Karnataka winter update: ವಿಜಯಪುರದಲ್ಲಿ ಮೈಕೊರೆವ ಚಳಿ, ಕನಿಷ್ಠ ತಾಪಮಾನದ ಜಿಲ್ಲೆಗಳಿವು, 3 ದಿನ ಮಳೆ ಮುನ್ಸೂಚನೆ

ಬೆಂಗಳೂರು, ಡಿಸೆಂಬರ್ 28: ಕರ್ನಾಟಕದಲ್ಲಿ ಜನವರಿ ಮೊದಲ ಮೂರು ದಿನಗಳು ಜೋರು ಮಳೆಯಿಂದ ಕೂಡಿರಲಿವೆ. ಸಂಭವನೀಯ ಮಳೆಗೂ ಮೊದಲೇ ರಾಜ್ಯದಲ್ಲಿ ವಿಪರೀತ ಚಳಿ ದಾಖಲಾಗುತ್ತಿದೆ. ಅದರಲ್ಲೂ ಉತ್ತರ ಒಳನಾಡಿನ ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅತ್ಯಧಿಕ ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ಮೈಕೊರೆಯುವ ಚಳಿ ದಾಖಲಾಗಿದೆ.

ಕರಾವಳಿ ಹೊರತಾಗಿ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಧಿಕ ಚಳಿ ದಾಖಲಾಗುತ್ತಿದೆ. ನಿತ್ಯ ಬೆಳಗ್ಗೆ ದಟ್ಟ ಮಂಜು ಆವರಿಸುವ ಜೊತೆಗೆ ಜನರು ಅತ್ಯಧಿಕ ಚಳಿ, ಶೀತದ ವಾತಾವರಣವನ್ನು ಅನುಭವಿಸುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ನಂತರ ಚಳಿ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ಗರಿಷ್ಠ ತಾಪಮಾನ ದಾಖಲಾಗುತ್ತಿದೆ.

Vijayapura Witnessed Extreme Cold last 2 days, Likely Rain Coast-South Interior Districts by Jan 1

ವಿಜಯಪುರದಲ್ಲಿ ಅತ್ಯಧಿಕ ಚಳಿ

ವಿಜಯಪುರದಲ್ಲಿ ಕಳೆದ ಎರಡು ದಿನಗಳಿಂದ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ. ಇದರೊಂದಿಗೆ ಬಾಗಲಕೋಟೆ, ಧಾರವಾಡದಲ್ಲಿ ತಲಾ 12.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಹಲವು ದಿವಸಗಳ ಹಿಂದೆ ಇದೇ ರೀತಿಯ ವಾತಾವರಣ ವಿಜಯಪುರ ಜಿಲ್ಲೆಯಲ್ಲಿ ಏರ್ಪಟ್ಟಿತ್ತು. ಆಗಲೂ ಮೈಕೊರೆವ ಚಳಿ ದಾಖಲಾಗಿತ್ತು ಅಂದು ಇಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆ ಆಗಿತ್ತು.

ಒಳನಾಡಿನ ಜಿಲ್ಲೆಗಳಲ್ಲಿ ಶೀತ: ಚಳಿ ಮಾಹಿತಿ

ರಾಜ್ಯದಲ್ಲಿ ಒಳನಾಡಿನ ಜಿಲ್ಲೆಗಳಾದ ಬೆಳಗಾವಿಯಲ್ಲಿ 16.5 ಡಿಗ್ರಿ ಸೆಲ್ಸಿಯಸ್, ಬೀದರ್ 13.6 ಡಿ.ಸೆ, ಹಾವೇರಿ 14.2 ಡಿ.ಸೆ, ಗದಗ 15.2 ಡಿ.ಸೆ, ಕಲಬುರಗಿ 18.2 ಡಿ.ಸೆ, ಬಿಸಿಲ ನಾಡು ರಾಯಚೂರಲ್ಲಿ 19.2 ಡಿ.ಸೆ, ಬೆಂಗಳೂರು ನಗರ 16 ಡಿ.ಸೆ, ಚಾಮರಾಜನಗರ 11.4 ಡಿ.ಸೆ, ಚಿಂತಾಮಣಿ 12.8 ಡಿ.ಸೆ, ಹಾಸನ 15.2 ಡಿ.ಸೆ, ಚಿಕ್ಕಮಗಳೂರು 14.2 ಡಿ.ಸೆ, ಮಂಡ್ಯ 13 ಡಿ.ಸೆ, ಶಿವಮೊಗ್ಗ 14 ಡಿ.ಸೆ,

ಮೂರು ದಿನ ವ್ಯಾಪಕ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮತ್ತೆ ವ್ಯಾಪಕ ಮಳೆ ಸುರಿಯುವ ಲಕ್ಷಣಗಳು ಕಂಡು ಬಂದಿವೆ. ಜನವರಿ ಮೊಲದ ಮೂರು ದಿನ ಅಂದರೆ ಜನವರಿ 1 ರಿಂದ 3ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ವ್ಯಾಪಕ ಮಳೆ ಆಗಲಿದೆ. ಈ ವೇಳೆ ಉತ್ತರ ಒಳನಾಡಿನಗೆ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಬದಲಾಗಿ ಇಲ್ಲಿ ಬೆಳಗ್ಗೆ ಶೀತ ವಾತಾವರಣ, ದಟ್ಟ ಮಂಜು ಇರಲಿದ್ದು, ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ.

Vijayapura Witnessed Extreme Cold last 2 days, Likely Rain Coast-South Interior Districts by Jan 1

ಇದೇ ಮೂರು ದಿನ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು, ಕೊಡಗು, ಚಾಮಜರಾಜನಗರ, ಶಿವಮೊಗ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂಗರ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ಇನ್ನಿತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+