ಬಿಜೆಪಿಗೇ ಹೆಚ್ಚು ಮತ ನೀಡಿ ಎಂದ ಡಿಕೆಶಿ ವಿಡಿಯೋ ವೈರಲ್!

Recommended Video

      Lok Sabha Elections 2019: ಡಿ.ಕೆ.ಶಿವಕುಮಾರ್ ವಿಡಿಯೋ ವೈರಲ್

      ಬೆಂಗಳೂರು, ಏಪ್ರಿಲ್ 13: "ಕಾಂಗ್ರೆಸ್-ಜೆಡಿಎಸ್ ಗಿಂತ ಬಿಜೆಪಿಗೇ ಹೆಚ್ಚು ಮತ ಬೀಳುವಂತೆ ನೋಡಿಕೊಳ್ಳಿ" ಎಂದು ಕಾಂಗ್ರೆಸ್ ಮುಖಂಡ, ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಹೇಳಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

      "ನಮಗೆ ನಾಯಕರಿಗಿಂತ ನೀವು(ಕಾರ್ಯಕರ್ತರು) ಮುಖ್ಯ. ಪ್ರತಿ ಬೂತ್ ಗೂ ತೆರಳಿ. ಕಾವಲು ಕೂರಿ. ಎಷ್ಟೆಷ್ಟು ಮತದಾನವಾಗಿದೆ ನೋಡಿ. ಕಾಂಗ್ರೆಸ್ ಗೆ ಎಷ್ಟು, ಜೆಡಿಎಸ್ ಗೆ ಎಷ್ಟು ಮತ ಬರಬಹುದು ನೋಡಿ, ಈ ಎರಡಕ್ಕೂ ಸೇರಿ ಅದಕ್ಕಿಂತ ಹೆಚ್ಚಿನ ಮತ ಬಿಜೆಪಿಗೆ ಬರುವಂತೆ ನೋಡಿಕೊಳ್ಳಿ" ಎಂದು ಈ ವಿಡಿಯೋದಲ್ಲಿ ಡಿಕೆಶಿ ಹೇಳಿದ್ದರು. ಬಾಯಿತಪ್ಪಿ ಅವರು ಹೇಳಿದ ಈ ಹೇಳಿಕೆಯ ವಿಡಿಯೋ ಟ್ರೋಲ್ ಹೈಕ್ಳಿಗೆ ಮೃಷ್ಟಾನ್ನ ಭೋಜನ ಒದಗಿಸಿದೆ. ಲೋಕಸಭೆ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಡಿಕೆಶಿ ಮಾತನಾಡುತ್ತಿದ್ದರು.

      ಈ ವಿಡಿಯೋವನ್ನು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದ್ದು, "ಕಳೆದ ಐದು ವರ್ಷಗಳಲ್ಲಿ ದೇಶ ಅತ್ಯುತ್ತಮ ಆಡಳಿತ ಕಂಡಿದೆ. ಅದಕ್ಕೆಂದೇ ಕಾಂಗ್ರೆಸ್ ಮುಖಂಡರೂ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು. ಬಹುಶಃ ಕಾಂಗ್ರೆಸ್ ಸಹ ಮೋದಿಯವರ ದೂರದೃಷ್ಟಿಯ ನಾಯಕತ್ವವನ್ನು ಒಳಗೊಳಗೇ ಇಷ್ಟಪಡುತ್ತಿರುವಂತಿದೆ" ಎಂದು ಕುಟುಕಿದೆ.

      Viral video: Give more vote to BJP than Congress and JDs: DK Shivakumar said by mistake

      ಈ ವಿಡಿಯೋ ನಕಲಿಯೇ ಅಥವಾ, ಡಿ ಕೆ ಶಿವಕುಮಾರ್ ಅವರು ಬಾಯಿ ತಪ್ಪಿ ಹಾಗೆ ಹೇಳಿದರೆ ಎಂಬ ಬಗ್ಗೆ ಕಾಂಗ್ರೆಸ್ ಕಡೆಯಿಂದ ಯಾವುದೇ ಸ್ಪಷ್ಟನೆ ಲಭ್ಯವಾಗಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+