• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನರ್ಹರು ಯಾರು ಎಂಬುದು ನಿರ್ಧಾರವಾಗಿದೆ: ಶ್ರೀರಾಮುಲು

|
   ತುಂಬಾ ಖುಷಿಯಲ್ಲಿದ್ದಾರೆ ಶ್ರೀರಾಮುಲು.

   ಬೆಂಗಳೂರು, ಡಿಸೆಂಬರ್ 09: ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕದ 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶವು ಸೋಮವಾರ(ಡಿಸೆಂಬರ್ 09)ದಂದು ಹೊರ ಬಂದಿದೆ. ಬಿಜೆಪಿ ಬಹುತೇಕ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವತ್ತ ದಾಪುಗಾಲಿರಿಸಿದ್ದರೆ, ಕಾಂಗ್ರೆಸ್ 2, ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವುದು ಬಹುತೇಕ ಖಚಿತವಾಗಿದೆ. ಫಲಿತಾಂಶದ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

   ''ಅನರ್ಹರು ಯಾರು ಎಂಬುದನ್ನು ಮತದಾರರು ನಿರ್ಧರಿಸಿದ್ದಾರೆ. ನಮ್ಮ ಅಭ್ಯರ್ಥಿಗಳನ್ನು ಅನರ್ಹರು, ನಾಲಾಯಕ್ ಗಳು ಎಂದು ಟೀಕಿಸುತ್ತಾ ಜನರ ಮುಂದೆ ಹೋದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಆಡಳಿತ ನಡೆಸಲು ನೀವು ಅನರ್ಹರು ಎಂದು ನಿರ್ಧರಿಸುವ ಮೂಲಕ ಮತದಾರ ಪ್ರಭುಗಳು ಸೂಕ್ತ ಉತ್ತರ ಕೊಟ್ಟಿದ್ದಾರೆ'' ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

   By-Election Results 2019 LIVE: ಉಪಚುನಾವಣೆಯಲ್ಲಿ ಜೆಡಿಎಸ್‌ ಧೂಳಿಪಟ

   ಜೊತೆಗೆ ಹೆಚ್ಚು ಸ್ಥಾನ ನೀಡಿ ಸರ್ಕಾರವನ್ನು ಸೇಫ್ ಮಾಡಿದ ಮತದಾರರಿಗೂ ಧನ್ಯವಾದ ಅರ್ಪಿಸಿ, "ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡಿ ರಾಜ್ಯದಲ್ಲಿ ಸ್ಥಿರ ಮತ್ತು ಅಭಿವೃದ್ಧಿಯ ಆಡಳಿತವನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಮತ್ತು ಅಭಿನಂದನೆಗಳು'' ಎಂದು ಟ್ವೀಟ್ ಮಾಡಿದ್ದಾರೆ.

   ಸದ್ಯದ ಟ್ರೆಂಡ್ ಹೀಗಿದೆ:

   ಯಲ್ಲಾಪುರದಲ್ಲಿ ಬಿಜೆಪಿಯ ಅರೇಬೈಲ್ ಶಿವರಾಂ ಹೆಬ್ಬಾರ್ ಗೆ ಜಯ.

   ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿಗೆ ಸೋಲು.

   ಮಾಜಿ ಸಚಿವ ಎಚ್. ವಿಶ್ವನಾಥ್ ಗೆ ಸೋಲು, ಮಂಜುನಾಥ್ ಗೆ ಜಯ .

   ಸ್ಪೀಕರ್ ರಮೇಶಕುಮಾರ್ ಅವರೇ ಈಗ ಅನರ್ಹರಾಗಿದ್ದಾರೆ: ಶಿವರಾಮ ಹೆಬ್ಬಾರ್

   ಮಹಾಲಕ್ಷ್ಮಿ ಲೇಔಟಿನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯಗೆ ಗೆಲುವು.

   ಕೆ. ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡಗೆ ಜಯ.

   ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್ ಗೆ ಗೆಲುವಿನ ಸಂಭ್ರಮ .

   ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಗೆಲುವು.

   ಕಾಗವಾಡದಲ್ಲಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್.

   ವಿಜಯನಗರದಲ್ಲಿಗೆಲುವಿನ ಸನಿಹದಲ್ಲಿ ಬಿಜೆಪಿಯ ಆನಂದ್ ಸಿಂಗ್.

   ಕೆ.ಆರ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಗೆಲುವಿನತ್ತ.

   ಯಶವಂತಪುರದಲ್ಲಿ ಎಸ್ ಟಿ ಸೋಮಶೇಖರ್ ಗೆ ಅಲ್ಪ ಮುನ್ನಡೆ .

   ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಮುನ್ನಡೆ.

   ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆ ಮುನ್ನಡೆ

   ಗೋಕಾಕದಲ್ಲಿ 15ನೇ ಸುತ್ತಿನ ನಂತರ ರಮೇಶ್ ಜಾರಕಿಹೊಳಿಗೆ ಮುನ್ನಡೆ

   English summary
   Voters verdict is out, now Disqualified MLAs fate decided said minister B Sriramulu after the Karnataka by elections results.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X