ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ಸಿಪಿ, ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿಯ ಹಿಂದಿನ 'ಮರ್ಮ'ವೇನು?

|
Google Oneindia Kannada News

Recommended Video

ಎನ್ ಸಿ ಪಿ ಹಾಗು ಬಿ ಎಸ್ ಪಿ ಜೊತೆ ಜೆಡಿಎಸ್ ಮೈತ್ರಿ ಹಿಂದೆ ದೇವೇಗೌಡ್ರ ಲೆಕ್ಕಾಚಾರ ಏನು?

ಕರ್ನಾಟಕದಲ್ಲಿ ಅಷ್ಟೇನೂ ನೆಲೆಯಿಲ್ಲದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಜೊತೆ, ಜೆಡಿಎಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೈಜೋಡಿಸಿರುವುದು ಮೇಲ್ನೋಟಕ್ಕೆ ಪರಿಣಾಮ ಬೀರದು ಎನ್ನುವ ಲೆಕ್ಕಾಚಾರವಿದ್ದರೂ, ಅದರ ಹಿಂದೆ ಗೌಡರ ರಾಜಕೀಯವೇ ಬೇರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ, ಅವರನ್ನು ಬ್ಲಡಿ ಬಾಸ್ಟರ್ಡ್ ಎಂದು ದೇವೇಗೌಡ್ರು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ 'ನೀಚ' ಎನ್ನುವ ಪದವನ್ನು ಗೌಡ್ರು ಬಳಸಿದ್ದರು.

ಕರ್ನಾಟಕದಲ್ಲಿ ಮೈನಸ್ ಡಿಗ್ರಿ ಪಾಲಿಟಿಕ್ಸ್ ಶುರುವಾಗಿದೆ!<br>ಕರ್ನಾಟಕದಲ್ಲಿ ಮೈನಸ್ ಡಿಗ್ರಿ ಪಾಲಿಟಿಕ್ಸ್ ಶುರುವಾಗಿದೆ!

ದೇವೇಗೌಡರ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಅಥವಾ ಅಸಂವಿಧಾನಿಕ ಪದ ಬಳಸಿರುವುದು ತೀರಾ ಅಪರೂಪ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಗೌಡರ ಖಾರದ ಮಾತಿಗೆ ರಾಜಕೀಯ ವಲಯದಲ್ಲಿ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ.

ವಿವಿಧ ವಾಹಿನಿಗಳು, ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರದ ಬೇಹುಕಾರಿಕೆ ವರದಿಗಳು ಅತಂತ್ರ ಫಲಿತಾಂಶ ಬರುವ ಸಾಧ್ಯತೆಯಿದೆ ಎನ್ನುವ ವರದಿಯ ಹಿನ್ನಲೆಯಲ್ಲಿ, ಗೌಡರ 'ನೀಚ' ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಒಕ್ಕಲಿಗ-ದಲಿತ ಜಾತಿ ಸಮೀಕರಣ : ದೇವೇಗೌಡರ ಚಾಣಾಕ್ಷ ನಡೆ!ಒಕ್ಕಲಿಗ-ದಲಿತ ಜಾತಿ ಸಮೀಕರಣ : ದೇವೇಗೌಡರ ಚಾಣಾಕ್ಷ ನಡೆ!

ಒಂದು ವೇಳೆ ಅತಂತ್ರ ಫಲಿತಾಂಶ ಬಂದಿದ್ದೇ ಆದಲ್ಲಿ, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನುವ ಮಾತು ಕೇಳಿ ಬರುತ್ತಿದೆ. ಎನ್ಸಿಪಿ ಮತ್ತು ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಕಾಂಗ್ರೆಸ್ ಮತಬ್ಯಾಂಕ್ ಒಡೆಯಲು ಎನ್ನುವ ಸುದ್ದಿಯೂ ಅಲ್ಲಲ್ಲಿ ಚಾಲ್ತಿಯಲ್ಲಿದೆ. ಮುಂದೆ ಓದಿ..

ಸಿದ್ದರಾಮಯ್ಯ ವಿರುದ್ದ ಗೌಡರ ಖಾರದ ಮಾತು

ಸಿದ್ದರಾಮಯ್ಯ ವಿರುದ್ದ ಗೌಡರ ಖಾರದ ಮಾತು

ದೇವೇಗೌಡರ ಗರಡಿಯಲ್ಲಿ ಪಳಗಿ, ಅವರ ವಿರುದ್ದವೇ ಸಿಡಿದೆದ್ದು ಕಾಂಗ್ರೆಸ್ ಸೇರಿ, ಸಿಎಂ ಆದ ಸಿದ್ದರಾಮಯ್ಯನವರ ವಿರುದ್ದ ಗೌಡ್ರು, ಅಲ್ಲಲ್ಲಿ,ಕೆಲವೊಮ್ಮೆ ಟೀಕೆ ಮಾಡಿದ್ದರೂ, ಇತ್ತೀಚಿನ ದಿನಗಳಲ್ಲಿ ಸಿದ್ರಾಮಣ್ಣನ ವಿರುದ್ದ ಹರಿಹಾಯುವ ಹಿಂದೆ ಬೇರೇನೇ ಲೆಕ್ಕಾಚಾರವಿದೆ ಎನ್ನುವ ಮಾತು ಕೇಳಿ ಬರುತ್ತಿರುವುದು ಒಂದೆಡೆ..

ಕಟ್ಟುನಿಟ್ಟಿನ ಅಮಿತ್ ಶಾ ಸೂಚನೆ ಇದೆ ಎನ್ನುವ ಸುದ್ದಿ

ಕಟ್ಟುನಿಟ್ಟಿನ ಅಮಿತ್ ಶಾ ಸೂಚನೆ ಇದೆ ಎನ್ನುವ ಸುದ್ದಿ

ಇನ್ನೊಂದೆಡೆ, ದೇವೇಗೌಡರ ವಿರುದ್ದ ಯಾವುದೇ ಹೇಳಿಕೆ ನೀಡಬಾರದು ಎನ್ನುವ ಕಟ್ಟುನಿಟ್ಟಿನ ಅಮಿತ್ ಶಾ ಸೂಚನೆ ಇದೆ ಎನ್ನುವ ಸುದ್ದಿಯ ನಡುವೆ, ತಾನಾಯಿತು, ಕಾಂಗ್ರೆಸ್ ಆಯಿತು ಎನ್ನುವ ಮೂಲಕ ಕಾಂಗ್ರೆಸ್ ಪಕ್ಷವನ್ನೇ ಬಿಜೆಪಿ ಟಾರ್ಗೆಟ್ ಮಾಡುತ್ತಿರುವುದು ಇನ್ನೊಂದೆಡೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಒಬ್ಬರು ಇನ್ನೊಬ್ಬರ ವಿರುದ್ದ ತೀಕ್ಷ್ಣವಾದ ಹೇಳಿಕೆ ನೀಡದೇ, ಎಷ್ಟು ಬೇಕೋ ಅಷ್ಟು ಮಾತ್ರ ಟೀಕೆ ಮಾಡುತ್ತಿದ್ದಾರೆ.

ಇಪ್ಪತ್ತರಲ್ಲಿ ಒಂದನ್ನು ಗೆಲ್ಲುವುದೂ ಬಿಎಸ್ಪಿಗೆ ಕಷ್ಟ

ಇಪ್ಪತ್ತರಲ್ಲಿ ಒಂದನ್ನು ಗೆಲ್ಲುವುದೂ ಬಿಎಸ್ಪಿಗೆ ಕಷ್ಟ

ಬಿಎಸ್ಪಿ ಜೊತೆ ಈಗಾಗಲೇ ಇಪ್ಪತ್ತು ಸೀಟಿನಲ್ಲಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಇಪ್ಪತ್ತರಲ್ಲಿ ಒಂದನ್ನು ಗೆಲ್ಲುವುದೂ ಬಿಎಸ್ಪಿಗೆ ಕಷ್ಟ.. ಕಷ್ಟ.. ಆದರೆ ಈ ಎಲ್ಲಾ ಇಪ್ಪತ್ತು ಸೀಟುಗಳಲ್ಲಿ ದಲಿತ ಸಮುದಾಯದವರಿಂದ ಬಿಎಸ್ಪಿಗೆ ಬೀಳುವ ಒಂದೊಂದು ಮತಗಳೂ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ತರುವ ಸಾಧ್ಯತೆ ಹೆಚ್ಚು ಎನ್ನುವುದು ದೇವೇಗೌಡರಿಗೆ ತಿಳಿಯದ ರಾಜಕೀಯವೇನೂ ಅಲ್ಲ.

ಮರಾಠಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳು

ಮರಾಠಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳು

ಇನ್ನು ಎನ್ಸಿಪಿಗೆ ರಾಜ್ಯದಲ್ಲಿ ನೆಲೆಯೇ ಇಲ್ಲ.. ಇದ್ದರೂ ಮುಂಬೈ ಕರ್ನಾಟಕ ಭಾಗದ ಅಲ್ಲಲ್ಲಿ.. ಆ ಭಾಗದಲ್ಲಿ ಬಹುತೇಕ ಪೈಪೋಟಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಮರಾಠಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಇರುವುದರಿಂದ ಎನ್ಸಿಪಿ ಅಭ್ಯರ್ಥಿ ಕಣಕ್ಕಿಳಿದರೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ವೋಟ್ ಡಿವೈಡ್ ಆಗುತ್ತೆ ಎನ್ನುವ ಲೆಕ್ಕಾಚಾರವನ್ನು ಗೌಡ್ರು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್ ಪಕ್ಷಕ್ಕೆ ಅಷ್ಟೇನೂ ಲಾಭವಿಲ್ಲ

ಜೆಡಿಎಸ್ ಪಕ್ಷಕ್ಕೆ ಅಷ್ಟೇನೂ ಲಾಭವಿಲ್ಲ

ಬಿಎಸ್ಪಿ ಮತ್ತು ಎನ್ಸಿಪಿ ಮೈತ್ರಿಯಿಂದ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಅಷ್ಟೇನೂ ಲಾಭವಿಲ್ಲದಿದ್ದರೂ, ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗದ ಪನುರ್ ಸ್ಥಾಪನೆಗೆ ಕರ್ನಾಟಕ ಅಸೆಂಬ್ಲಿ ಚುನಾವಣೆಯ ಮೂಲಕ ದೇವೇಗೌಡರು ಮತ್ತೆ ಪ್ರಯತ್ನಿಸುವ ಸಾಧ್ಯತೆಯಿದೆ. ಆ ಮೂಲಕ ಥರ್ಡ್ ಫ್ರಂಟಿನ ಮಂಚೂಣಿ ನಾಯಕರಾಗಿ ದೇವೇಗೌಡರು ಮತ್ತು ಜೆಡಿಎಸ್ ಪಕ್ಷವನ್ನು ಮುನ್ನಲೆಗೆ ತರುವ ಲೆಕ್ಕಾಚಾರ ಇದರ ಹಿಂದಡಗಿದೆ ಎನ್ನುವ ಸುದ್ದಿಯಿದೆ.

ತೃತೀಯ ರಂಗಕ್ಕೆ ಒಂದು ಶೇಪ್ ಬರುವ ಸಾಧ್ಯತೆ

ತೃತೀಯ ರಂಗಕ್ಕೆ ಒಂದು ಶೇಪ್ ಬರುವ ಸಾಧ್ಯತೆ

ಸೋನಿಯಾ ಗಾಂಧಿ ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ, ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗ ಬೇಕು ಎಂದಿದ್ದರು. ಇತ್ತ ಗೌಡ್ರು, ಮಾಯಾವತಿ ಮತ್ತು ಶರದ್ ಪವಾರ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಕಮ್ಯೂನಿಸ್ಟ್ ಮುಖಂಡರ ಜೊತೆಗೂ ಗೌಡರು ಮಾತುಕತೆ ನಡೆಸುವ ಸಾಧ್ಯತೆಯಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ತೃತೀಯ ರಂಗಕ್ಕೆ ಒಂದು ಶೇಪ್ ಬರುವ ಸಾಧ್ಯತೆಯಿಲ್ಲದಿಲ್ಲ.

English summary
What will be JDS supremo HD Deve Gowda's political calculation behind alliane with NCP and BSP. JDS and BSP plans to launch the joint campaign for the upcoming Karnataka assembly election -2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X