• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಹರಡದಿರಲು ಮಾಸ್ಕ್ ಪರಿಹಾರವೇ? ನಾವೆಂತಹ ಮೂರ್ಖರು ಎಂದ ಖ್ಯಾತ ವೈದ್ಯ ಬಿ.ಎಂ.ಹೆಗ್ಡೆ

|

ಕೊರೊನಾ ಜೊತೆಗೆ ಬದುಕಲು ಕಲಿಯಬೇಕು ಎಂದು ಖುದ್ದು ಪ್ರಧಾನಿ ಮೋದಿ ಹೇಳಿದ ನಂತರ, ಲಾಕ್ ಡೌನ್ ಮುಂತಾದ ಏನು ನಿರ್ಬಂಧವನ್ನು ಕೇಂದ್ರ ಸರಕಾರ ಹೇರಿತ್ತೋ, ಅದನ್ನು ಹಂತಹಂತವಾಗಿ ಸಡಿಲಿಸುವ ಮುನ್ಸೂಚನೆಯನ್ನು ಸರಕಾರ ನೀಡಿತ್ತು.

ಬೇಕಾಗಿರದ ವೇಳೆ ಲಾಕ್ ಡೌನ್, ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ವೇಳೆ, ಆರ್ಥಿಕತೆಯ ಹೆಸರು ಹೇಳಿ, ಕಠಿಣ ನಿಯಮಗಳನ್ನು ಸಡಿಲಿಸುತ್ತಾ ಸಾಗಿದ ಮೋದಿ ಸರಕಾರದ ಕ್ರಮ ಎಷ್ಟು ಸರಿ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಶಾಕಿಂಗ್: ಕೊರೊನಾ ಟೆಸ್ಟ್ ಮಾಡಿಸುವುದೇ ಮೂರ್ಖತನ, ಮಾಡಿಸಿದರೆ ಪಾಸಿಟಿವ್ ಪಕ್ಕಾ!

ಅದೇನೇ ಇರಲಿ, ಕೊರೊನಾ ವೈರಾಣುಗೆ ಇನ್ನೂ ಲಸಿಕೆ ರೆಡಿಯಾಗದೇ ಇರುವ ಹಿನ್ನಲೆಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ, ಈ ಸೋಂಕಿನಿಂದ ದೂರವಿರಬಹುದು ಎನ್ನುವ ಸರಕಾರದ ಮಾರ್ಗಸೂಚಿಯ ಬಗ್ಗೆ ಕೆಲವು ವೈದ್ಯರು ಅಪಸ್ವರ ಎತ್ತಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸಬೇಕು ಎನ್ನುವುದು ಈ ಗೈಡ್ಲೈನ್ಸ್ ನಲ್ಲಿ ಪ್ರಮುಖ ಅಂಶಗಳು. ಅದರಲ್ಲಿ, ಮಾಸ್ಕ್ ಧರಿಸಿದರೆ, ಕೊರೊನಾ ಹಾವಳಿಯಿಂದ ದೂರವಿರಬಹುದೇ? ಏನೆನ್ನುತ್ತಾರೆ ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ? ಮುಂದೆ ಓದಿ..

ಕುದಿಯುವ ನೀರಿನ ಆವಿ ಸೇವಿಸಿದರೆ ಕೊರೊನಾ ವೈರಾಣು ಸಾಯುತ್ತಾ? ಏನಂತಾರೆ ವೈದ್ಯರು

ನಾವೆಂತಃ ಮೂರ್ಖರು ಎನ್ನುತ್ತಾರೆ ಖ್ಯಾತ ವೈದ್ಯ ಹೆಗ್ಡೆ

ನಾವೆಂತಃ ಮೂರ್ಖರು ಎನ್ನುತ್ತಾರೆ ಖ್ಯಾತ ವೈದ್ಯ ಹೆಗ್ಡೆ

ಡಬ್ಯು.ಜೆ.ವಿಲಿಯಂ ಫರ್ಕ್ ಎನ್ನುವವರ ಲೇಖನವನ್ನು ಒಮ್ಮೆ ಸರಕಾರದ ಸಂಬಂಧಪಟ್ಟ ಇಲಾಖೆಯವರು ಓದಿಕೊಳ್ಳಬೇಕು. ಬ್ರಿಟಿಷ್ ಜರ್ನಲ್ ಅಶೋಶಿಯೇಶನ್ ಈ ಲೇಖವನ್ನು ಪ್ರಕಟಿಸಿದೆ. 1991ರಲ್ಲಿ ಕೆನಡಾದ ವ್ಯಾಂಕೋವರ್ ನಲ್ಲಿ ಮೊದಲು ಪ್ರಕಟವಾದ ಲೇಖನವಿದು. ಭೌತಶಾಸ್ತದ ಬಗ್ಗೆ ಬರೆದಿರುವ ಐದಾರು ಪೇಜುಗಳ ಲೇಖನವಿದು. ಲೇಖನದ ಅಂತ್ಯದಲ್ಲಿ ನಾವೆಂತಹ ಮೂರ್ಖರು ಎನ್ನುವುದು ಗೊತ್ತಾಗುತ್ತದೆ.

h1n1 ಅಥವಾ ಕೊರೊನಾ ವೈರಸ್ ಅನ್ನು ಯಾರದಾರೂ ನೋಡಿದ್ದಾರಾ

h1n1 ಅಥವಾ ಕೊರೊನಾ ವೈರಸ್ ಅನ್ನು ಯಾರದಾರೂ ನೋಡಿದ್ದಾರಾ

h1n1 ಅಥವಾ ಕೊರೊನಾ ವೈರಸ್ ಅನ್ನು ಯಾರದಾರೂ ನೋಡಿದ್ದಾರಾ, ವೈದ್ಯಲೋಕದಲ್ಲಿ ಯಾರಾದರೂ ಕರಾರುವಕ್ಕಾಗಿ ಇದಕ್ಕೆ ಉತ್ತರಿಸುತ್ತಾರಾ, ಖಂಡಿತಾ ಇಲ್ಲ. ಇವತ್ತು, ಕೊರೊನಾ ಬಗ್ಗೆ ಇಷ್ಟು ಸಾರ್ವಜನಿಕರು ಭಯ ಪಡಲು ಕಾರಣ, ಇದರ ಹಿಂದೆ, ಮುಂದೆ ಸೃಷ್ಟಿಸಲಾಗಿರುವ ಭಯದ ವಾತಾವರಣ. ಮಾರಾಟವಾಗದೇ ಇರುವ ಲಸಿಕೆಯನ್ನು ಸೇಲ್ ಮಾಡಲು, ಸೃಷ್ಟಿಸಲಾಗಿರುವ ವೈರಾಣುಗಳಿವು.

ಮಾಸ್ಕ್ ಧರಿಸು ಎನ್ನುತ್ತಿದ್ದಾವೆ

ಮಾಸ್ಕ್ ಧರಿಸು ಎನ್ನುತ್ತಿದ್ದಾವೆ

2009ರಲ್ಲಿ ಮಾಸ್ಕ್ ಧರಿಸುವುದು ಹಾನಿಕರ ಎಂದು ಹೇಳುವ ವರ್ಗವೇ, ಈಗ ಮಾಸ್ಕ್ ಧರಿಸು ಎನ್ನುತ್ತಿದ್ದಾವೆ. ಇದರಿಂದ, ಬೇರೆಯವರನ್ನು ರಕ್ಷಿಸುವುದು ಆಮೇಲೆ, ಮೊದಲು ನಿಮ್ಮನ್ನು ನೀವು, ರಕ್ಷಿಸಿಕೊಳ್ಳಲು ಇದು ಸರಿಯಾದ ವಿಧಾನವೇ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಲಬೇಕಿದೆ. ನಿಮ್ಮ ಉಸಿರನ್ನೇ ನೀವು ಮತ್ತೆಮತ್ತೆ ಸೇವಿಸಿದರೆ, ಇದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲವೇ ಎನ್ನುವುದನ್ನು ನಿಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಅನ್ನು ಒಮ್ಮೆ ಕೇಳಿಕೊಳ್ಳಿ.

  GT Devegowda : ರಾಜಕೀಯದಲ್ಲಿ ಯಾರೂ ಶತ್ರು ಅಲ್ಲಾ!! | Oneindia Kannada
  ನಮಸ್ಕಾರ ಎನ್ನುವ ಸಂಪ್ರದಾಯ

  ನಮಸ್ಕಾರ ಎನ್ನುವ ಸಂಪ್ರದಾಯ

  ನಮಸ್ಕಾರ ಎಂದು ಇನ್ನೊಬ್ಬರನ್ನು ಭೇಟಿಯಾಗುವಾಗ ಎದುರಾಗುವ ಸಂಪ್ರದಾಯ ನಮ್ಮಲ್ಲಿದೆ. ಇದರಿಂದ, ಇನ್ನೊಬ್ಬರ ಕೈಯನ್ನು ಮುಟ್ಟದೇ ಇರಲು ನಮಗೆ ಅವಕಾಶವಿರುತ್ತದೆ. ಮಾಸ್ಕ್ ಧರಿಸಿದರೆ, ಕೊರೊನಾದಿಂದ ದೂರವಾಗಬಹುದು ಎನ್ನುವುದಕ್ಕೆ ಯಾವುದೇ ರುಜುವಾತಾದ ಪರೀಕ್ಷೆಗಳು ನಮ್ಮಲ್ಲಿ ಇದುವರೆಗೆ ಮಾಡಿಲ್ಲ ಎಂದು ಹೇಳುವ ಮೂಲಕ, ವೈರಾಣು ಎನ್ನುವ ವಿಚಾರದಲ್ಲಿ ಜನರನ್ನು ಭಯ ಪಡಿಸುವ ಕೆಲಸ ನಡೆಯುತ್ತಿದೆ ಎನ್ನುವುದು ಡಾ. ಹೆಗ್ಡೆಯವರ ಅಭಿಪ್ರಾಯ.

  English summary
  Wearig The Mask Is The Right Solution to Avoid The Spreading The Virus: BM Hegde Reaction,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X