• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಯಡಿಯೂರಪ್ಪಗೆ 78; ಅದ್ದೂರಿ ಜನ್ಮದಿನದ ವಿಶೇಷತೆ ಏನು?

|

ಬೆಂಗಳೂರು, ಫೆಬ್ರವರಿ 22: ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸಿರುವ ಉಮೇದಿನಲ್ಲಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಫೆಬ್ರವರಿ 27 ರಂದು 78 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಜನ್ಮದಿನವನ್ನು ಈ ಬಾರಿ ಅದ್ಧೂರಿಯಾಗಿ ವಿಶೇಷವಾಗಿ ಆಚರಿಸಲಾಗುತ್ತಿದೆ.

   Karnataka Assembly session : ನಾನು ತಪ್ಪು ಮಾಡಿದ್ರೆ ಆಚೆ ಕಲಿಸಲಿ ಅಂದ್ರು ಶಿವಲಿಂಗೇ ಗೌಡ | Shivalinga Gowda

   ಈ ಹಿನ್ನೆಲೆಯಲ್ಲಿ ನಗರದ ಅರಮನೆ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಫೆ 27 ರಂದು ಸಂಜೆ 5 ಕ್ಕೆ ಹಮ್ಮಿಕೊಳ್ಳಲಾಗಿದೆ. ಅಂದಿನ ಕಾರ್ಯಕ್ರಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷಗಳ ಘಟನಾನುಘಟಿಗಳೂ ಭಾಗವಹಿಸುತ್ತಿದ್ದಾರೆ.

   ಮತ್ತೆ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ ಸಿಎಂ ಪುತ್ರ ವಿಜಯೇಂದ್ರ

   ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭಾಗವಹಿಸಲಿದ್ದಾರೆ. ಕವಿ ಡಾ.ಸಿದ್ದಲಿಂಗಯ್ಯ ಯಡಿಯೂರಪ್ಪ ಅಭಿನಂದನಾ ಭಾಷಣ ಮಾಡಲಿದ್ದಾರೆ.

   ಗ್ರಂಥಗಳ ಬಿಡುಗಡೆ

   ಗ್ರಂಥಗಳ ಬಿಡುಗಡೆ

   ಬೆಂಗಳೂರಿನ ನಗರದ ಅರಮನೆ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಫೆ 27 ರಂದು ಸಂಜೆ 5 ಕ್ಕೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಕುರಿತಾದ ದಣಿವರಿಯದ ಧೀಮಂತ ಅಭಿನಂದನಾ ಗ್ರಂಥ, ಎ ಲೀಡರ್‌ ಹು ಸಾ ಟುಮಾರೋ ಹೆಸರಿನ ಚಿತ್ರ ಕೈಪಿಡಿ ಮತ್ತು ಅಪ್ರತಿಮ ಎಂಬ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ.

   ವಿವಿಧ ಗಣ್ಯರ ಲೇಖನಗಳು

   ವಿವಿಧ ಗಣ್ಯರ ಲೇಖನಗಳು

   ದಣಿವರಿಯದ ಧೀಮಂತ ಅಭಿನಂದನಾ ಗ್ರಂಥದಲ್ಲಿ ಒಟ್ಟು 80 ಲೇಖನಗಳಿದ್ದು, ರಾಜಕಾರಣಿಗಳನ್ನೂ ಹೊರತುಪಡಿಸಿ, ನಾಡಿನ ಅನೇಕ ಚಿಂತಕರು ಸಾಹಿತಿಗಳು ಯಡಿಯೂರಪ್ಪ ಕುರಿತು ಲೇಖನ ಬರೆದಿದ್ದಾರೆ. ಚಿತ್ರ ಕೈಪಿಡಿಯಲ್ಲಿ ಯಡಿಯೂರಪ್ಪ ಅವರ ಬಾಲ್ಯದಿಂದ ಇಲ್ಲಿ ತನಕದ ವಿಶೇಷ ಚಿತ್ರಗಳನ್ನು ದಾಖಲಿಸಲಾಗಿದೆ.

   ಸಿಎಂ ಜನ್ಮದಿನಕ್ಕೆ ಸ್ವಕ್ಷೇತ್ರದಲ್ಲಿ ವಿಶೇಷ ಆರೋಗ್ಯ ಶಿಬಿರ

   ಬಿ.ವೈ.ವಿಜಯೇಂದ್ರ ರೂವಾರಿ

   ಬಿ.ವೈ.ವಿಜಯೇಂದ್ರ ರೂವಾರಿ

   ಫೆಬ್ರವರಿ 27 ರಂದು ನಡೆಯುವ ಧಣಿವರಿಯದ ಧೀಮಂತ ಕಾರ್ಯಕ್ರಮದ ಹಿಂದೆ ರೂವಾರಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಮುಂಚೂಣಿಗೆ ಬರುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ರಾಜ್ಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು. ಅಂದು ಪಕ್ಷಾತೀತವಾಗಿ ರಾಜ್ಯದ ಪ್ರಮುಖ ರಾಜಕಾರಣಿಗಳನ್ನು ಸಮಾರಂಭಕ್ಕೆ ಕರೆದುಕೊಂಡು ಬರಲು ವಿಜಯೇಂದ್ರ ಬಿರುಸಿನ ಚಟುವಟಿಕೆ ನಡೆಸುತ್ತಿದ್ದಾರೆ.

   ಸಿದ್ದರಾಮಯ್ಯ ಅವರಿಗೂ ಆಹ್ವಾನ

   ಸಿದ್ದರಾಮಯ್ಯ ಅವರಿಗೂ ಆಹ್ವಾನ

   ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿಯಾಗಿ, ಫೆಬ್ರವರಿ 27 ರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಕುರಿತ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

   English summary
   February 27th Karnataka CM Yediyurappa Birthday. What Special? here the details of yediyurappa 78th birthday in bengaluru palace ground.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X