DK Shivakumar: ನಮ್ಮ ನೆರಳನ್ನೂ ನಾವು ನಂಬಬಾರದು ಎಂದ ಡಿ ಕೆ ಶಿವಕುಮಾರ್: ಕಾರಣವೇನು?
ಬೆಂಗಳೂರು, ಫೆಬ್ರವರಿ 13: 2023 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಸೂತ್ರದ ಕುರಿತು ಗುಸು ಗುಸು ನಡೆಯುತ್ತಿದೆ. ಕೆಲ ತಿಂಗಳ ಹಿಂದೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಅಧಿಕಾರ ಹಂಚಿಕೆ ಕುರಿತು ಚರ್ಚೆಯಾಗಿರುವುದು ನಿಜ ಎಂದು ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚನಲವನ್ ಸೃಷ್ಟಿಸಿತ್ತು. ಆ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಯನ್ನ ಸಿಎಂ ಸಿದ್ದರಾಮಯ್ಯ ಅವರು ತಳ್ಳಿ ಹಾಕಿದ್ರು.
ಇದೀಗ ಸಿದ್ಧರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿ ದಾಖಲೆ ಬರೆಯಲು ಉತ್ಸುಕವಾಗಿದ್ದು, ರಾಜಕೀಯ ನಿವೃತ್ತಿಯನ್ನು ತಳ್ಳಿ ಹಾಕಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವನ್ನೂ ನೀಡಿದ್ದಾರೆ. ದೇವರಾಜ ಅರಸು ಅವರು 7 ವರ್ಷ 7 ತಿಂಗಳು ಸಿಎಂ ಆಗಿದ್ದರು. ಇದಕ್ಕೂ ಹೆಚ್ಚಿನ ಕಾಲ ಮುಖ್ಯಮಂತ್ರಿಯಾಗಿರುವ ಬಯಕೆಯನ್ನು ಸಿಎಂ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಅವರ ಮಾತಿಗೆ ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಸಹ ಟಾಂಗ್ ಕೊಟ್ಟಂತೆ ಕಾಣುತ್ತಿದೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಪಕ್ಷ ನಿಷ್ಠರಿಗೆ ಒಳ್ಳೆಯ ದಿನಗಳು ಬರುವ ಆಶಾಭಾವನೆಯನ್ನು ವ್ಯಕ್ತಪಸಿದ್ದಾರೆ. ಅಲ್ಲದೇ ನಮ್ಮ ನೆರಳನ್ನೂ ನಾವು ನಂಬಬಾರದು ಎಂದು ಒಗಟಾಗಿ ಹೇಳಿದ್ದಾರೆ. ನಾಯಕರಿಗೆ ಸಮಾಧಾನ ಇರದೇ ಇರಬಹುದು. ಆದರೆ ಸಾರ್ವಜನಿಕರು ನಮ್ಮ ಪರ ಇದ್ದಾರೆ. ಕೆಲವು ಸತ್ಯಗಳನ್ನು ಹೇಳೋಕೆ ಆಗಲ್ಲ. ಪಾರ್ಟಿಗೆ ಲಾಯಲ್ ಆಗಿರು ಭವಿಷ್ಯ ಇದೆ ಅಂತಾ ದೊಡ್ಡ ನಾಯಕರು ಹೇಳಿದ್ದಾರೆ.ರಾಜೀವ್ ಗಾಂಧಿ ಇಂದಿರಾಗಾಂಧಿ ಬೆಳೆಸಿದ್ದಾರೆ ಎಂದು ಹೇಳಿದರು.
ನಂಗೆ ಎಲ್ಲರೂ ಸ್ನೇಹಿತರೇ. ನನ್ನ ಮಕ್ಕಳಿಗೆ ಒಂದ್ ಪಾಠ ಹೇಳ್ತೀನಿ ನಿಮ್ಮ ನೆರಳನ್ನೂ ನೀವು ನಂಬಬಾರದು. ತುಂಬಾ ಕಾನ್ಶಿಯಸ್ ಇರಬೇಕು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲು..ಹಾಗಂತ ನಂಬಿಕೆ ಇರದೇ ಬದುಕೋಕೆ ಆಗಲ್ಲ.. ಆಶಾಭಾವನೆ ಇರಲಿ.. ನಾನು ಇದನ್ನೇ ಆಳವಡಿಸಿಕೊಂಡಿದ್ದೇನೆ. ನನಗೆ ಬಿದ್ದ ಪೆಟ್ಟು ಇದನ್ನೆಲ್ಲ ನಾನು ಮರಿಯಬಾರದು. ತುಂಬಾ ಕಮಿಟ್ಮೆಂಟ್ ಇದೆ.. ಅದಕ್ಕೆ ಪಾಲಿಟಿಕ್ಸ್ ಗೆ ಬರೋದು ಬೇಡ ನೀವು ಅಂತಾ ಮಕ್ಕಳಿಗೆ ಹೇಳಿದ್ದೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಸಾರ್ವಜನಿಕ ಬದುಕಲ್ಲಿ ನಂಗೆ ಯಾವಾಗ್ಲೂ ಬೆಳಕು ಇದ್ದೆ ಇರುತ್ತದೆ. ಬೆಳಕು ನೋಡಿದ್ದಕ್ಕೆ ಇದುವರೆಗೆ ಬಂದಿದ್ದೇನೆ. ನಾನು ಆಶಾಭಾವನೆಯಿಂದ ಇದ್ದೇನೆ. ದೀಪದ ಬೆಳಕು ಜೊತೆ ಬತ್ತಿ ಇದೆ ಎಣ್ಣೆಯೂ ಇದೆ. ಎಣ್ಣೆ ಯೂ ಆಗಬೇಕು. ಬತ್ತಿಯೂ ಆಗಬೇಕು..ಕಾಯುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.












Click it and Unblock the Notifications