ಪತ್ರಕರ್ತ, ಬರಹಗಾರ 'ಕಾಮರೂಪಿ' ನಿಧನ: ನಾಡಿನ ಗಣ್ಯರ ಕಂಬನಿ
ಬೆಂಗಳೂರು, ಡಿಸೆಂಬರ್ 29: 'ಕಾಮರೂಪಿ' ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ಹಾಗೂ ಬರಹಗಾರ ಎಂ.ಎಸ್.ಪ್ರಭಾಕರ ಅವರು ಮಂಗಳವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಕೋಲಾರದ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದರು.
ಪ್ರಭಾಕರ ಅವರು ಅವಾಹಿತರಾಗಿದ್ದು, ಅವರ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗುವಾಹಟಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಶಿಕ್ಷಕರಾಗಿ, ಆ ನಂತರ ಪತ್ರಕರ್ತರಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಭಾಕರ ಅವರು ತಮ್ಮ ಸಾಹಿತ್ಯಿಕ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ.
'ಒಂದು ತೊಲ ಪುನುಗು, ಮತ್ತೆ ಮತ್ತೆ ಕಥೆಗಳು' ಎಂಬ ಕಥಾ ಸಂಗ್ರಹದ ಮೂಲಕ ಕನ್ನಡದಲ್ಲಿ ಬರಹಗಾರರಾಗಿ ಪ್ರಾಮುಖ್ಯತೆ ಪಡೆದರು.
ಅವರ 'ಕುದುರೆ ಮೊಟ್ಟೆ' ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇದನ್ನು ಜಿ. ವಿ. ಅಯ್ಯರ್ ಅವರು ಚಲನಚಿತ್ರವನ್ನಾಗಿ ನಿರ್ಮಾಣ ಮಾಡಿದ್ದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಂಬನಿ
ಕಾಮರೂಪಿ ಅವರ ಸಾವಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಈ ವಿಚಾರವಾಗಿ ಗುರುವಾರ ಅವರು ಟ್ವೀಟ್ ಮಾಡಿದ್ದಾರೆ.

'ಸಾಹಿತಿ, ಪತ್ರಕರ್ತ, ಪ್ರಾಧ್ಯಾಪಕ ಹೀಗೆ ಹಲವು ಪ್ರತಿಭೆಗಳ ಸಂಗಮವಾಗಿದ್ದ 'ಕಾಮರೂಪಿ' ಎಂದೇ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯವಾಗಿದ್ದ ಎಂ.ಎಸ್.ಪ್ರಭಾಕರ್ ಸಾವು ನಿಜ ಅರ್ಥದಲ್ಲಿ ತುಂಬಿಬಾರದ ನಷ್ಟ. ಅವರ ಅಗಲಿಕೆಯಿಂದ ನೊಂದಿರುವ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ಹೇಳಿದ್ದಾರೆ.
ಸಾಹಿತಿ, ಪತ್ರಕರ್ತ, ಪ್ರಾಧ್ಯಾಪಕ ಹೀಗೆ ಹಲವು ಪ್ರತಿಭೆಗಳ ಸಂಗಮವಾಗಿದ್ದ 'ಕಾಮರೂಪಿ' ಎಂದೇ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯವಾಗಿದ್ದ ಎಂ.ಎಸ್.ಪ್ರಭಾಕರ್ ಸಾವು ನಿಜ ಅರ್ಥದಲ್ಲಿ ತುಂಬಿಬಾರದ ನಷ್ಟ.
— Siddaramaiah (@siddaramaiah) December 29, 2022
ಅವರ ಅಗಲಿಕೆಯಿಂದ ನೊಂದಿರುವ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/9IL2HPjm4w
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಂತ್ವನ
'ಕಾಮರೂಪಿ' ಎಂದೇ ಜನಪ್ರಿಯರಾಗಿದ್ದ ಖ್ಯಾತ ಪರ್ತಕರ್ತ, ಲೇಖಕ ಶ್ರೀ ಎಂ.ಎಸ್ ಪ್ರಭಾಕರ ಅವರ ನಿಧನವು ನಾಡಿಗೆ ತುಂಬಲಾರದ ನಷ್ಟ. ತಮ್ಮ ದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ ಕುಟುಂಬವರ್ಗಕ್ಕೆ ಸಾಂತ್ವನ ಕೋರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
'ಕಾಮರೂಪಿ' ಎಂದೇ ಜನಪ್ರಿಯರಾಗಿದ್ದ ಖ್ಯಾತ ಪರ್ತಕರ್ತ, ಲೇಖಕ ಶ್ರೀ ಎಂ.ಎಸ್ ಪ್ರಭಾಕರ ಅವರ ನಿಧನವು ನಾಡಿಗೆ ತುಂಬಲಾರದ ನಷ್ಟ. ತಮ್ಮ ದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ ಕುಟುಂಬವರ್ಗಕ್ಕೆ ಸಾಂತ್ವನ ಕೋರುತ್ತೇನೆ. pic.twitter.com/UWay3ySPB8
— DK Shivakumar (@DKShivakumar) December 29, 2022












Click it and Unblock the Notifications