ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟಪಾಡಿಯಲ್ಲಿ ಬಿಲ್ಲವರ ಕ್ರೀಡಾಕೂಟಕ್ಕೆ ಚಾಲನೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿ, ಜೂನ್ 2 : ಕ್ರೀಡಾಕೂಟಗಳು ಯುವಜನರ ನಡುವಿನ ಬಾಂಧವ್ಯ ಬೆಸೆಯುವ ವೇದಿಕೆಯಾಗಬೇಕು, ಯುವಜನರನ್ನು ಒಗ್ಗೂಡಿಸುವುದರಿಂದ ಅವರ ನಡುವಿನ ಸಂವಹನ ಉತ್ತಮಗೊಂಡು ಪರಸ್ಪರ ಅರ್ಥೈಸುವಿಕೆಗೆ ಸಹಾಯವಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಬಿಲ್ಲವರ ಪರಿಷತ್ ಕಟಪಾಡಿ ಪ್ರಾಯೋಜಕತ್ವದಲ್ಲಿ ಭಾನುವಾರ ಕಟಪಾಡಿ ಪಳ್ಳಿಗುಡ್ಡೆ ನೆಹರೂ ಮೈದಾನದಲ್ಲಿ ಬಿಲ್ಲವ ಯುವಕ ಯುವತಿಯರಿಗಾಗಿ ನಡೆದ ಕ್ರಿಕೆಟ್ ಮತ್ತು ಥ್ರೋಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳು ಕೇವಲ ಸ್ಪರ್ಧೆಗೆ ಸೀಮಿತವಾಗದೆ, ಯುವಕರ ನಡುವಿನ ಉತ್ತಮ ವಿಚಾರ ವಿನಿಮಯಕ್ಕೆ ವೇದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

Vinay Kumar Sorake

ಕ್ರೀಡಾಕೂಟಗಳು ಯುವಜನರ ನಡುವಿನ ಸ್ನೇಹ, ಬಾಂಧವ್ಯ ವೃದ್ಧಿಗೆ ವೇದಿಕೆಯಾಗಬೇಕು. ಕ್ರೀಡಾಕೂಟಗಳ ಮೂಲಕ ಯುವಜನರನ್ನು ಒಟ್ಟುಗೂಡಿಸುವುದರಿಂದ ಅವರ ನಡುವಿನ ಸಂವಹನ ಉತ್ತಮಗೊಂಡು ಪರಸ್ಪರ ಅರ್ಥೈಸುವಿಕೆಗೆ ಸಹಾಯಕವಾಗುತ್ತದೆ ಎಂದು ಸಚಿವರು ಹೇಳಿದರು.

ಯಾವುದೇ ಸಮಾಜದ ಸಂಘಟನೆಯಲ್ಲಿ ಯುವಕರು ಮತ್ತು ಮಹಿಳೆಯರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದು ವಿರಳ. ಯುವಕರು ಮತ್ತು ಮಹಿಳೆಯರು ಸಂಘಟನೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದು ಉತ್ತಮ ವಿಚಾರವಾಗಿದೆ ಎಂದು ತಿಳಿಸಿದರು.

ಕಟಪಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ ವಿನಯ ಬಳ್ಳಾಲ್, ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಜಿಪಂ ಸದಸ್ಯರಾದ ಕಟಪಾಡಿ ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ, ಬಿಲ್ಲವ ಮುಖಂಡರಾದ ದಯಾನಂದ ಬಂಗೇರ, ಶ್ರೀಕರ ಸುವರ್ಣ, ಹರಿಶ್ಚಂದ್ರ ಅಮೀನ್, ಶೋಭಾ ಹರಿಯಪ್ಪ ಪೂಜಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
"Youth and women do not involve themselves much in the activities of the society. So in order to inspire the youth and women to involve themselves in the activities of the society, the sports koota event like this is definitely good" said Urban Development Minister Vinay Kumar Sorake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X