Get Updates
Get notified of breaking news, exclusive insights, and must-see stories!

DK Shivakumar in Weekend With Ramesh: 100ನೇ ಸಾಧಕರಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ವೀಕೆಂಡ್ ವಿತ್ ರಮೇಶ್ ಜನಪ್ರಿಯ ಕಾರ್ಯಕ್ರಮಕ್ಕೆ ಈ ಬಾರಿ ಅತಿಥಿಯಾಗಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ. ಈ ಸಂಚಿಕೆಯ ಪ್ರೋಮೋ ವಿಡಿಯೋವನ್ನು ಡಿಕೆ ಶಿವಕುಮಾರ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರೋಮೋ ಹಂಚಿಕೊಂಡ ಅವರು, '#WeekendWithRamesh ಕಾರ್ಯಕ್ರಮ ನನ್ನ ಬದುಕಿನ ಪಯಣವನ್ನು ಪ್ರಪಂಚಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದೆ. ಇದೇ ಶನಿವಾರ ಹಾಗೂ ಭಾನುವಾರ ನನ್ನ ಬಾಲ್ಯದಿಂದ ಇಲ್ಲಿಯವರೆಗಿನ ಪಯಣದ ಸ್ವಾರಸ್ಯಕರ ಕಥೆಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ' ಎಂದು ಬರೆದಿದ್ದಾರೆ.

DK Shivakumar in Weekend with Ramesh

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಈಗಾಗಲೇ ಹಲವಾರು ಸಾಧಕರು ಬಂದು ಹೋಗಿದ್ದಾರೆ. ತಮ್ಮ ಸಾಧನೆಗಳು ಬಗ್ಗೆ, ತಾವು ಅನುಭವಿಸಿದ ಸಮಸ್ಯೆಗಳ ಬಗ್ಗೆ, ತಮ್ಮ ವೈಯಕ್ತಿ ಜೀವನದ ಬಗ್ಗೆ ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುವ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಆಗಮಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಪ್ರೋಮೋ ಬಿಡಿಗಡೆಯಾಗುತ್ತಿದ್ದಂತೆ ಇವರ ರಾಜಕೀಯ ಜೀವನ ಹಾಗೂ ಇವರು ಜನಪ್ರಿಯ ನಾಯಕರಾಗಿ ಬೆಳೆದು ಬಂದ ಹಾದಿಯ ಬಗ್ಗೆ ತಿಳಿಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮೊದಲ ಸೀಸನ್‌ನಿಂದ ಐದನೇ ಸೀಸನ್‌ನ ಇಲ್ಲಿವರೆಗೆ ಕಾರ್ಯಕ್ರಮಕ್ಕೆ 99 ಜನ ಸಾಧಕರು ಬಂದು ಹೋಗಿದ್ದಾರೆ. ಡಿಕೆ ಶಿವಕುಮಾರ್ 100ನೇ ಹಾಗೂ ಐದನೇ ಸೀಸನ್‌ನ ಕೊನೆಯ ಸಾಧಕರಾಗಿದ್ದಾರೆ. ಈ ಎಪಿಸೋಡ್‌ನ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಪ್ರಸಾರವೊಂದೇ ಬಾಕಿ ಇದೆ.

DK Shivakumar in Weekend with Ramesh

ಇದಕ್ಕೂ ಮೊದಲು ಐದನೇ ಸೀಸನ್‌ನ ಮೊದಲ ಅತಿಥಿ ರಮ್ಯಾ ಆಗಿದ್ದರು. ನೂರನೇ ಸಾಧಕರು ವಿಶೇಷವಾಗಿರುತ್ತಾರೆ ಎಂದು ನಿರ್ಮಾಪಕ ರಮೇಶ್ ಹೇಳಿದ್ದರು. ಅದರಂತೆ ಈ ಬಾರಿಯ ವಿಶೇಷ ಹಾಗೂ ಜನಪ್ರಿಯ ರಾಜಕಾರಣ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಪ್ರೋಮೋದಲ್ಲಿ ಏನಿದೆ?

'6-7ನೇ ಕ್ಲಾಸ್‌ಗೆ ನಾನು ಪೊಲಿಟೀಷಿಯನ್ ಆಗಲೇ ಬೇಕು ಎಂದು ತೀರ್ಮಾನ ಮಾಡಿದ್ದೆ' ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಜೊತೆಗೆ 'ಡಿಕೆ ಶಿವಕುಮಾರ್ ಅವರು ಒಬ್ಬ ಒಳ್ಳೆಯ ಆಡಳಿತಗಾರ' ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಇನ್ನೂ ಅವರ ಪತ್ನಿ 'ಆಚೆ ಕಡೆ He is a tough man (ಅವನೊಬ್ಬ ಗಟ್ಟಿಮುಟ್ಟಾದ ಮನುಷ್ಯ) ಆದರೆ ಮನೆಯಲ್ಲಿ ಅವರು ತುಂಬಾ Emotional (ಭಾವುಕ ವ್ಯಕ್ತ)' ಎಂದು ಹೇಳುತ್ತಾರೆ. 'ಏನಾದರು ಆದರೆ ಶಿವಕುಮಾರ್ ಇದಾನೆ ಅಂತ ಹೇಳೋರು' ಎಂದು ಸಿಹಿ ಕಹಿ ಚಂದ್ರು ಹೇಳಿದರೆ, ಇನ್ನೂ ಅವರ ಮಗಳು 'He is my Hero' ಎನ್ನುವುದೆಲ್ಲವೂ ಇದೆ.

DK Shivakumar in Weekend with Ramesh

ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಭಾರೀ ಕುತೂಹಲವನ್ನು ಮೂಡಿಸಿದೆ. ಡಿಕೆ ಶಿವಕುಮಾರ್ ಅವರ ಜೀವನದ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿಯಬೇಕು ಅಂದರೆ ಶನಿವಾರ ಹಾಗೂ ಭಾನುವಾರದವರೆಗೂ ಕಾಯಲೇಬೇಕು.

ಕಳೆದ ತಿಂಗಳು ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸುವ ಮೂಲಕ ಅಧಿಕಾರ ವಹಿಸಿಕೊಂಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೆ ಡಿಕೆ ಶಿವಕುಮಾರ್ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಬಿಜೆಪಿ ವಿರುದ್ಧ ತೀವ್ರ ಪೈಪೋಟಿ ನೀಡುವ ಜೊತೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಡಿಕೆ ಶಿವಕುಮಾರ್ ಪಾತ್ರ ಸಣ್ಣದಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+