ಮತದಾನ ಕುರಿತು ಆಕ್ಷೇಪಣೆ ಸಲ್ಲಿಸಿ: ಸುಳ್ಳಾದರೆ ಕ್ರಮ ಎದುರಿಸಿ

ಬೆಂಗಳೂರು, ಫೆಬ್ರವರಿ 28 : ಮತಚಲಾವಣೆ ಕುರಿತು ಅನುಮಾನ ಬಂದಲ್ಲಿ ಮತದಾರರು ಆಕ್ಷೇಪಣೆ ಸಲ್ಲಿಸಬಹುದು, ಒಂದೊಮ್ಮೆ ದೋಷವಿಲ್ಲದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಚಲಾವಣೆ ಕುರಿತು ಮತದಾರರಿಗೆ ಅನುಮಾನವಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಮುಕ್ತ ಅವಕಾಶವಿದೆ. ಆದರೆ ಯಾವುದೇ ದೋಷಗಳಿಲ್ಲದಿದ್ದರೆ ಮತದಾರರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮತದಾನ ಮಾಡಿದ ನಂತರ 7 ಸೆಕೆಂಡ್ ಗಳ ಕಾಲ ಯಾರಿಗೆ ಮತಚಲಾಯಿಸಿದ್ದೇವೆ ಎಂದು ನೋಡಲು ಅವಕಾಶವಿರುತ್ತದೆ. ಹಾಗಾಗಿ ಸಂಜೆ 1 ಗಂಟೆ ಮತದಾನ ಸಮಯವನ್ನು ವಿಸ್ತಿರಿಸಲಾಗಿದೆ. ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹೊಸದಾಗಿ ವಿವಿ ಪ್ಯಾಟ್ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ.

Voters can file objection on polling, but to face action

ರಾಜ್ಯ ವಿಧಾನಸಭಾ ಚುನಾವಣೆಗೆ ಬೆಂಗಳೂರು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಗುಜರಾತ್ ರಾಜ್ಯದಿಂದ 3860 ಮತ ಯಂತ್ರಗಳನ್ನು ನಗರಕ್ಕೆ ತರಲಾಗಿದೆ.

ಪ್ರಸ್ತುತ ಏಳು ವಿಧಾನಸಭಾ ಕ್ಷೇತ್ರಗಳಿಗೆ ಅಗತ್ಯ ಇರುವಷ್ಟು ಮತಯಂತ್ರಗಳು ಆಗಮಿಸಿವೆ. ಗುಜರಾತ್ ನಿಂದ ಆಗಮಿಸಿರುವ 3860 ಮತಯಂತ್ರಗಳ ಪೈಕಿ 3090 ಬ್ಯಾಲೆಟ್ ಯುನಿಟ್, 770 ಕಂಟ್ರೋಲ್ ಯುನಿಟ್ ಆಗಿವೆ. ಅಲ್ಲದೇ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗುತ್ತಿರುವ ವಿವಿ ಪ್ಯಾಟ್ ಗಳು ಸಹ ಬಂದಿವೆ. ಮತಯಂತ್ರ ಮತ್ತು ವಿವಿ ಪ್ಯಾಟ್ ಗಳನ್ನು ಕಂದಾಯ ಭವನದ ಭದ್ರತಾ ಕೊಠಡಿಯಲ್ಲಿ ಸಂರಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+