ಮುನಿರತ್ನ ಪೆನ್‌ಡ್ರೈವ್‌ನಲ್ಲಿದ್ಯಾ 'ದೊಡ್ಡವರ' ಅಶ್ಲೀಲ ವಿಡಿಯೋ?
ಮಹಿಳೆ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ ಸದ್ಯ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಮುನಿರತ್ನ ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಮುನಿರತ್ನ ನಿವಾಸದಲ್ಲಿ ಲ್ಯಾಪ್‌ಟಾಪ್ ಹಾಗೂ ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ.
ಪೆನ್‌ಡ್ರೈವ್ ಪರಿಶೀಲಿಸಿರುವ ಎಸ್‌ಐಟಿ ಅಧಿಕಾರಿಗಳಿಗೆ ಶಾಕಿಂಗ್ ವಿಚಾರವೊಂದು ತಿಳಿದುಬಂದಿದೆಯಂತೆ. ಮುನಿರತ್ನ ಅವರಿಗೆ ಸೇರಿದ ಪೆನ್‌ಡ್ರೈವ್‌ನಲ್ಲಿ ಹಲವರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಕೆಲ ರಾಜಕಾರಣಿಗಳ ಖಾಸಗಿ ಕ್ಷಣಗಳ ವಿಡಿಯೋಗಳು ಸಹ ಇವೆ ಎಂದು ಹೇಳಲಾಗುತ್ತಿದೆ.

ಮುನಿರತ್ನ ವಿರುದ್ಧ ದೂರು ನೀಡಿದ್ದ ಮಹಿಳೆ ಕೂಡ ಈ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ್ದರು. ಮುನಿರತ್ನ ಅವರು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಹಲವು ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಬೆತ್ತಲೆ ವಿಡಿಯೋಗಳನ್ನು ಮಹಿಳೆಯರಿಂದ ರೆಕಾರ್ಡ್ ಮಾಡಿಸಿಕೊಳ್ಳುತ್ತಿದ್ದರು. ನನ್ನನ್ನೂ ಇದೇ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದರು.
ಇದಕ್ಕೆ ಪುಷ್ಟಿ ನೀಡುವಂತೆ ಮುನಿರತ್ನ ಅವರ ಮನೆಯಲ್ಲಿ ಶೋಧ ನಡೆಸಿದಾಗ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಹಲವರ ಬೆತ್ತಲೆ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ ಅಧಿಕಾರಿಗಳು ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಹಾಗೂ ಲ್ಯಾಪ್‌ಟಾಪ್ ಅನ್ನು ಎಫ್ಎಸ್‌ಎಲ್‌ಗೆ ಕಳಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಮುನಿರತ್ನ ವಿರುದ್ಧ ಸಂತ್ರಸ್ತೆ ಮಾಡಿರುವ ಆರೋಪಗಳು ಸಂಚಲನ ಸೃಷ್ಟಿಸಿತ್ತು. ಈ ಹಿಂದೆ ತೋಟಗಾರಿಕೆ ಇಲಾಖೆ ಸಚಿವರಾಗಿದ್ದ ಮುನಿರತ್ನ ಅವರಿಗೆ ನೀಡಲಾಗಿದ್ದ ಸರ್ಕಾರಿ ಕಾರಿನಲ್ಲಿ, ತನ್ನ ವಿಕಾಸೌಧದ ತಮ್ಮ ಕಚೇರಿಯಲ್ಲಿ ಹಾಗೂ ಗೋಡೌನ್‌ನಲ್ಲಿಯೂ ಮುನಿರತ್ನ ತನ್ನನ್ನು ಅತ್ಯಾಚಾರ ಮಾಡಿದ್ದರು ಎಂಬ ಶಾಕಿಂಗ್ ವಿಚಾರವನ್ನು ಸಂತ್ರಸ್ತೆ ಬಹಿರಂಗಪಡಿಸಿದ್ದರು.
'ಮಾಗಡಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋಗಳನ್ನು, ಫೋಟೋಗಳನ್ನು ನನ್ನಿಂದ ಮುನಿರತ್ನ ಸಂಗ್ರಹಿಸಿದ್ದರು. ಅದನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಕೂಡ ಮಾಡಿದ್ದರು' ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಜನರಿಗೆ ಮಾಸ್ಕ್ ಹಂಚಲು ಕಾರ್ಪೊರೇಟರ್ ಮಮತಾ ವಾಸುದೇವ್ ಅವರಿಗೆ ಕೊಟ್ಟಿದ್ದೆ. ಇದನ್ನು ತಿಳಿದು ಮುನಿರತ್ನ ನನ್ನನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಪ್ರತಿದಿನ ನನಗೆ ಫೋನ್ ಕಾಲ್, ವಿಡಿಯೋ ಕಾಲ್ ಮಾಡುತ್ತಿದ್ದರು. ನಾನು ಸ್ನಾನ ಮಾಡುವಾಗ ಒಮ್ಮೆ ವಿಡಿಯೋ ಕಾಲ್ ಮಾಡಿದ್ದರು. ನಾನು ಪಿಕ್ ಮಾಡಲಿಲ್ಲ. ಬಳಿಕ ಗೋಡೌನ್‌ಗೆ ಬರೋಕೆ ಹೇಳಿದ್ದರು. ನಾನು ಗೋಡೌನ್‌ಗೆ ಹೋದಾಗ ನನ್ನನ್ನು ಬೆದರಿಸಿ, ಅತ್ಯಾಚಾರ ಮಾಡಿದರು. ಬಳಿಕ ಅದರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಿದ್ದರು.
ಕಾರ್ಪೊರೇಟರ್ ಪತಿ ವಾಸುದೇವ್ ಬೇರೆ ಹೆಣ್ಣಿನ ಜೊತೆ ಮಲಗಿರುವ ವಿಡಿಯೋ ಮಾಡಿಕೊಡುವಂತೆ ಮುನಿರತ್ನ ನನಗೆ ಡಿಮ್ಯಾಂಡ್ ಮಾಡಿದ್ದರು. ಬಳಿಕ ನಾನು ಮತ್ತು ಮತ್ತೊಬ್ಬ ಮಹಿಳೆಯಿಂದ ಅಂತಹ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಸಿಕೊಂಡಿದ್ದರು. ಆ ವಿಡಿಯೋ ಮಾಡಲು ನನ್ನೊಂದಿಗೆ ರಾಧಾ ಹೆಸರಿನ ಎಚ್‌ಐವಿ ಸೋಂಕಿತೆಯನ್ನು ವಾಸುದೇವ್ ಜೊತೆ ಖಾಸಗಿ ಕ್ಷಣ ಕಳೆಯಲು ಕಳುಹಿಸಿದ್ದರು. ಈ ಕೃತ್ಯದ ಚಿತ್ರೀಕರಣಕ್ಕೆ ಮೊಬೈಲ್ ಕ್ಯಾಮೆರಾಗಳನ್ನು ರಾಧಾ ಹಾಗೂ ನನ್ನಿಂದ ಫಿಕ್ಸ್ ಮಾಡಿಸಿದ್ದರು. ಅದನ್ನು ಶಾಸಕರ ಆಪ್ತರಿಗೆ ಕಳಿಸಲಾಗಿತ್ತು ಎಂದು ಹೇಳಿದ್ದರು.
ಮೊದಲು ಮಾಡಿದ ವಿಡಿಯೋ ಅಸ್ಪಷ್ಟವಾಗಿದೆ ಎಂದು ಮತ್ತೊಮ್ಮೆ ವಾಸುದೇವ್ ಅವರೊಂದಿಗೆ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಸಿದರು. ಇದೇ ಮಾದರಿಯಲ್ಲಿ ರಾಜಕೀಯ ಮುಖಂಡರಾದ ಗಂಗಣ್ಣನವರೊಂದಿಗೆ ಮಲಗುವಂತೆ ಬಲವಂತ ಮಾಡಿದ್ದರು. ನಮ್ಮಿಬ್ಬರ ವಿಡಿಯೋ ಅನ್ನು ಶಾಸಕರ ಆಪ್ತ ಸುಧಾಕರ್ ರೆಕಾರ್ಡ್ ಮಾಡಿಕೊಂಡಿದ್ದರು. ನನ್ನ ಮೇಲೂ ಅತ್ಯಾಚಾರ ಎಸಗಿ, ಅವರ ಗನ್‌ಮ್ಯಾನ್‌ನಿಂದ ಬೆದರಿಸಿದ್ದರಂತೆ.
ಹಲವರೊಂದಿಗೆ ಅಶ್ಲೀಲವಾಗಿರುವಂತೆ ಮುನಿರತ್ನ ನನ್ನನ್ನು ಬಳಸಿಕೊಂಡಿದ್ದಾರೆ. ಮತ್ತೊಮ್ಮೆ ವೈದ್ಯರೊಬ್ಬರ ವಿಡಿಯೋ ಮಾಡಿಕೊಡುವಂತೆ ಕೇಳಿದ್ದರು. ನಾನು ಒಪ್ಪದಿದ್ದಾಗ ನನ್ನ ಬೆತ್ತಲೆ ವಿಡಿಯೋಗಳನ್ನು ನನ್ನ ಪತಿಗೆ ಕಳಿಸಿದ್ದರು. ಕೊನೆಗೆ ನನ್ನನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಮುನಿರತ್ನ ವಿರುದ್ಧ ಆರೋಪ ಮಾಡಿದ್ದರು.












Click it and Unblock the Notifications