• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಪೀಕರ್‌ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆ

|
   ಕೆ.ಆರ್.ರಮೇಶ್‍ಕುಮಾರ್ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ | Oneindia Kannada

   ಬೆಂಗಳೂರು, ಜುಲೈ 31 : ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧವಾಗಿ ಆಯ್ಕೆಯಾದರು. ಕೆ. ಆರ್. ರಮೇಶ್ ಕುಮಾರ್ ರಾಜೀನಾಮೆಯಿಂದ ಸ್ಪೀಕರ್ ಸ್ಥಾನ ತೆರವಾಗಿತ್ತು.

   ಬುಧವಾರ ವಿಧಾನಸಭೆ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದನ್ನು ಸೂಚಿಸಿದರು. ಬಸವರಾಜ ಬೊಮ್ಮಾಯಿ ಈ ನಿರ್ಣಯವನ್ನು ಅಂಗೀಕರಿಸಿದರು.

   ರಮೇಶ್ ಕುಮಾರ್ ರಾಜೀನಾಮೆ: ಮುಂದಿನ ಸ್ಪೀಕರ್ ಯಾರು?ರಮೇಶ್ ಕುಮಾರ್ ರಾಜೀನಾಮೆ: ಮುಂದಿನ ಸ್ಪೀಕರ್ ಯಾರು?

   ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಯಾವ ಅಭ್ಯರ್ಥಿಗಳೂ ಸ್ಪೀಕರ್ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸದ ಕಾರಣ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧವಾಗಿ ವಿಧಾನ ಸಭಾಧ್ಯಕ್ಷರಾಗಿ ಆಯ್ಕೆಗೊಂಡರು. ನೂತನ ಸಭಾಧ್ಯಕ್ಷರನ್ನು ಪೀಠಕ್ಕೆ ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆತಂದರು.

   ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ

   ನೂತನ ಸ್ಪೀಕರ್‌ಗೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ, "ಎಬಿವಿಪಿ ಚಳುವಳಿ ಮೂಲಕ ಅನೇಕ ಹೋರಾಟಗಳಲ್ಲಿ ಬಾಗಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆರು ಭಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇವರು ಕಪ್ಪು ಚುಕ್ಜೆ ಇಲ್ಲದ ರಾಜಕಾರಣಿ" ಎಂದು ಬಣ್ಣಿಸಿದರು.

   ವಿಶ್ವಾಸಮತ ಗೆದ್ದ ಯಡಿಯೂರಪ್ಪ, 6 ತಿಂಗಳು ಸರ್ಕಾರ ಸೇಫ್ವಿಶ್ವಾಸಮತ ಗೆದ್ದ ಯಡಿಯೂರಪ್ಪ, 6 ತಿಂಗಳು ಸರ್ಕಾರ ಸೇಫ್

   ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, "ಸಂಸದೀಯ ಕಲಾಪಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಅದರ ಪರಂಪರೆಯನ್ನು ಎತ್ತಿ ಹಿಡಿಯುವ ಅಗತ್ಯವಿದೆ. ಆರು ಭಾರಿ ಆಯ್ಕೆಯಾದ ಇವರು ಉತ್ತಮ ಸಜ್ಜನಿಕೆ ಹೊಂದಿದ್ದಾರೆ. ಎಲ್ಲರ ಹಕ್ಕುಗಳನ್ನು ರಕ್ಷಣೆ. ಸತ್ಸಪ್ರಂದಾಯವನ್ನು ಮುಂದುವರಿಸಿಕೊಂಡು ಹೋಗಬೇಕಿದೆ" ಎಂದು ಕರೆ ನೀಡಿದರು.

   ಜೆಡಿಎಸ್ ನಾಯಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, "ಸದನದಲ್ಲಿ ಪ್ರತಿಪಕ್ಷದ ಜವಬ್ದಾರಿಯೂ ಹೆಚ್ಚಿದೆ. ವೈಕುಂಠ ಬಾಳಿಗರಂತೆ ಸದನದ ಗೌರವವನ್ನುಎತ್ತಿ ಹಿಡಿಯಬೇಕು, ವರ್ಷಕ್ಕೆ 60 ದಿನಗಳ ಕಾಲ ಕಲಾಪ ನಡೆಸಬೇಕಿದೆ" ಎಂದು ಹೇಳಿದರು.

   ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಹಿರಿಯ ನಾಯಕ ಆರ್. ವಿ. ದೇಶಪಾಂಡೆ ಮುಂತಾದ ನಾಯಕರು ನೂತನ ಸ್ಪೀಕರ್‌ಗೆ ಅಭಿನಂದನೆ ಸಲ್ಲಿಸಿದರು.

   English summary
   Sirsi BJP MLA Vishweshwar Hegde Kageri unanimously elected as Karnataka assembly speaker. Post vacant after K.R.Ramesh Kumar resignation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X