ಗ್ರಾಮಸ್ಥರಿಗೆ ತೊಡಕಾಗಿದ್ದ ಹಸುವಿಗೆ ದಯಾಮರಣ ನೀಡಿದ ವೈದ್ಯರು: ಹಸು ಮಾಡಿದ್ದೇನು...
ಕೆಲವರು ದಯಾಮರಣ ಕೋರುವುದು ಅದಕ್ಕೆ ನಿರಂತರ ಹೋರಾಟ ನಡೆಸುವಂತಹ ಮನಕಲಕುವಂತ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ರೋಗದ ನೋವಿನಿಂದ ಹೊರ ಬರಲಾಗದೆ ದಯಾಮರಣ ಕೋರುವುದಿದೆ. ಈಗ ಕರ್ನಾಟಕದ ಈ ಜಿಲ್ಲೆಯೊಂದರಲ್ಲಿ ಹಸುವಿಗೆ ದಯಾಮರಣ ನೀಡಿರುವುದು ವರದಿಯಾಗಿದೆ. ಸ್ಥಳೀಯರಿಗೆ ಈ ಹಸು ಸಮಸ್ಯೆ ನೀಡುತ್ತಿತ್ತು. ಹೀಗಾಗಿ, ಸ್ಥಳೀಯರೇ ಈ ಹಸುವನ್ನು ಕಟ್ಟಿ ಹಾಕಿ ವೈದ್ಯರನ್ನು ಕರೆಸಿದ್ದಾರೆ. ಹಸುವನ್ನು ಪರಿಶೀಲಿಸಿರುವ ವೈದ್ಯರು ಅದಕ್ಕೆ ದಯಾಮರಣ ಕರುಣಿಸಿದ್ದಾರೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆಯ ವ್ಯಾಪ್ತಿಗೆ ಸೇರಿರುವ ಕೊಲ್ಯ ಎನ್ನುವ ಪ್ರದೇಶದಲ್ಲಿ ಹಸುವೊಂದಿಗೆ ಬುಧವಾರ ದಯಾಮರಣ ನೀಡಲಾಗಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹಸು ಸಾರ್ವಜನಿಕರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿತ್ತು. ಅನವಶ್ಯಕವಾಗಿ ಜರನ್ನು ತಿವಿಯಲು ಹೋಗುತ್ತಿತ್ತು. ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ ಹಸುವಿನ ಬಗ್ಗೆ ದೂರುಗಳು ಕೇಳಿಬಂದಿದ್ದವು. ಕಳೆದ ಎರಡು ದಿನಗಳಿಂದಲೂ ಇದೇ ವರ್ತನೆ ತೋರಿಸಿದ್ದ ಹಸುವನ್ನು ಸ್ಥಳೀಯರೇ ಸೇರಿ ಕಟ್ಟಿ ಹಾಕಿದ್ದರು. ಈಚೆಗೆ ಮಹಿಳೆಯೊಬ್ಬರ ಮೇಲೂ ದಾಳಿ ನಡೆಸಿತ್ತು.

ಹಸುವಿಗೆ ರೇಬಿಸ್ ರೋಗ ?
ಇನ್ನು ಹಸು ಈ ರೀತಿ ವರ್ತಿಸುತ್ತಿರುವುದು ಸಾರ್ವಜನಿಕರಿಗೆ ವಿಚಿತ್ರವಾಗಿ ಕಂಡಿತ್ತು. ಸಾಮಾನ್ಯವಾಗಿ ಕೆಲವೊಮ್ಮೆ ಕೆಲವು ನಾಯಿಗಳು ಮಾತ್ರ ಈ ರೀತಿ ವಿಚಿತ್ರವಾಗಿ ವರ್ತನೆ ಮಾಡುತ್ತವೆ. ಹಸುಗಳು ಕೆಲವು ನಿರ್ದಿಷ್ಟ ಸಂದರ್ಭಗಳನ್ನು ಹೊರತುಪಡಿಸಿದರೆ, ಎಲ್ಲ ಸಂದರ್ಭದಗಳಲ್ಲೂ ಆಕ್ರಮಣಶೀಲವಾಗಿ ವರ್ತನೆ ಮಾಡುವುದಿಲ್ಲ. ಆದರೆ, ಈ ಭಾಗದಲ್ಲಿ ಹಸು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಲು ಮುಂದಾಗುತ್ತಿತ್ತು. ಹಸುವಿನ ವರ್ತನೆಯೇ ಸ್ಥಳೀಯರಲ್ಲಿ ಅನುಮಾನ ಮೂಡಿಸಿತ್ತು. ಹೀಗಾಗಿ, ವೈದರನ್ನು ಕರೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಹಸುವಿನ ಆರೋಯ ಪರಿಶೀಲನೆ ಮಾಡಿದ ಇಲ್ಲಿನ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಅರುಣ್ ಕುಮಾರ ಶೆಟ್ಟಿ ಅವರು, ಹಸುವಿನ ವರ್ತನೆಗಳನ್ನು ಪರಿಶೀಲನೆ ಮಾಡಿದ ಮೇಲೆ ಅದಕ್ಕೆ ರೇಬಿಸ್ ರೋಗ ಇರುವುದು ದೃಢಪಟ್ಟಿತ್ತು. ಹೀಗಾಗಿ, ಹಸುವಿಗೆ ದಯಾಮರಣ ನೀಡಲಾಗಿದೆ ಎಂದು ಹೇಳಿದರು.
ಹುಚ್ಚು ನಾಯಿಯ ಕಡಿತದಿಂದ ಹಸುವಿಗೆ ರೇಬಿಸ್ ಹಬ್ಬಿರುವ ಸಾಧ್ಯತೆ ಇದೆ. ರೇಬಿಸ್ ದೃಢಪಟ್ಟ ಹಸು ಚೇತರಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಅಲ್ಲದೇ ಇದರಿಂದ ಇತರಿಗೂ, ಹಸುವಿನ ಆರೋಗ್ಯಕ್ಕೂ ಸಮಸ್ಯೆ ಹೀಗಾಗಿ, ದಯಾಮರಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ದಯಾಮರಣ ಎಂದರೇನು ?
ದಯಾಮರಣ ಎನ್ನುವುದಕ್ಕೆ ಇಂಗ್ಲೀಷ್‌ನಲ್ಲಿ ಯುಥೆನೇಶಿಯ ಕರೆಯಲಾಗುತ್ತದೆ. ಇನ್ನು ದಯಾಮರಣಕ್ಕೆ ಉತ್ತಮ ಸಾವು ಅಥವಾ ಮುಕ್ತಿ ಎಂದೂ ಹೇಳಲಾಗುತ್ತದೆ. ಜೀವನ ನಡೆಸಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಅವರ ನೋವುಯುಕ್ತ ಜೀವನವನ್ನು ಮುಕ್ತಗೊಳಿಸಲು ನೀಡಲಾಗುತ್ತದೆ. ದಯಾಮರಣಕ್ಕೆ ಅನುಮತಿ ನೀಡುವ ವಿಚಾರವು ವಿಶ್ವದ ವಿವಿಧ ದೇಶಗಳಲ್ಲಿ ಬೇರೆ ಬೇರೆ ಕಾನೂನುಗಳನ್ನು ಹೊಂದಿದೆ. ಭಾರತದಲ್ಲೂ ದಯಾಮರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳು ಇವೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications