ದ್ವೇಷದ ಮಾರುಕಟ್ಟೆ ಮುಚ್ಚಿದೆ, ಪ್ರೀತಿಯ ಅಂಗಡಿಗಳು ತೆರೆದಿವೆ: ಕರ್ನಾಟಕದ ಗೆಲುವಿನ ಬಗ್ಗೆ ರಾಹುಲ್ ಹೇಳಿದ್ದೇನು?
ನವದೆಹಲಿ, ಮೇ 13: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ( Karnataka Assembly Elections ) ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಿಜೆಪಿ ವಿರುದ್ಧ ಈ ಅಭೂತಪೂರ್ವ ಗೆಲುವಿನ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರ್ಷ ವ್ಯಕ್ತಪಡಿಸಿದ್ದಾರೆ. ಜನರು ದ್ವೇಷದ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಹುಲ್, 'ಕಾಂಗ್ರೆಸ್ ಗೆಲುವು ಕರ್ನಾಟಕದ ಜನರ ಗೆಲುವು' ಎಂದು ತಿಳಿಸಿದರು.

'ಕರ್ನಾಟಕದ ಜನರು ಮತ್ತು ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರನ್ನು ಅಭಿನಂದಿಸಲು ನಾನು ಬಯಸುತ್ತೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಡವರ ಬೆಂಬಲಕ್ಕೆ ನಿಂತಿದೆ. ಈ ಚುನಾವಣೆಯಲ್ಲಿ ನಾನು ನಿಜವಾಗಿಯೂ ಇಷ್ಟಪಟ್ಟದ್ದು ನಾವು ಚುನಾವಣೆಯಲ್ಲಿ ಹೋರಾಡಲಿಲ್ಲ. ದ್ವೇಷ ರಾಜಕಾರಣವನ್ನು ಪ್ರೀತಿಯ ರಾಜಕಾರಣಕ್ಕೆ ತಿರುಗಿಸಲು ನಾವು ಯಶಸ್ವಿಯಾಗಿದ್ದೇವೆ' ಎಂದು ಅವರು ಹೇಳಿದರು.
ಇಲ್ಲಿನ ಜನರು ಪ್ರೀತಿಯ ಭಾಷೆ ಇಷ್ಟಪಡುತ್ತಾರೆ ಎಂಬುದನ್ನು ಕರ್ನಾಟಕ ದೇಶಕ್ಕೆ ತೋರಿಸಿಕೊಟ್ಟಿದೆ ಎಂದರು. ಇದು ಕರ್ನಾಟಕದ ಜನತೆಗೆ ಸಂದ ಜಯ ಎಂದು ತೋರಿಸಿದರು.
ಪ್ರಸ್ತುತ ಟ್ರೆಂಡ್‌ಗಳ ಪ್ರಕಾರ, 224 ಸದಸ್ಯ ಬಲದ ಸದನದಲ್ಲಿ 138 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಗೆಲುವಿನತ್ತ ಸಾಗುತ್ತಿದೆ. ಏತನ್ಮಧ್ಯೆ, ಆಡಳಿತಾರೂಢ ಬಿಜೆಪಿ 62 ಸ್ಥಾನಗಳಲ್ಲಿ ಮುಂದಿದೆ.












Click it and Unblock the Notifications