• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನರ್ಹ ಶಾಸಕರು ಬಚಾವಾಗಲು ಹೊಸ ಪ್ಲ್ಯಾನ್

|
   ಅನರ್ಹ ಶಾಸಕರ ಹೊಸ ಗೇಮ್ ಪ್ಲಾನ್ ಏನು ಗೊತ್ತಾ..? | Oneindia Kannada

   ಬೆಂಗಳೂರು, ಆಗಸ್ಟ್ 29: ಅನರ್ಹ ಶಾಸಕರು ಬಚಾವಾಗಲು ಹೊಸ ಉಪಾಯ ಕಂಡು ಹಿಡಿದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿಗೂ ಮೊದಲೇ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.

   ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಉಪ ಚುನಾವಣೆ ನಡೆಸದಂತೆ ಚುನಾವಣೆ ಆಯೋಗಕ್ಕೆ ಅನರ್ಹರು ಮನವಿ ಮಾಡಿದ್ದಾರೆ.

   ಅನರ್ಹಗೊಂಡ 17 ಶಾಸಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಮೂಲಕ ಅತೃಪ್ತ ನಾಯಕರು ಬಚಾವಾಗುವ ತಂತ್ರ ರೂಪಿಸಿದ್ದಾರೆ.

   ರಾಜಕೀಯ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸುವಂತೆ ಅನರ್ಹ ಶಾಸಕರು ನ್ಯಾ. ಎನ್.ವಿ.ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮನವಿ ಮಾಡಿಕೊಂಡಿದ್ದರು. ತುರ್ತು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿತ್ತು.

   ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ: ಅನರ್ಹ ಶಾಸಕರು ಕಂಗಾಲು

   ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಇದೇ ವಾರ ಲಿಸ್ಟ್ ಮಾಡುವ ಸಾಧ್ಯತೆ ಇದೆ. ಬಹುತೇಕ ಒಂದೆರಡು ವಾರದಲ್ಲಿ ವಿಚಾರಣೆ ಆರಂಭವಾಗಬಹುದು. ರಿಜಿಸ್ಟ್ರಾರ್‌ ಲಿಸ್ಟ್‌ ಮಾಡಿದ ನಂತರ ಸಂಬಂಧಪಟ್ಟವರಿಗೆ ನೋಟಿಸ್‌ ಕಳುಹಿಸಲಾಗುವುದು.

   ವಿಚಾರಣೆ ದಿನ ಹಾಜರಾಗುವಂತೆ ಕಾಲಾವಕಾಶ ನೀಡಲಾಗುವುದು. ಒಂದು ಅಥವಾ ಎರಡು ವಾರದಲ್ಲಿ ವಿಚಾರಣೆಗೆ ಬರಬಹುದು ಎಂದು ಹೇಳಲಾಗಿದೆ.

   ಅನರ್ಹ ಶಾಸಕರು ತುಸು ನಿರಾಳ

   ಅನರ್ಹ ಶಾಸಕರು ತುಸು ನಿರಾಳ

   ಸ್ಪೀಕರ್ ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿ ಸೂಚಿಸಿದೆ.

   ವಿಚಾರಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದ್ದರಿಂದ ಸದ್ಯಕ್ಕೆ ಅನರ್ಹರು ನಿಟ್ಟುಸಿರು ಬಿಟ್ಟಿದ್ದಾರೆ. ಅನರ್ಹ ಶಾಸಕರ ‌ಪರ‌ ಹಿರಿಯ ವಕೀಲ ವಿ.ಗಿರಿ ತ್ವರಿತ ವಿಚಾರಣೆ ಕೋರಿ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ, ರಿಜಿಸ್ಟ್ರಾರ್‌ಗೆ ಪ್ರಕರಣವನ್ನು ಲಿಸ್ಟ್ ಮಾಡುವಂತೆ ಸೂಚಿಸಿತು.

   ಸುಪ್ರೀಂ ತೀರ್ಪು ಬರುವವರೆಗೂ ಉಪ ಚುನಾವಣೆ ನಡೆಸದಂತೆ ಮನವಿ

   ಸುಪ್ರೀಂ ತೀರ್ಪು ಬರುವವರೆಗೂ ಉಪ ಚುನಾವಣೆ ನಡೆಸದಂತೆ ಮನವಿ

   ಸುಪ್ರೀಂ ಕೋರ್ಟ್ ತೀರ್ಪು ಬರೋತನಕ ಉಪ ಚುನಾವಣೆ ನಡೆಸದಂತೆ ಚುನಾವಣೆ ಆಯೋಗಕ್ಕೆ ಅನರ್ಹರು ಮನವಿ ಮಾಡಿದ್ದಾರೆ. ಅನರ್ಹಗೊಂಡ 17 ಶಾಸಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಮೂಲಕ ಅತೃಪ್ತ ನಾಯಕರು ಬಚಾವಾಗುವ ತಂತ್ರ ರೂಪಿಸಿದ್ದಾರೆ.

   ಅನರ್ಹ ಶಾಸಕರಿಗೆ ಕೊಂಚ ರಿಲೀಫ್ ನೀಡಿದ ಸುಪ್ರೀಂಕೋರ್ಟ್

   ಅನರ್ಹ ಶಾಸಕರು ತುರ್ತು ವಿಚಾರಣೆಗೆ ಮನವಿ

   ಅನರ್ಹ ಶಾಸಕರು ತುರ್ತು ವಿಚಾರಣೆಗೆ ಮನವಿ

   ಈ ಹಿಂದೆ ಅನರ್ಹ ಶಾಸಕರು ನ್ಯಾ.ಅರುಣ್ ಮಿಶ್ರಾ ದ್ವಿಸದಸ್ಯ ಪೀಠದ ಮುಂದೆ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾ.ಅರುಣ್ ಮಿಶ್ರಾ ದ್ವಿಸದಸ್ಯ ಪೀಠ ತುರ್ತು ವಿಚಾರಣೆಗೆ ಒಪ್ಪಿರಲಿಲ್ಲ. ಮತ್ತೊಮ್ಮೆ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು. ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಅನರ್ಹ ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಮಂಗಳವಾರ ತ್ರಿಸದಸ್ಯ ಪೀಠ ಅನರ್ಹರ ತುರ್ತು ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.

   ಅನರ್ಹ ಶಾಸಕರು ಯಾರ್ಯಾರು?

   ಅನರ್ಹ ಶಾಸಕರು ಯಾರ್ಯಾರು?

   ಆದ್ದರಿಂದ ಅನರ್ಹ ಶಾಸಕರಾದ ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ್ ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್. ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಇದ್ದಾರೆ.

   ಬಿಬಿಎಂಪಿ ಮೇಯರ್ ಚುನಾವಣೆ: ಮತದಾರರ ಪಟ್ಟಿಯಿಂದ ಅನರ್ಹ ಶಾಸಕರ ಹೆಸರು ಔಟ್

   English summary
   Disqualified MLAs have found a new way to safe. MLAs has gone before The Election Commission before Supreme Court decision.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X