ವಿನಯ್ ಅಪಹರಣ ಯತ್ನ: ಮನೆಯಲ್ಲೇ ಯಡಿಯೂರಪ್ಪ ವಿಚಾರಣೆ
ಬೆಂಗಳೂರು, ಅಕ್ಟೋಬರ್ 19: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ ಪಿಎ ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ವಿಚಾರಣೆಗೆ ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಿದ್ದವಾಗಬೇಕಿದೆ.
ಯಡಿಯೂರಪ್ಪ ಅವರ ಮನೆಗೇ ತೆರಳಿ ವಿಚಾರಣೆ ನಡೆಸಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಈ ಹಿಂದೆ ಯಡಿಯೂರಪ್ಪನವರಿಗೆ ನೋಟಿಸ್ ನೀಡಿದ್ದರು. ಆದರೆ ಪೊಲೀಸ್ ಠಾಣೆಗೆ ಬರಲು ನಕರಾ ಮಾಡಿದ್ದ ಯಡಿಯೂರಪ್ಪ ಮನೆಗೆ ಬಂದು ಹೇಳಿಕೆ ಪಡೆಯುವಂತೆ ತನಿಖಾಧಿಕಾರಿಗೆ ಪತ್ರ ಬರೆದಿದ್ದರು.
ಇದೀಗ ಅವರ ಮನೆಗೇ ತೆರಳಿ ಹೇಳಿಕೆ ಪಡೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. 65 ವರ್ಷ ಮೇಲಿನ ವ್ಯಕ್ತಿಗಳನ್ನು ಅವರ ಮನೆಗೆ ತೆರಳಿ ವಿಚಾರಣೆ ನಡೆಸಲು ಸಿಆರ್'ಪಿಸಿ ಸೆಕ್ಷನ್ 160 ಅನ್ವಯ ಅವಕಾಶವಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications