Maharashtra Exit Poll: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಗೆ ಮತ್ತೆ ಅಧಿಕಾರ: ಪರಮೇಶ್ವರ್‌ ಹೇಳಿದ್ದೇನು?

ಬೆಂಗಳೂರು, ನವೆಂಬರ್‌ 21: ಮಹಾರಾಷ್ಟ್ರದಲ್ಲಿ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಆಡಳಿತಾರೂಢ ಬಿಜೆಪಿ-ಸೇನಾ-ಎನ್‌ಸಿಪಿ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳು ಹೇಳಿದೆ.

ಈ ಕುರಿತು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್‌ ಅವರು ಮಾತನಾಡಿ, ಎಕ್ಸಿಟ್ ಪೋಲ್‌ಗಳು ಒಂದೇ ತರನಾಗಿ ಹೇಳಿಲ್ಲ. ಕೆಲವು ಸರ್ವೇಗಳು ಮಹಾ ವಿಕಾಸ್ ಅಘಾಡಿಗೆ 162 ಸೀಟುಗಳನ್ನು ಕೊಟ್ಟಿದ್ದು, ಬಿಜೆಪಿಯವರಿಗೆ 128 ಕೊಟ್ಟಿವೆ. ಇನ್ನು ಕೆಲ ಸರ್ವೇಗಳು ಬಿಜೆಪಿಯವರಿಗೆ 140 ನೀಡಿವೆ. ಯಾವುದನ್ನು ನಿಖರವಾಗಿ ಹೇಳಲು ಬರುವುದಿಲ್ಲ ಎಂದು ಹೇಳಿದರು.

What Did Parameshwara Say About The BJP-led Alliance Coming To Power In Maharashtra

ವಾಸ್ತವವಾಗಿ ಮಹಾರಾಷ್ಟ್ರ ಜನ, ಭ್ರಷ್ಟಚಾರ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಬಹಳಷ್ಟು ಕಾರಣಗಳಿವೆ. ಆಂಬುಲೆನ್ಸ್ ಖರೀದಿಯಲ್ಲಿ 8000 ಕೋಟಿ ಅಕ್ರಮ ನಡೆದಿದೆ. ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ, ಅಂಬೇಡ್ಕರ್ ಕೇಂದ್ರ ಮಾಡುವುದಾಗಿ ಪ್ರಧಾನಿ ಮೋಡಿಯವರು 2025ರಲ್ಲಿ ಅಡಿಗಲ್ಲು ಹಾಕಿದ್ದರು.

ವಾಸ್ತವವಾಗಿ ಮಹಾರಾಷ್ಟ್ರ ಜನ, ಭ್ರಷ್ಟಚಾರದಲ್ಲಿ ತೊಡಗಿರುವ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಆಂಬುಲೆನ್ಸ್ ಖರೀದಿಯಲ್ಲಿ 8000 ಕೋಟಿ ರೂ. ಅಕ್ರಮ ಎಸಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ, ಅಂಬೇಡ್ಕರ್ ಕೇಂದ್ರ ಮಾಡುವುದಾಗಿ ಪ್ರಧಾನಿ ಮೋದಿಯವರು 2015ರಲ್ಲಿ ಅಡಿಗಲ್ಲು ಹಾಕಿದ್ದರು. ಈವರೆಗು ಪೂರ್ಣಗೊಂಡಿಲ್ಲ. ಅಂಬೇಡ್ಕರ್ ಅವರು ಮಹಾರಾಷ್ಟ್ರದಲ್ಲಿ ಜನಿಸಿದವರು. ಇಡೀ ದೇಶದ ಜನತೆ ಅವರನ್ನು ಇಷ್ಡಪಡುತ್ತಾರೆ. ಯೋಜನೆಯನ್ನು ಪೂರ್ಣಗೊಳಿಸದೆ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಜನ ಅಸಮಾದಾನ ವ್ಯಕ್ತಪಡಿಸಿದ್ದಾರೆ ಎಂದರು‌.

ಮಹಾರಾಷ್ಟ್ರಕ್ಕೆ ಬಂದಿದ್ದ ಕೈಗಾರಿಕೆಗಳನ್ನು ಗುಜುರಾತ್‌ಗೆ ತೆಗೆದುಕೊಂಡು ಹೋಗಿದ್ದಾರೆ‌. 25 ಸಾವಿರ ಕೋಟಿ ರೂ ಹೂಡಿಕೆಯ ಸಂಸ್ಥೆಯನ್ನು ಗುಜುರಾತ್‌‌ಗೆ ತೆಗೆದುಕೊಂಡು ಹೋಗಿದ್ದಾರೆ‌. ಇದರಿಂದ ಉದ್ಯೋಗಗಳೆಲ್ಲ ಗುಜುರಾತ್‌ಗೆ ಹೋಗಿರುವುದಕ್ಕೆ ಜನರಿಗೆ ಅಸಮಾದಾನವಿದೆ‌. ರೈತರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ. ವಿಪರೀತ ಭ್ರಷ್ಟಚಾರ ಮಾಡುತ್ತಿದ್ದಾರೆ ಎಂಬುದು ಜನರೊಂದಿಗೆ ಸಮಾಲೋಚನೆ ನಡೆಸಿದ ವೇಳೆ ಬಂದ ಮಾತುಗಳು. ಹೀಗಾಗಿ ಜನರು, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಬಹುಮತ ನೀಡುವ ಭರವಸೆ ಇದೆ ಎಂದು ಹೇಳಿದರು.

ನಕ್ಸಲ್ ವಿಕ್ರಂಗೌಡ ಚಟುವಟಿಕೆಗಳ ಮೇಲೆ ಕಳೆದ 20 ವರ್ಷಗಳಿಂದ ನಿಗಾವಹಿಸಲಾಗಿತ್ತು. ಜನ ವಿರೋದಿ ಕೆಲಸಗಳಲ್ಲಿ ತೊಡಗಿದ್ದ ಎಂಬ ಮಾಹಿತಿ ಇದೆ. ಕಾನೂನು ಬಾಹಿರವಾಗಿ, ಅನುಮತಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ. ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ. ನಕ್ಸಲ್ ನಿಗ್ರಹಕ್ಕಾಗಿ ರಾಜ್ಯದಲ್ಲಿ ಮತ್ತು ಬೇರೆಬೇರೆ ರಾಜ್ಯಗಳಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ರಚಿಸಲಾಗಿದೆ. ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ವಿಕ್ರಂ ಗೌಡ ಅವರದ್ದು ನಕಲಿ‌ ಎನ್‌ಕೌಂಟರ್ ಅಲ್ಲ ಎಂದರು.

ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಶರಣಾಗುವಂತೆ ವಿಚಾರವಾದಿಗಳು ಮನವಿ ಮಾಡಿದ್ದಾರೆ. ಇದು ಸರಿ ಇಲ್ಲ.‌ ಸಮಾಜದಲ್ಲಿ ನ್ಯಾಯಯುತವಾಗಿ ಪ್ರತಿಭಟನೆ ಮಾಡಿ, ನಕ್ಸಲ್ ಚಟುವಟಿಕೆಗೆ ಸೇರಬೇಡಿ ಎಂದಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಗಂಭೀರವಾಗಿ‌ ಪರಿಗಣಿಸಬೇಕು ಎಂದು ಹೇಳಿದರು.

ಈ ಹಿಂದೆ ತುಮಕೂರಿನ ಪಾವಘಡದ ಆಂಧ್ರಪ್ರದೇಶ ಗಡಿಯಲ್ಲಿ ಪೀಪಲ್ಸ್ ವಾರ್ ಗ್ರೂಪ್ ಇತ್ತು. ಇದೇ ರೀತಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಅನುಕೂಲಸ್ಥರಿಂದ ಹಣ ಕೇಳುವುದು, ಜಮೀನುಗಳಿಗೆ ಬೇಲಿ ಹಾಕುವುದು, ಪೊಲೀಸರನ್ನು ಹತ್ಯೆ ಮಾಡಿದ್ದರು. ಎಸ್.ಎಮ್.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನೂರಾರು ಜನ ನಕ್ಸಲರು ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗತಿಯಾದರು. ಅದೇರೀತಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಗತಿಪರ ಚಿಂತಕರು ಪ್ರಯತ್ನ ಮಾಡಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+