ವಿಡಿಯೋ: ಪ್ರವಾಹದಲ್ಲಿ ಮುಳುಗದಿರಲು ಲೈಫ್ ಜಾಕೆಟ್ ತಯಾರಿಸಿಕೊಳ್ಳುವುದು ಹೀಗೆ
ಕೊಡಗು, ಆಗಸ್ಟ್ 18: ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಎಲ್ಲಿ ನೋಡಿದರೂ ನೀರು, ಕೊಡಗಿನಲ್ಲಂತೂ ಪ್ರವಾಹ ತಲೆದೂರಿದೆ. ಹವಾಮಾನ ವೈಪರಿತ್ಯದಿಂದಾಗಿ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ. ಇಂತಹಾ ಸಮಯದಲ್ಲಿ ಸಹಾಯಕ್ಕೆ ಕಾಯದೆ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳುವುದು ಜಾಣತನ.
ಪ್ರವಾಹದಲ್ಲಿ ಮುಳುಗದಂತೆ ಇರುವ ವಸ್ತುಗಳಿಂದಲೇ ಕೆಲವೇ ನಿಮಿಷದಲ್ಲಿ ಲೈಫ್ ಜಾಕೆಟ್ (ಜೀವ ರಕ್ಷಕ ಜಾಕೆಟ್) ತಯಾರಿಸಿಕೊಳ್ಳಬಹುದು, ಇದು ಈಜು ಬರದವರನ್ನು ಮುಳುಗಿಸದೆ ಪ್ರವಾಹ ಸಂದರ್ಭದಲ್ಲಿ ಜೀವ ಉಳಿಸಬಲ್ಲದು.
A simple hack to make a life jacket-- pic.twitter.com/HnLHJ2Su2i
— D Roopa IPS (@D_Roopa_IPS) August 17, 2018
ಮನೆಯಲ್ಲಿ ಬದ್ದಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದುಕೊಂಡು (ತೂತು ಇರದಿರಲಿ) ಧರಿಸಿರು ಅಂಗಿಯ ಒಳಕ್ಕೆ ಇಟ್ಟುಕೊಂಡು, ಸಾಲಾಗಿ ಇಟ್ಟುಕೊಂಡು ದಾರದಿಂದ ಬಿಗಿಯಾಗಿ ಕಟ್ಟಿದರೆ ಸಾಕು ಲೈಫ್ ಜಾಕೆಟ್ ತಯಾರು.

ಹೆಚ್ಚಿನ ಬಾಟಲಿಗಳಿದ್ದರೆ ಹೆಚ್ಚು ಉತ್ತಮ. ಅಂಗಿಗೆ ಹೋಲ್ ಮಾಡಿ ಬಾಟಲಿಗಳ ಮುಚ್ಚಳವನ್ನು ಅಂಗಿಯ ಹೊರಭಾಗದಿಂದ ಬಾಟಲಿಗಳಿಗೆ ಹಾಕಿದರೆ (ವಿಡಿಯೋ ನೋಡಿ) ಹೆಚ್ಚು ಭದ್ರವಾಗಿರುತ್ತದೆ.
ಬಾಟಲಿಗಳಿಂದ ಕೆಲವೇ ನಿಮಿಷದಲ್ಲಿ ಲೈಫ್ ಜಾಕೆಟ್ ಮಾಡುವ ವಿಧಾನ ಹೇಗೆ ಎಂದು ತೋರಿಸುವ ವಿಡಿಯೋವನ್ನು ಪೊಲೀಸ್ ಹಿರಿಯ ಅಧಿಕಾರಿ ರೂಪಾ ಅವರು ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿರುವ ವಿಡಿಯೋ ನೋಡಿ ಲೈಫ್ ಜಾಕೆಟ್ ತಯಾರು ಮಾಡಿಕೊಳ್ಳಿ.












Click it and Unblock the Notifications