ವಿಜಯೇಂದ್ರ ಅವರೇ ಮುಂದಿನ ಮುಖ್ಯಮಂತ್ರಿ: ಅಚ್ಚರಿ ಹೇಳಿಕೆ ನೀಡಿದ ಯಡಿಯೂರಪ್ಪ ಅವರ ಆಪ್ತ
ದಾವಣಗೆರೆ, ನವೆಂಬರ್ 27: ರಾಜ್ಯದಲ್ಲಿ ಮುಡಾ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತು ಬಹರಂಗವಾಗಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಆಪ್ತರು ಅಚ್ಚರಿ ಹೇಳಿಕೆಯನ್ನ ನೀಡುತ್ತಿದ್ದಾರೆ.
ಶಿರಮಗೊಂಡನಹಳ್ಳಿಯಲ್ಲಿ ನಡೆಯುತಿದ್ದ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು, ವಿಜಯೇಂದ್ರ ಅವರು ಮುಂದಿನ ಸಿಎಂ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ದಾವಣಗೆರೆಯಿಂದ ನಾವು ಸಂದೇಶ ಕೊಡ್ತೀವಿ. ಯಾವುದೇ ದುಷ್ಟು ಶಕ್ತಿ ಬಂದರು ಇದನ್ನು ತಡಿಯೋದಕ್ಕೆ ಸಾಧ್ಯವಿಲ್ಲ. ವಿಜಯೇಂದ್ರ ಅವರನ್ನ ಮುಂದಿನ ಮುಖ್ಯಮಂತ್ರಿ ಮಾಡೆ ಮಾಡ್ತೀವಿ ಎಂದು ಎರಡು ಕೈ ಎತ್ತಿ ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದ್ರೆ ಬೆಂಬಲ ಕೊಡಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಇನ್ನೂ ರಾಜ್ಯದ ಮೂರು ಉಪಚುನಾವಣಾ ಫಲಿತಾಂಶದ ಕುರಿತು ಮಾತನಾಡಿ, ರಾಜ್ಯದ ಉಪ ಚುನಾವಣೆ ಫಲಿತಾಂಶ ಯಾವುದೇ ದಿಕ್ಸೂಚಿ ಅಲ್ಲ. ಈ ಮೂರು ಉಪಚುನಾವಣೆಯನ್ನ ಕಾಂಗ್ರೆಸ್ ಹಣ, ಹೆಂಡ ತೊಳ್ಬಲದಿಂದ ಗೆದ್ದಿದೆ. ಆದರೆ ನಾವು ಯಾವುದೇ ಸೋಲಿನಿಂದ ಕುಗ್ಗಿಲ್ಲ. ಮತ್ತೆ ಪಕ್ಷ ಸಂಘಟನೆ ಮಾಡೇ ಮಾಡ್ತೀವಿ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ಹೇಳಿದರು.
ಇನ್ನು ಉಪ ಚುನಾವಣೆ ಸೋಲಿಗೆ ವಿಜಯೇಂದ್ರ ಯಡಿಯೂರಪ್ಪ ಅವರು ಕಾರಣ ಅಂತಾರೆ. ಸ್ವಯಂ ಘೋಷಿತ ಹಿಂದು ಹುಲಿ, ನಾಚಿಕೆ ಆಗಬೇಕು ಅವರಿಗೆ. ದಾವಣಗೆರೆಯಲ್ಲಿ ಸರ್ವಾಧಿಕಾರ ದುರಂಕಾರದಿಂದ ಚುನಾವಣೆ ಸೋತರು. ಯಡಿಯೂರಪ್ಪ ಅವರಿಂದ ಉಂಡು ತಿಂದು ಅವರಿಂದ ಸಾಕಷ್ಟು ಮಾಡಿಕೊಂಡು ಅವರ ವಿರುದ್ಧವೇ ಮಾತನಾಡ್ತಾರೆ. ಯಾವುದೇ ವ್ಯಕ್ತಿ ಜೊತೆ ಬೇರೆ ಎಲ್ಲೋ ಹೋರಾಟಕ್ಕೆ ಹೋಗಿದ್ದಾರೆ. ದಾವಣಗೆರೆಯಲ್ಲಿ ತಮ್ಮ ಸೋಲಿಗೆ ನೀವೇ ಕಾರಣ ಬೇರೆ ಯಾರು ಅಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ನೀವು ಹಿಂದು ಹುಲಿ ಅಲ್ಲ ಇಲಿ. ನೀವು ಮುಖವಾಡ ಹಾಕಿಕೊಂಡು ಬದುಕುತಿದ್ದೀರಿ. ಉಪ ಚುನಾವಣೆ ಸೋಲಿಗೆ ಕಾರಣ ಯಡಿಯೂರಪ್ಪ, ವಿಜಯೇಂದ್ರ ಅಂತೀರಿ. ನೀನು ಹಿಂದು ಹುಲಿ, ಶಿಗ್ಗಾವಿಯಲ್ಲಿ ಏನು ಮಾಡಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಸಂಸದ ಜಿ ಎಂ ಸಿದ್ದೇಶ್ವರ ವಿರುದ್ಧ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಗ್ಯಾರಂಟಿ ಕಾರಣದಿಂದ ಸಿದ್ದರಾಮಯ್ಯ ಸರ್ಕಾರ ಈಗಾಗಲೇ ದಿವಾಳಿಯಾಗಿದೆ. ಅವರಿಗೆ ಅಭಿವೃದ್ಧಿಗೆ ಅನುದಾನ ಕೊಡಲು ಆಗುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 50, ಕೋಟಿ 100 ಕೋಟಿ ಆಫರ್ ಬಗ್ಗೆ ಮಾತಾನಾಡುತ್ತಿದ್ದಾರೆ.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ರಾಜಶೇಖರ ನಾಗಪ್ಪ ನವರು. ಮಾಜಿ ಶಾಸಕರಾದ ಶ್ರೀಯುತ ಮಾಡಾಳ್ ವಿರೂಪಾಕ್ಷಪ್ಪ ನವರು. ಮಾಜಿ ಶಾಸಕರಾದ ಬಸವರಾಜನಾಯ್ಕ್ ರವರು. ಮಾಜಿ ಶಾಸಕರಾದ ಪ್ರೋ ಲಿಂಗಣ್ಣ ನವರು. ಮಾಜಿಶಾಸಕರಾದ ರಾಜೇಶ್ ರವರು. ಮಾಜಿ ಶಾಸಕರಾದ ರಾಮಚಂದ್ರಪ್ಪ ನವರು. ಮಾಜಿ ಶಾಸಕರಾದ ಅರುಣ್ ಕುಮಾರ್ ಪೂಜಾರ್ ರವರು. ಮಾಜಿ ಮುಖ್ಯ ಸಚಕೇತರಾದ ಶಿವಯೋಗಿ ಸ್ವಾಮಿ ರವರು. ಬಿಜೆಪಿ ಮುಖಂಡರಾದ ಮರಿಸ್ವಾಮಿ ರವರು. ಬಿಜೆಪಿ ಮುಖಂಡರುಗಳಾದ ಮಾಡಾಳ್ ಮಲ್ಲಿಕಾರ್ಜುನ್ ರವರು,ಲೋಕಿಕೆರೆ ನಾಗರಾಜ್ ರವರು. ಬಿ.ಜಿ.ಅಜಯ್ ಕುಮಾರ್ ರವರು, ಚಂದ್ರಶೇಖರ್ ಪೂಜಾರ್ ರವರು. ಅಣಬೇರು ರಾಜಣ್ಣ ನವರು. ಸತೀಶ್ ರವರು. ಕಲ್ಲೇಶ್ ರವರು. ಅಲೂರು ಲಿಂಗರಾಜ್ ರವರು. ಧನಂಜಯ ಕಡ್ಲೇಬಾಳು. ಅನಿಲ್ ಕುಮಾರ್. ಅಣ್ಣೇಶ್ ಐರಾಣಿ. ರವರು ಕಾರ್ಯಕರ್ತರು ರೈತರು ಅಭಿಮಾನಿಗಳು ಭಾಗವಹಿಸಿದ್ದರು.












Click it and Unblock the Notifications