ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಪುರ ವಿವಿಗೆ ಜೂನ್ 11ರಂದು ಅಕ್ಕ ಮಹಾದೇವಿ ಹೆಸರು ನಾಮಕರಣ

By Sachhidananda Acharya
|
Google Oneindia Kannada News

ಶಿವಮೊಗ್ಗ, ಮೇ 30: ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಜೂನ್ 11ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅಧಿಕೃತವಾಗಿ ಅಕ್ಕ ಮಹಾದೇವಿ ಹೆಸರು ಘೋಷಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಶಿಕಾರಿಪುರ ತಾಲೂಕು ಉಡುತಡಿಯಲ್ಲಿ ಅಕ್ಕಮಹಾದೇವಿ ಸಂಶೋಧನಾ ಕೇಂದ್ರ, ಕೌಶಲ್ಯ ಅಭಿವೃದ್ಧಿ ಮತ್ತು ವಿಸ್ತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳು ಹಾಗೂ 12 ಸ್ವಾಯತ್ತ ಕಾಲೇಜಿನ 1.50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಗುವುದು. ಪದವಿ ಕಲಿಯುತ್ತಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಸರ್ಕಾರ ಈ ಯೋಜನೆಗಾಗಿ 300ಕೋಟಿ ರೂ ವೆಚ್ಚ ಮಾಡುತ್ತಿದೆ ಎಂದು ಸಚಿವರು ವಿವಿರಿಸದರು.

Vijayapura Women’s university to be named after Akka Mahadevi on June 11

ತಲಾ 25 ಕೋಟಿ ವೆಚ್ಚದಲ್ಲಿ 20 ವಸತಿ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 10 ವಸತಿ ಕಾಲೇಜು ಗಳನ್ನು ಆರಂಭಿಸಲಾಗುವುದು. ಅಲ್ಲದೆ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳಿಗೆ ಏಕರೂಪ ಕಾಯ್ದೆ ತರಲಾಗುವುದು. ಏಕರೂಪ ಕಾಯ್ದೆಯಿಂದ ವಿಶ್ವ ವಿದ್ಯಾಲಯಗಳಲ್ಲಿ ಗೊಂದಲ ನಿವಾರಣೆಯಾಗಲಿದೆ ಎಂದು ಸಚಿವ ರಾಯರೆಡ್ಡಿ ಹೇಳಿದರು.

Vijayapura Women’s university to be named after Akka Mahadevi on June 11

ರಾಜ್ಯ ಸರ್ಕಾರ ಉನ್ನತ ಶಿಕ್ಷಣದ ಅಭಿವೃದ್ದಿಗೆ 30ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ 102 ಕಾಲೇಜುಗಳಿಗೆ ಕಟ್ಟಡ ಇಲ್ಲ 3.50 ಸಾವಿರ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ನುಡಿದರು.

English summary
The Karnataka State Women’s University, Vijayapura, is to be renamed as ‘Karnataka State Akka Mahadevi Women’s University’ on june 11, after the 12th century social reformer and poet Akka Mahadevi said Higher education minister Basavaraj Rayareddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X