ತನ್ವೀರ್ ಮೊಬೈಲಲ್ಲಿದ್ದ ಅಶ್ಲೀಲ ತಸ್ವೀರ್ ಯಾರದ್ದು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 16 : ಮೊದಲಿಗೆ ತನ್ವೀರ್ ಸೇಠ್ ಸಾಹೇಬರು ತಿಂಗಳಾನುಗಟ್ಟಲೆ ಮನೆಯಿಂದ ಹೊರ ಇರುತ್ತಿದ್ದರಿಂದ ಹೀಗಾಗುತ್ತದೆ ಎಂದರು. ನಂತರ ನಾನು ಅಶ್ಲೀಲ ಚಿತ್ರಗಳನ್ನು ನೋಡೇ ಇಲ್ಲ, ನನ್ನ ಇಮೇಜಿಗೆ ಧಕ್ಕೆ ತರಬೇಕೆಂದೇ ಮಾಧ್ಯಮದವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅಂದರು.

ಇದು ಸಾಲದೆಂಬಂತೆ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದಕ್ಕೂ, ಹೊರಗಡೆ ನೋಡುವುದಕ್ಕೂ ವ್ಯತ್ಯಾಸವಿಲ್ಲವೆ ಎಂದು ತಿಪ್ಪೆ ಸಾರಿದ್ದರು. ಸೇಠ್ ಅವರು ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ, ಜೆಡಿಎಸ್ ಪಟ್ಟು ಕೂಡ ಹಿಡಿದಿದ್ದಾರೆ. [ವಿಧಾನಸಭೇಲಿ ನೋಡಿದ್ದು, ಸಾರ್ವಜನಿಕ ಸಮಾರಂಭದಲ್ಲಿ ನೋಡೋದು ಒಂದೇ ಅಲ್ಲ]

Was Karnataka minister viewing old pictures of Melania Trump

ಇದೆಲ್ಲದರ ಸಾರಾಂಶವೇನೆಂದರೆ, ಟಿಪ್ಪು ಸುಲ್ತಾನ್ ಜಯಂತಿಯಂದು ರಾಯಚೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಮತ್ತು ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಅಶ್ಲೀಲ ಚಿತ್ರ ನೋಡಿದ್ದಂತೂ ನಿಜ, ಆದರೆ ಅದು ಅಂತಹ ತಪ್ಪಲ್ಲ ಎಂಬ ವಾದ.

ಈ ವಾದವಿವಾದಗಳೇನೇ ಇರಲಿ, ಅವರು ತಮ್ಮ ಸ್ಮಾರ್ಟ್ ಫೋನಿನಲ್ಲಿ ನೋಡುತ್ತಿದ್ದ ಅಶ್ಲೀಲ ಚಿತ್ರಗಳಲ್ಲಿ ಇದ್ದದ್ದಾದರೂ ಯಾರು? ಪೊಲೀಸರು ತರಿಸಿಕೊಂಡು ನೋಡಿರುವ ವಿಡಿಯೋ ಫುಟೇಜಿನಲ್ಲಿ ಆ ವ್ಯಕ್ತಿಯ ವಿವರಗಳು ಬಯಲಾಗಿವೆ. [ಟಿವಿ9 ವಿರುದ್ಧ ತನ್ವೀರ್ ಮಾನನಷ್ಟ ಮೊಕದ್ದಮೆ]

Was Karnataka minister viewing old pictures of Melania Trump

ಆ ಮೊಬೈಲಿನಲ್ಲಿದ್ದ ವ್ಯಕ್ತಿ ಮತ್ತಾರೂ ಅಲ್ಲ, ಇದೀಗ ತಾನೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಧರ್ಮಪತ್ನಿ, ಅಮೆರಿಕದ ಮಾಜಿ ರೂಪದರ್ಶಿ 46 ವರ್ಷದ ಮೆಲಾನಿಯಾ ಟ್ರಂಪ್! ದಶಕಗಳ ಹಿಂದೆ ರೂಪದರ್ಶಿಯಾಗಿದ್ದಾಗ ತೆಗೆಸಿಕೊಂಡ ಚಿತ್ರಗಳು ಸನ್ಮಾನ್ಯ ಸೇಠ್ ಅವರ ಮೊಬೈಲಿನಲ್ಲಿ ಬಂದು ಬಿದ್ದಿದ್ದವು. ಅವನ್ನು ಇವರು ನೋಡುತ್ತಿದ್ದರು.

ಅವರ ಮೊಬೈಲಿಗೆ ಮೆಲಾನಿಯಾ ಟ್ರಂಪ್ ಅವರ ಅಶ್ಲೀಲ ಚಿತ್ರಗಳು ಬಂದದ್ದಾದರೂ ಹೇಗೆ? ಯಾರು ಅವರಿಗೆ ಈ ಚಿತ್ರಗಳನ್ನು ಕಳಿಸಿದ್ದು? ಕಳಿಸಿದ್ದು ಸರಿಯಾದರೂ ಇವರು ಸಾರ್ವಜನಿಕರ ಸಭೆಯಲ್ಲಿ, ಸರಕಾರಿ ಸಮಾರಂಭದಲ್ಲಿ ನೋಡಿದ್ದಾದರೂ ಯಾಕೆ? ತನಿಖೆ ಆಗಲಿ. [ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಿಚಿತ್ರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It was photographs of Melania Trump that Karnataka education minister, Tanveer Sait was allegedly surfing on his mobile during a government function. The police who sourced the video footage of the minister surfing photographs found that he was looking at pictures of Melania which were shot over a decade back.
Please Wait while comments are loading...