3 ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ?
ಬೆಂಗಳೂರು, ಏಪ್ರಿಲ್ 18: ಇಂದು ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಭವಾಗಿರುವ ಮತದಾನ ಸಾಧಾರಣ ವೇಗದಲ್ಲಿ ನಡೆಯುತ್ತಿದ್ದ 3 ಗಂಟೆ ವೇಳೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ 48.97% ಮತ ಚಲಾವಣೆ ಆಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ಮತದಾನಿಗಳು ಇನ್ನೂ ಚುರುಕಾಗಿಲ್ಲ ಎಂದು ಈವರೆಗಿನ ಅಂಕಿ-ಸಂಖ್ಯೆ ಹೇಳುತ್ತಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 3 ಗಂಟೆ ವರೆಗೆ ಕೇವಲ 39.07% ಮತದಾನವಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈವರೆಗೆ 40.58 % ಮತದಾನವಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕೇವಲ 36.51% ಮತದಾನವಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 44.46% ಮತದಾನ ಆಗಿದೆ. ಚಿಕ್ಕಬಳ್ಳಾಪುರದಲ್ಲಿ 55.07% ಮತಚಲಾವಣೆ ಆಗಿದೆ. ಪ್ರಮುಖ ಚುನಾವಣಾ ಕಣ ಮಂಡ್ಯದಲ್ಲಿ 3 ಗಂಟೆ ವರೆಗೆ ಆಗಿರುವ ಮತದಾನ ಕೇವಲ 55.11%.

ಹಾಸನದಲ್ಲಿ 54.74%, ಚಿತ್ರದುರ್ಗದಲ್ಲಿ 49.25%, ಕೋಲಾರದಲ್ಲಿ 52.50% , ಚಾಮರಾಜನಗರದಲ್ಲಿ 50.76%, ತುಮಕೂರಿನಲ್ಲಿ 54.68%, ಮೈಸೂರಿನಲ್ಲಿ 50.39% ಮತದಾನವಾಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು 56.44% ಮತದಾನವಾಗಿದ್ದರೆ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 60.46% ಮತ ಚಲಾವಣೆ ಆಗಿದೆ. ಈ ಎರಡು ಕ್ಷೇತ್ರಗಳಲ್ಲಿ ಉಳಿದವುಗಳಿಗಿಂತಲೂ ಹೆಚ್ಚಿನ ಮತದಾನವಾಗಿದೆ.
ಈ ಅಂಕಿ-ಸಂಖ್ಯೆ ಬೆಳಿಗ್ಗೆ 7 ಗಂಟೆ ಇಂದ 3 ಗಂಟೆ ವರೆಗು ಆಗಿರುವ ಮತದಾನದ್ದು ಮಾತ್ರವೇ. ಸಂಜೆ ಆರು ಗಂಟೆ ವರೆಗೂ ಮತದಾನ ನಡೆಯಲಿದ್ದು, ಮತದಾನ ಇನ್ನಷ್ಟು ಚುರುಕಾಗುವ ಎಲ್ಲ ಸಂಭವ ಇದೆ.












Click it and Unblock the Notifications