರಡು ಕರಡಿಗಳು ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ಕಸಬಾ ಹೋಬಳಿ ತಾಮಸಂದ್ರ ಗ್ರಾಮದ ಬಳಿ ಬೆಳಕಿಗೆ ಬಂದಿದ್ದು, ಇವು ವಿಷ ಪ್ರಾಶನದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತಪಟ್ಟ ಕರಡಿಗಳ ಪೈಕಿ ಒಂದು ಏಳು ವರ್ಷದ ಹೆಣ್ಣು, ಮತ್ತೊಂದು ನಾಲ್ಕು ವರ್ಷದ ಗಂಡು ಕರಡಿಯಾಗಿವೆ.

ಮೇಲ್ನೋಟಕ್ಕಂತೂ ಇವುಗಳನ್ನು ಬೇಕಂತಲೇ ಸಾಯಿಸಿದಂತೆ ಕಂಡುಬರುತ್ತಿಲ್ಲ. ಇವುಗಳ ದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಹೀಗಾಗಿ ಇವು ವಿಷ ಪ್ರಾಶನದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಕಾಡುಹಂದಿಗಳು ಹೆಚ್ಚಾಗಿದ್ದು, ಇವುಗಳನ್ನು ಬೇಟೆಯಾಡುವ ಸಲುವಾಗಿ ಕೆಲವು ಬೇಟೆಗಾರರು ವಿಷ ಬೆರೆಸಿಟ್ಟಿದ್ದು, ಅದನ್ನು ಕರಡಿಗಳು ಸೇವಿಸಿ ಮೃತಪಟ್ಟ ಸಾಧ್ಯತೆ ಹೆಚ್ಚಾಗಿದೆ.[ಮೈಸೂರು ಮೃಗಾಲಯದಲ್ಲಿ ಮತ್ತೊಂದು ಪಕ್ಷಿ ಸಾವು]

Who killed bears in Kanakapura?

ಇಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಅರಣ್ಯದಿಂದ ನಾಡಿನತ್ತ ಬರುವ ವನ್ಯಪ್ರಾಣಿಗಳಿಗೆ ಅದರಲ್ಲೂ ಕಾಡುಹಂದಿಗಳನ್ನು ಬೇಟೆಯಾಡುವ ಸಲುವಾಗಿ ಕೆಲವರು ಹೊಂಚು ಹಾಕುತ್ತಿರುತ್ತಾರೆ. ಬಹುಶಃ ಅವರು ಕಾಡುಹಂದಿಗಳನ್ನು ಸೆರೆ ಹಿಡಿಯುವ ಸಲುವಾಗಿ ವಿಷವನ್ನು ಆಹಾರದಲ್ಲಿ ಬೆರೆಸಿಟ್ಟಿರಬಹುದು. ಅದನ್ನು ಕರಡಿಗಳು ಸೇವಿಸಿ ಸಾವನ್ನಪ್ಪಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಇವುಗಳ ಸಾವಿಗೆ ನಿಖರ ಮಾಹಿತಿ ಲಭ್ಯವಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂಬಂಧ ತನಿಖೆ ಕೈಕೊಂಡಿದ್ದಾರೆ. ಒಂದು ವೇಳೆ ವಿಷ ಬೆರೆಸಿಟ್ಟು ಪ್ರಾಣಿಗಳನ್ನು ಬೇಟೆಯಾಡುವುದು ನಿಜವಾಗಿದ್ದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.[ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ]

ಉಪ ಸಂರಕ್ಷಣಾ ವಲಯ ಅರಣ್ಯಾಧಿಕಾರಿ ವೆಂಕಟೇಶ್, ಕನಕಪುರ ವಲಯ ಅರಣ್ಯಾಧಿಕಾರಿ ದಿನೇಶ್, ಪುಟ್ಟಸ್ವಾಮಿ, ಅರಣ್ಯ ರಕ್ಷಕ ಮುತ್ತುನಾಯಕ್ ಇನ್ನಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಶವ ಪರೀಕ್ಷೆ ನಂತರ ಅಂತ್ಯಕ್ರಿಯೆ ನಡೆಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bear found dead in Tamasandra village, Kanakapura taluk, Ramnagara. People suspecting poison feeding to bear.
Please Wait while comments are loading...