ಕ್ಷಿಪ್ರ ರಾಜಕೀಯ ಬೆಳವಣಿಗೆ: ಖರ್ಗೆ ಹೇಳುವುದೇನು?

ಬೆಂಗಳೂರು, ಜುಲೈ 07: ಕರ್ನಾಟಕದ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳು ಆಗುತ್ತಿವೆ. ಪರಿಸ್ಥಿತಿ ಹೇಗಿದೆಯೆಂದರೆ ಸಿಎಂ ಕುರ್ಚಿ ಯಾವಾಗ ಯಾರ ಪಾಲಾಗುತ್ತದೆಯೆಂದು ಹೇಳಲಾಗುತ್ತಿಲ್ಲ.

ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ಅವರ ಹೆಸರು ಕಡಿಮೆ ಅವಧಿಯಲ್ಲಿ ಮತ್ತೆ ಸಿಎಂ ಪಟ್ಟಕ್ಕೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಸ್ವತಃ ಖರ್ಗೆ ಅವರಿಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.

ಖರ್ಗೆ ಅವರು ಸಿಎಂ ಕುರ್ಚಿಯನ್ನು ನಿರಾಕರಿಸಿಲ್ಲ ಬದಲಿಗೆ ಆ ಬಗ್ಗೆ ಮಾಹಿತಿ ಇಲ್ಲವೆಂದಷ್ಟೆ ಹೇಳಿದ್ದಾರೆ. ಮುಂದುವರೆದು ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲಿ ಎಂಬುದಷ್ಟೆ ನನ್ನ ಉದ್ದೇಶವೇ ಹೊರತು ಬೇರೇನು ಇಲ್ಲವೆಂದು ಹಿರಿಯ ರಾಜಕಾರಣಿಯಂತೆಯೇ ಉತ್ತರಿಸಿದ್ದಾರೆ.

we want that this should go on smoothly: Mallikarjun Kharge

ಕೆಲವು ಸುಳ್ಳು ಮಾಹಿತಿಗಳನ್ನು ಮಾಧ್ಯಮಗಳಿಗೆ ಉದ್ದೇಶಪೂರ್ವಕವಾಗಿಯೇ ಹರಿಬಿಡಲಾಗುತ್ತಿದೆ. ನಮ್ಮನ್ನು (ಕಾಂಗ್ರೆಸ್‌ ನಾಯಕರನ್ನು) ದೂರ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಅತೃಪ್ತರ ನಾಯಕತ್ವ ವಹಿಸಿರುವ ರಾಮಲಿಂಗಾ ರೆಡ್ಡಿ ಅವರ ಬಗ್ಗೆ ಮಾತನಾಡಿರುವ ಖರ್ಗೆ, ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್‌ನ ಹಿರಿಯರು, ಬೆಂಗಳೂರಿನ ಪ್ರಮುಖ ರಾಜಕೀಯ ಮುಖಂಡರು, ಅವರ ಕುಂದುಕೊರತೆಗಳು ಏನು? ಮತ್ತು ಅದಕ್ಕಾಗಿ ನಾವು ಏನು ಮಾಡಬೇಕು ಎಂದು ಕೇಳುತ್ತೇವೆ ಎಂದು ಖರ್ಗೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+