New Airport: ವಿಜಯಪುರ ಏರ್ಪೋರ್ಟ್ ಇದೇ ವರ್ಷ ಆರಂಭ?, ಧಾರವಾಡ-ಬೆಳಗಾವಿ ರೈಲು ಯೋಜನೆ ಭೂಸ್ವಾಧೀನಕ್ಕೆ ವೇಗ
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ಉತ್ತರ ಕರ್ನಾಟಕ ಭಾಗದಲ್ಲಿ ಉದ್ದೇಶಿತ ಧಾರವಾಡ- ಬೆಳಗಾವಿ ರೈಲು ಮಾರ್ಗ ಅಭಿವೃದ್ಧಿ ಯೋಜನೆಯನ್ನು ನಾವು ಕ್ಷಿಪ್ರಗತಿಯಲ್ಲಿ ಮುಗಿಸಬೇಕಾಗಿದೆ. ರೈಲು ಮಾರ್ಗ ಹಾಗೂ ವಿಜಯಪುರ ವಿಮಾನ ನಿಲ್ದಾಣದ ಅಧಿಕೃತ ವಾಣಿಜ್ಯ ಕಾರ್ಯಾಚರಣೆ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರೂ ಆದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಅಪ್ಡೇಟ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ರೈಲ್ವೆ, ವಿಮಾನ ನಿಲ್ದಾಣ ಮತ್ತಿತರ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಾಮರ್ಶನ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಪರಿಸರಕ್ಕೆ ಸಂಬಂಧಿಸಿದ ಒಂದು ಪ್ರಕರಣ ಆರು ತಿಂಗಳಿನಿಂದಲೂ ಬಾಕಿ ಇದೆ. ನ್ಯಾಯಾಲಯದಿಂದ ಅದರ ಅಂತಿಮ ತೀರ್ಪು ಪ್ರಕಟವಾಗುವುದನ್ನು ಕಾಯುತ್ತಿದ್ದೇವೆ ಎಂದರು.

ವಿಜಯಪುರ ವಿಮಾನ ನಿಲ್ದಾಣ ವಿಚಾರವಾಗಿ ಸುಪ್ರೀಂ ಕೋರ್ಟ್ ವಕೀಲರ ಜತೆಗೂ ಸಭೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ತೀರ್ಪು ನಮ್ಮ ಪರವಾಗಿ ಬಂದಲ್ಲಿ, ತಕ್ಷಣವೇ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಹೇಳಿದರು.
ಕೆಲವು ಅಡತಡೆಗಳು ಕಳೆದ ವರ್ಷ ನಿವಾರಣೆ ಆಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಪರಿಸರಕ್ಕೆ ಸಂಬಂಧಿ ಪ್ರಕರಣದ ವಿಚಾರಣೆ ಸಹ ಮುಗಿದಿದೆ. ಅಂತಿಮ ತೀರ್ಪು ಪ್ರಕಟಿಸುವುದು ಬಾಕಿ ಇದೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ 2026ರ ಯುಗಾದಿ ಹೊತ್ತಿಗೆ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ ಆಗುವುದರಲ್ಲಿತ್ತು. ಇದೀಗ ಮತ್ತೆ ತಡವಾಗಿದ್ದು, ಎಲ್ಲವು ಅಂದುಕೊಂಡಂತಾದರೆ ಇದೇ ವರ್ಷ ಉದ್ಘಾಟನೆ ಅದರೂ ಅಚ್ಚರಿ ಇಲ್ಲ.
ಹಾಸನ ವಿಮಾನ ನಿಲ್ದಾಣ
ರಾಜ್ಯದ ಮತ್ತೊಂದು ಪ್ರಮುಖ ಜಿಲ್ಲೆಯಾದ ಹಾಸನದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಗೆ ಇನ್ನಷ್ಟು ಚುರುಕು ಮುಟ್ಟಿಸಬೇಕಾಗಿದೆ. ಹಾಗೆಯೇ ಕಾರವಾರದಲ್ಲಿ ನೌಕಾನೆಲೆಯ ರನ್ ವೇ ಮತ್ತು ಸಂಪರ್ಕ ರಸ್ತೆ ನಿರ್ಮಾಣ ಕುರಿತೂ ಅವರು ಚರ್ಚಿಸಲಾಯಿತು ಎಂದರು.
ಧಾರವಾಡ- ಬೆಳಗಾವಿ ರೈಲು ಯೋಜನೆ ಅಪ್ಡೇಟ್ಸ
ಧಾರವಾಡ- ಬೆಳಗಾವಿ ರೈಲು ಮಾರ್ಗ ಅಭಿವೃದ್ಧಿ ಯೋಜನೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಯೋಜನೆಗೆ ಅಗತ್ಯವಾದ ಬಾಕಿ ಇರುವ ಭೂಸ್ವಾಧೀನ ಮತ್ತಿತರ ಅಡೆತಡೆಗಳನ್ನು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಬಗೆಹರಿಸಬೇಕು ಎಂದು ಇಲಾಖೆಯ ಕಾರ್ಯದರ್ಶಿ ಆರ್. ವಿಶಾಲ್ ಅವರಿಗೆ ಸಚಿವರು ನಿರ್ದೇಶನ ನೀಡಿದರು.
ಧಾರವಾಡ- ಬೆಳಗಾವಿ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಧಾರವಾಡದ ಮಮ್ಮಿಗಟ್ಟಿ ಸಮೀಪ ಭೂಸ್ವಾಧೀನದ ಸಮಸ್ಯೆ ಇದೆ. ತಕ್ಷಣ ಇದನ್ನು ಖುದ್ದು ಭೇಟಿ ನೀಡಿ ಬಗೆಹರಿಸಬೇಕು. ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಎರಡು ಜಿಲ್ಲೆಗಳ ನಡುವೆ ನೇರ ಸಂಪರ್ಕ, ಕಡಿಮೆ ಅವಧಿಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ನಡುವೆ ರೈಲ್ವೆ ಸಾರಿಗೆ ಸುಧಾರಣೆ ಆಗಲಿದೆ ಎಂದು ತಿಳಿಸಿದ್ದಾರೆ.


Click it and Unblock the Notifications
