ಕಲಬುರಗಿ : ಮೇ 21ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

Posted By:
Subscribe to Oneindia Kannada

ಕಲಬುರಗಿ, ಮೇ 19 : ಕಲಬುರಗಿ ಜಿಲ್ಲಾ ಪಂಚಾಯಿತಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಿದೆ. ಮೇ 21ರಂದು ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ನಡೆಯಲಿದೆ.

ಕಲಬುರಗಿಯಲ್ಲಿರುವ ಪಂಜಾಬ್ ರಾಜ್ಯದ ಮೊಹಾಲಿಯ ಮೆ.ಟಿ.ಡಿ.ಎಸ್. ಮ್ಯಾನೇಜಮೆಂಟ್ ಕನ್ಸ್‌ಲ್ಟ್‌ಟೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ. ತಿಳಿಸಿದ್ದಾರೆ. [ಇಸ್ರೋದಲ್ಲಿ ವಿಜ್ಞಾನಿ/ಇಂಜಿನಿಯರ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ]

jobs

ಹುದ್ದೆಗಳ ವಿವರ : ಜಿಲ್ಲಾ ಒಗ್ಗೂಡಿಸುವಿಕೆ ಸಂಯೋಜಕ 1. ಸಂದರ್ಶನಕ್ಕೆ ಆಗಮಿಸುವವರು ಬಿಎಸ್‌ಸಿ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಜಿಲ್ಲಾ ಮಾನವ ಸಂಪನ್ಮೂಲ ಸಂಯೋಜಕ 1 ಹುದ್ದೆ. ಬಿಕಾಂ/ಬಿಬಿಎ/ಬಿಸಿಎ/ಎಂಬಿಎ (ಹೆಚ್‍ಆರ್) ವಿದ್ಯಾರ್ಹತೆ ಹೊಂದಿರಬೇಕು. [ವಿಜಯಪುರ ಹಾಲು ಉತ್ಪಾದಕರ ಸಂಘದಲ್ಲಿ ಕೆಲಸ ಖಾಲಿ ಇದೆ]

ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ 1 ಹುದ್ದೆ. ಯಾವುದೇ ಪದವಿಯೊಂದಿಗೆ ವೆಬ್ ಡಿಸೈನಿಂಗ್, ಎಡಿಟಿಂಗ್‌ನಲ್ಲಿ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಜಿಲ್ಲಾ ಎಮ್‍ಐಎಸ್ ಸಂಯೋಜಕ 1 ಹುದ್ದೆ. ಬಿಇ(ಸಿಎಸ್)ದೊಂದಿಗೆ ಎಮ್‍ಐಎಸ್ ಸಾಫ್ಟ್‌ವೇರ್ ಇತ್ಯಾದಿಗಳಲ್ಲಿ ಅನುಭವ ಹೊಂದಿರಬೇಕು. [ಕರ್ನಾಟಕ : ಉಗ್ರಾಣ ನಿಗಮದಲ್ಲಿ ಕೆಲಸ ಖಾಲಿ ಇದೆ]

ತಾಲೂಕು ಒಗ್ಗೂಡಿಸುವಿಕೆ ಸಂಯೋಜಕ 7 ಹುದ್ದೆಗಳು. ಬಿಎಸ್ಸಿ ಪದವಿ ಹೊಂದಿರುವವರು ಸಂದರ್ಶನಕ್ಕೆ ಆಗಮಿಸಬಹುದು. ತಾಲೂಕು ಎಂಐಎಸ್ ಸಂಯೋಜಕ 2 ಹುದ್ದೆಗಳು. ಬಿಸಿಎ, ಬಿಎಸ್ಸಿ(ಸಿಎಸ್), ಡಿಪ್ಲೋಮಾ (ಸಿಎಸ್) ನಲ್ಲಿ ಕನಿಷ್ಠ ಶೇ.45 ಅಂಕ ಪಡೆದಿರಬೇಕು ಮತ್ತು ಕಂಪ್ಯೂಟರ್ ಮತ್ತು ಎಮ್‍ಎಸ್ ಆಫೀಸ್‍ ಜ್ಞಾನ ಹೊಂದಿರಬೇಕು. ತಾಲೂಕು ಗಣಕಯಂತ್ರ ಬೆರಳಚ್ಚುಗಾರ 6 ಹುದ್ದೆಗಳು. ಪಿಯುಸಿ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಅರ್ಹ ಅಭ್ಯರ್ಥಿಗಳು ಸ್ವಯಂ ಲಿಖಿತ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಮೇ 21ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿ ಐವಾನ್-ಇ-ಶಾಹಿ ಬಡಾವಣೆಯ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಜರುಗುವ ಸಂದರ್ಶನಕ್ಕೆ ಹಾಜರಾಗಬೇಕೆಂದು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯವನ್ನು ಸಂಪರ್ಕಿಸಬಹುದು. [ಮಾಹಿತಿ : ಕಲಬುರಗಿ ವಾರ್ತೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi zilla panchayat invited applications for various posts under Mahatma Gandhi Udyog Khatri Yojane. Walk in interview on May 21, 2016.
Please Wait while comments are loading...