ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಮಳೆಯ ಸಿಂಚನ

Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ತುಂತುರು ಮಳೆಯಿಂದ ಹಿಡಿದು ಧಾರಾಕಾರ ಮಳೆ ಬೀಳುವ ಸಾಧ್ಯತೆ ಇದೆ ಅಂತ ಹವಾಮಾನ ಮಾಹಿತಿ ನೀಡುವ 'ಸ್ಕೈಮೆಟ್ ವೆದರ್' ಹೇಳಿದೆ.

ಬೆಂಗಳೂರಿನಲ್ಲೂ ಹಗುರವಾಗಿ ಮಳೆಯಾಗಲಿದೆ ಎಂದು ಈ ಸಂಸ್ಥೆ ಹೇಳಿದ್ದು ದಕ್ಷಿಣ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರದ ಮರಾಠವಾಡ ಭಾಗದಿಂದ ಕರ್ನಾಟಕದ ಕರಾವಳಿವರೆಗೆ ಸೈಕ್ಲೋನ್ ಚಲನೆ ಕಂಡು ಬಂದಿದೆ. ಇದೇ ರೀತಿಯಲ್ಲಿ ಬಂಗಾಳಕೊಲ್ಲಿಯಲ್ಲೂ ಸೈಕ್ಲೋನ್ ಚಲನೆ ಕಂಡು ಬಂದಿದೆ. ಇದು ಹವಾಮಾನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. [ಮಂಗಳೂರಿನಲ್ಲಿ ತೆಂಗಿನ ಮರದೆತ್ತರಕ್ಕೇರಿದ ಎಳನೀರು ಬೆಲೆ!]

Weather report: Karnataka saw Isolated to scattered rains in next 24 hours

ಇನ್ನು ದಿನದ ತಾಪಮಾನದಲ್ಲಿ ಮಹಾರಾಷ್ಟ್ರದ ಭಿರಾದಲ್ಲಿ ಅತೀ ಹೆಚ್ಚಿನ 45.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕರ್ನಾಟಕದ ವಿಚಾರಕ್ಕೆ ಬಂದರೆ ಕಲಬುರ್ಗಿಯಲ್ಲಿ 42.4 ತಾಪಮಾನ ದಾಖಲಾಗಿದೆ. ಇನ್ನು ಬಳ್ಳಾರಿಯಲ್ಲಿ 42.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ದೇಶದ ಟಾಪ್ ಟೆನ್ ಹಾಟ್ ನಗರಗಳಲ್ಲಿ ಸ್ಥಾನ ಪಡೆದಿದೆ. [ಬಿಸಿಲ ಹೊಡೆತದಿಂದ ತಪ್ಪಿಸಿಕೊಳ್ಳುವುದು ಹೇಗೆ?]

ಗುಜರಾತ್ ಮುಂದಿನ 48-72 ಗಂಟೆಗಳವರೆಗೆ ತೀವ್ರ ಬಿಸಿಗಾಳಿಗೆ ಬೀಸುವಿಕೆಗೆ ಸಾಕ್ಷಿಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As per the weather report in next 24 hours Isolated to scattered rains were seen over Karnataka including Bangaluru. Light rain and thundershowers may occur over Southern parts of Karnataka.
Please Wait while comments are loading...