ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Voter Data Theft: ಚಿಲುಮೆ ಮುಖ್ಯಸ್ಥ ರವಿಕುಮಾರ್ ಬಂಧನ

|
Google Oneindia Kannada News

ಬೆಂಗಳೂರು, ನ. 21: ಮತದಾರರ ಪಟ್ಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎನ್‌ಜಿಒ ಚಿಲುಮೆ ಟ್ರಸ್ಟ್‌ನ ಸಂಸ್ಥಾಪಕ ನಿರ್ದೇಶಕ ಕೆ. ರವಿಕುಮಾರ್‌ರನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯ ವಿಶೇಷ ತಂಡ ಭಾನುವಾರ ಬಂಧಿಸಿದೆ.

ಶುಕ್ರವಾರ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ರವಿಕುಮಾರ್ ನಾಪತ್ತೆಯಾಗಿದ್ದರು. ಭಾನುವಾರ ಹಲಸೂರು ಗೇಟ್ ಪೊಲೀಸರು ಕೃಷ್ಣಪ್ಪ ರವಿಕುಮಾರ್‌ರನ್ನು ಲಾಲ್‌ಬಾಗ್ ರಸ್ತೆಯಲ್ಲಿ ಬಂಧಿಸಿದ್ದಾರೆ.

Voter Data Theft: 'ಚಿಲುಮೆ' ಬೇಡಿಕೆಗೆ ರಾಜಕಾರಣಿಗಳ ಒಪ್ಪಿಗೆ- ಮೇಲ್‌ನಲ್ಲೇ ಮುಗಿದ ಡೀಲಿಂಗ್‌Voter Data Theft: 'ಚಿಲುಮೆ' ಬೇಡಿಕೆಗೆ ರಾಜಕಾರಣಿಗಳ ಒಪ್ಪಿಗೆ- ಮೇಲ್‌ನಲ್ಲೇ ಮುಗಿದ ಡೀಲಿಂಗ್‌

ಬಂಧಿತ ಕೃಷ್ಣಪ್ಪ ರವಿಕುಮಾರ್ ಚಿಲುಮೆ ಎಜುಕೇಶನಲ್ ಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನ ಸಹ ಸಂಸ್ಥಾಪಕರಾಗಿದ್ದಾರೆ. ವೋಟರ್ ಐಡಿ ಹಗರಣ ಬಯಲಾದ ಬಳಿಕ ಅವರು ತಲೆಮರೆಸಿಕೊಂಡಿದ್ದರು.

Voter Data Theft Case: Chilume Co-founder Ravikumar arrested

ಹಲಸೂರು ಗೇಟ್ ಪೊಲೀಸರು ಈ ಹಿಂದೆ ಡಿಜಿಟಲ್ ಸಮೀಕ್ಷಾ ಆ್ಯಪ್ ಅಭಿವೃದ್ಧಿಪಡಿಸಿದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಬಂಧಿಸಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಮತ್ತು ಮತದಾರರ ಗುರುತಿನ ಪಟ್ಟಿಗಳಲ್ಲಿ ತಮ್ಮ ವಿವರಗಳನ್ನು ಹೇಗೆ ನವೀಕರಿಸಬೇಕು ಎಂಬುದನ್ನು ವಿವರಿಸಿದ ಎಂಜಿನಿಯರ್ ಅನ್ನು ತಾಂತ್ರಿಕ ವಿಶ್ಲೇಷಣಾ ತಜ್ಞರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವ ಕಾರಣ ವೋಟರ್ ಐಡಿ ಮಾಹಿತಿ ಸಂಗ್ರಹ ಪ್ರಕರಣ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಕಾಂಗ್ರೆಸ್ ಪಕ್ಷ ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

English summary
Voter Data Theft Case: Co-founder of Chilume Educational Cultural and Rural Development Trust Krishnappa Ravikumar arrested. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X