Get Updates
Get notified of breaking news, exclusive insights, and must-see stories!

ಹಿಜಾಬ್‌ ಬ್ಯಾನ್‌ ರದ್ದು ನಿರ್ಧಾರದಿಂದ ಸಿದ್ದರಾಮಯ್ಯ ಹಿಂದೇಟಿಗೆ ಕಾರಣವೇನು?

ಬೆಂಗಳೂರು, ಡಿಸೆಂಬರ್‌ 25: ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣಮಕ್ಕಳು ಹಿಜಾಬ್‌ ಧರಿಸುವುದಕ್ಕೆ ನೀಡಿದ್ದ ತಡೆಯನ್ನು ರದ್ದು ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಧಿಡೀರ್‌ ನಿರ್ಧಾರ ಬದಲಿಸಿ ಸಂಪೂರ್ಣ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಜಾರಿಕೊಂಡಿದ್ದಾರೆ.

ಸಮಾಜವಾದಿ ನಾಯಕ, ಅಲ್ಪಸಂಖ್ಯಾತರ ಆಶಾಕಿರಣ ಎಂದೆಲ್ಲ ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು, ತಮ್ಮ ಪ್ರಜಾಸತ್ತಾತ್ಮಕ ನಿಲುವುಗಳಿಂದ ಕರ್ನಾಟಕ ರಾಜಕಾರಣದಲ್ಲಿ ವಿಭಿನ್ನವಾಗಿ ಎದ್ದು ಕಾಣುತ್ತಾರೆ. ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿದ್ದ ಅವರು, ಹಿಜಾಬ್‌ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದೇನೆ ಎಂದು ಹೇಳಿದ್ದರು.

What is the reason for Siddaramaiahs hesitation with the decision to cancel the hijab ban?

ಇದಕ್ಕೆ ಹಿಜಾಬ್‌ ವಿವಾದ ಶುರುವಾದಾಗ ಮುನ್ನೆಲೆಗೆ ಬಂದಿದ್ದ ಮಂಡ್ಯದ ಮುಸ್ಕನ್‌ ಖಾನ್‌ ಎಂಬ ವಿದ್ಯಾರ್ಥಿ ಸಿಎಂ ಅವರನ್ನು ಹೊಗಳಿದ್ದರು. ಹಿಜಾಬ್‌ ನಿಷೇಧ ಕಾರಣದಿಂದ ಅವರು ತಾವು ಓದುತ್ತಿದ್ದ ಬಿಕಾಂ ಪದವಿಯನ್ನು ಮೊಟಕುಗೊಳಿಸಿದ್ದರು. ಆದರೆ ಸಿದ್ದರಾಮಯ್ಯ ಅವರ ಮಾತಿನಿಂದ ಸಂತಸಗೊಂಡಿದ್ದ ಅವರು ತಾವು ಮತ್ತೆ ಓದು ಮುಂದುವರೆಸುವುದಾಗಿ ಹೇಳಿದ್ದರು. ಈ ಮೂಲಕ ಅಲ್ಪಸಂಖ್ಯಾತ ಮಕ್ಕಳಿಗೆ ಶಿಕ್ಷಣ, ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿಕೊಟ್ಟಿದ್ದರು.

ಆದರೆ ಹಿಜಾಬ್‌ ಕುರಿತ ಅವರ ಹೇಳಿಕೆಯಿಂದ ಕರ್ನಾಟಕದಲ್ಲಿ ಉಂಟಾದ ಪ್ರತಿರೋಧದಿಂದ ಅವರು ತಮ್ಮ ನಿರ್ಧಾರವನ್ನು ಬದಲಿಸಬೇಕಾಯಿತು. ಕಾರಣ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಹಿಂದೂಗಳ ಅವಕೃಪೆಗೆ ಒಳಗಾಗಬೇಕಾಗಿ ಇದು ಮತ ಕುಸಿತವಾಗುವ ಭಯ ಕಾಡಿದಂತೆ ಕಂಡು ಬಂದಿದೆ.

ಹಿಜಾಬ್ ನಿಷೇಧದ ಹಿಂಪಡೆಯುವಿಕೆಯ ನಿರ್ಧಾರದ ಕುರಿತು ಲೋಕಸಭೆ ಚುನಾವಣೆಯವರೆಗೂ ಈ ವಿಷಯವನ್ನು ಪ್ರಸ್ತಾಪಿಸದಿರಲು ಸರ್ಕಾರ ಈಗ ನಿರ್ಧರಿಸಿದೆ ಎನ್ನಲಾಗಿದೆ. ಡಿಸೆಂಬರ್ 22 ರಂದು ಮೈಸೂರು ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ, 2022 ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದರು.

What is the reason for Siddaramaiahs hesitation with the decision to cancel the hijab ban?

ಸಿಎಂ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಷಯ ಬಾಕಿ ಇರುವಾಗಲೂ ಸಿಎಂ ಅವರ ನಿರ್ಧಾರದ ಬಗ್ಗೆ ಹಲವಾರು ನಾಯಕರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅವರ ಘೋಷಣೆ ಪ್ರಮುಖ ವಿಷಯವಾದ ನಂತರ, ಭಾನುವಾರದಂದು ಸಿಎಂ ಧ್ವನಿಯನ್ನು ತಗ್ಗಿಸಿ, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಹಿಜಾಬ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಹಿರಿಯ ಸಚಿವರು ಅತೃಪ್ತಿ ವ್ಯಕ್ತಪಡಿಸಿದ್ದು, ವಿವಾದಿತ ವಿಚಾರದಲ್ಲಿ ನಿಧಾನವಾಗಿ ನಡೆಯುವಂತೆ ಸಿಎಂಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆಂತರಿಕ ಚರ್ಚೆಯ ನಂತರ, ಕಾಂಗ್ರೆಸ್ ನೇತೃತ್ವದ ಸರ್ಕಾರವು ಈಗ ಕನಿಷ್ಠ ಲೋಕಸಭೆ ಚುನಾವಣೆ ಮುಗಿಯುವವರೆಗೂ ವಿವಾದಾತ್ಮಕ ವಿಷಯವನ್ನು ಪ್ರಸ್ತಾಪಿಸದಿರಲು ನಿರ್ಧರಿಸಿದೆ ಎನ್ನಲಾಗಿದೆ.

ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಶಿವಕುಮಾರ್, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಹಿಜಾಬ್ ವಿಚಾರವು ಬಿಜೆಪಿಗೆ ಹಿಂದೂ ಮತಗಳನ್ನು ಕ್ರೋಢೀಕರಿಸಲು ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕರು ಭಯಪಡುತ್ತಾರೆ. ಆದ್ದರಿಂದ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಆದೇಶ ನೀಡುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆಯೂ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಈ ಥರದ ನಿಲುವು ತಳೆಯುವ ವಿಚಾರವಾಗಿ ಘರ್ಷಣೆ ನಡೆದಿತ್ತು. ಶಿವಕುಮಾರ್ ಹೈಕಮಾಂಡ್ ನಿಂದ ಸಿದ್ದರಾಮಯ್ಯ ಮೇಲೆ ಒತ್ತಡ ತಂದಿದ್ದು, ಹೈಜಾಬ್ ವಿಷಯದಲ್ಲಿ ಪಕ್ಷ ತಟಸ್ಥ ನಿಲುವು ತಳೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+