ಏ.18 ಕರ್ನಾಟಕ ಬಂದ್ : ಯಾವ ಸಂಘಟನೆಗಳ ಬೆಂಬಲ?
ಬೆಂಗಳೂರು, ಏ. 14 : ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಏ.18ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಹಲವು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ. ಬುಧವಾರದಿಂದ ಬೆಂಗಳೂರಿನಲ್ಲಿ ಜನ ಜಾಗೃತಿ ಜಾಥಾ ನಡೆಯಲಿದೆ. [ಕರ್ನಾಟಕ ಬಂದ್ ಗೆ ಬೆಂಬಲ ಕೊಡ್ತಿರಾ?]
ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳ ನಾಯಕರು ಏ.18ರ ಬಂದ್ ಯಶಸ್ವಿಗೊಳಿಸುವ ಕುರಿತು ಚರ್ಚೆ ನಡೆಸಿದರು. ಕರ್ನಾಟಕ ಬಂದ್ ನಮ್ಮ ಸರ್ಕಾರದ ವಿರುದ್ಧ ಅಲ್ಲ, ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ವಿರುದ್ಧ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದರು. [ಏ.18ರಂದು ಕರ್ನಾಟಕ ಬಂದ್]

ಸಭೆಯಲ್ಲಿ ಚಿತ್ರನಟ ನೆನಪಿರಲಿ ಪ್ರೇಮ್, ಕನ್ನಡ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಅನಂತಸುಬ್ಬರಾವ್ ಮುಂತಾದವರು ಪಾಲ್ಗೊಂಡಿದ್ದರು. [ಕರ್ನಾಟಕ ಬಂದ್, ಸಾಹಿತ್ಯ ಪರಿಷತ್ ಬೆಂಬಲ]
ಜನಜಾಗೃತಿ ಜಾಥಾ : ಸಭೆಯ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್ ಏ.18ರ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಬುಧವಾರದಿಂದ ಬೆಂಗಳೂರಿನಲ್ಲಿ ಜನಜಾಗೃತಿ ಜಾಥಾ ನಡೆಸಿ ಬಂದ್‌ಗೆ ಬೆಂಬಲ ನೀಡುವಂತೆ ಜನರಲ್ಲಿ ಮನವಿ ಮಾಡಲಾಗುತ್ತದೆ ಎಂದರು. [ಕರ್ನಾಟಕ ಬಂದ್: ಸಾರ್ವಜನಿಕರಿಗೆ ಗೈಡ್ ಲೈನ್ಸ್]
ಜಲಮಂಡಳಿ ಬೆಂಬಲ : ಬೆಂಗಳೂರು ಜಲಮಂಡಳಿ ನೌಕರರು ಒಂದು ದಿನದ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಏಪ್ರಿಲ್ 18ರ ಶನಿವಾರ ನೀರು ಪೂರೈಕೆಯನ್ನು ಸಂಜೆ 6 ಗಂಟೆವರೆಗೆ ಸ್ಥಗಿತಗೊಳಿಸಲಿದ್ದಾರೆ. [ಏ.30ರಂದು ಕೆಎಸ್ಆರ್ ಟಿಸಿ ಬಸ್ಸಿಲ್ಲ]
ಪ್ರೇಮ್ ಹೇಳಿದ್ದೇನು? : ಸಭೆಯಲ್ಲಿ ಪಾಲ್ಗೊಂಡಿದ್ದ ನಟ ನೆನಪಿರಲಿ ಪ್ರೇಮ್, ಏಪ್ರಿಲ್ 18ರಂದು ನನ್ನ ಹುಟ್ಟುಹಬ್ಬ, ಕನ್ನಡ ಪರ ಹೋರಾಟದೊಂದಿಗೆ ನನ್ನ ಹುಟ್ಟಹಬ್ಬವನ್ನು ಆಚರಿಸುತ್ತೇನೆ. ಮೇಕೆದಾಟು ಯೋಜನೆ ಸಾಕಾರಗೊಂಡರೆ ಅದೇ ಹುಟ್ಟುಹಬ್ಬದ ಉಡುಗೊರೆ ಎಂದುಕೊಳ್ಳುತ್ತೇನೆ ಎಂದರು.
ಬಂದ್‌ಗೆ ಬಿಜೆಪಿ ಬೆಂಬಲ : ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಏ.18ರ ಕರ್ನಾಟಕ ಬಂದ್ ಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಾಂತಿಯುತವಾದ ಬಂದ್‌ಗೆ ನಮ್ಮ ಬೆಂಬಲವಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications