Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಬೇರೆ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸುವ ವಿವಿಧ 07 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಸಮಯ ಪರಿಷ್ಕರಿಸಲಾಗಿದೆ. ನಿಲ್ದಾಣಗಳಿಗೆ ಬಂದು ಹೋಗುವ ಸಮಯದಲ್ಲಿ ಬದಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಕಲಬುರಗಿ, ಪುಣೆ, ಕೊಯಮತ್ತೂರು ಮಾರ್ಗದ ಪ್ರಯಾಣಿಕರು ಹೊಸ ಸಮಯ ಗಮನಿಸಿ ಪ್ರಯಾಣದ ಪ್ಲ್ಯಾನ್ ಮಾಡಿಕೊಳ್ಳುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ, ನಿಲುಗಡೆ ಸಮಯ ಬದಲಾವಣೆಯು ಇದೇ ತಿಂಗಳ ಮಾರ್ಚ್ 15 ರಿಂದ ಜಾರಿಗೆ ಬರಲಿದೆ. ಕೆಲವು ನಿಲ್ದಾಣಗಳಿಗೆ ಬರುವ ಮತ್ತು ಅಲ್ಲಿಂದ ಮುಂದೆ ತೆರಳುವ ಸಮಯದಲ್ಲಿ ಮಾತ್ರವೇ ಬದಲಾವಣೆ ಆಗಿದ್ದು, ಉಳಿದ ನಿಲ್ದಾಣಗಳ ಸಮಯದಲ್ಲಿ ಬದಲಾವಣೆ ಆಗಿಲ್ಲ. ಯಾವೆಲ್ಲ ಮಾರ್ಗದ ವಂದೇ ಬಾರತ್ ಎಕ್ಸ್‌ಪ್ರೆಸ್ ರೈಲು ಸಮಯ ಬದಲಾಗಿದೆ. ಪರಿಷ್ಕತ ಸಮಯದ ವಿವರ, ಪಟ್ಟಿ ಇಲ್ಲಿದೆ.

ವಂದೇ ಭಾರತ್ ರೈಲುಗಳ ಸಮಯ ಪರಿಷ್ಕರಣೆ, ಪಟ್ಟಿ
1. ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು (ಸಂಖ್ಯೆ 20669) ಬದಲಾದ ಸಮಯದಲ್ಲಿ ಬೆಳಗಾವಿ ರೈಲು ನಿಲ್ದಾಣಕ್ಕೆ ಬೆಳಗ್ಗೆ 07:05ಕ್ಕೆ ಆಗಮಿಸಿ 07:10 ಗಂಟೆಗೆ ಹೊರಡುತ್ತದೆ. ಘಟಪ್ರಭಾ ರೈಲು ನಿಲ್ದಾಣಕ್ಕೆ ಬೆಳಗ್ಗೆ 07:48ಕ್ಕೆ ಆಗಮಿಸಿ 07:50ಕ್ಕೆ ಅಲ್ಲಿಂದ ಹೊರಡುತ್ತದೆ. ಇದನ್ನು ಪ್ರಯಾಣಿಕರು ಗಮನಿಸುವಂತೆ ರೈಲು ಅಧಿಕಾರಿಗಳು ತಿಳಿಸಿದ್ದಾರೆ.
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ
2. ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು (ಸಂಖ್ಯೆ 20661) ದಾವಣಗೆರೆ ನಿಲ್ದಾಣಕ್ಕೆ ಬೆಳಗ್ಗೆ 09:30ಕ್ಕೆ ಆಗಮಿಸಿ 09:32ಕ್ಕೆ ಅಲ್ಲಿಂದ ಹೊರಡುತ್ತದೆ. ಅದೇ ರೀತಿ ಹಾವೇರಿ ಮೈಲಾರ ಮಹಾದೇವಪ್ಪ ರೈಲು ನಿಲ್ದಾಣಕ್ಕೆ 10:20ಕ್ಕೆ ಬಂದು 10:22ಗಂಟೆಗೆ ತೆರಳುತ್ತದೆ. ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ ಅನ್ನು 11:15ಕ್ಕೆ ತಲುಪಿ 11:20ಗಂಟೆಗೆ ನಿಲ್ದಾಣದಿಂದ ಹೊರಡುತ್ತದೆ.
3. ಧಾರವಾಡ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು (20662) ಮರಳಿ ಅದೇ ದಿಕ್ಕಿನಲ್ಲಿ ಹಾವೇರಿಗೆ ಮಧ್ಯಾಹ್ನ 14:48ಕ್ಕೆ ಬಂದು 14:50ಕ್ಕೆ ಹೊರಡುತ್ತದೆ. ದಾವಣಗೆರೆ ನಿಲ್ದಾಣಕ್ಕೆ 15:33ಕ್ಕೆ ಆಗಮಿಸಿ 15:35ಗಂಟೆಗೆ ಅಲ್ಲಿಂದ ತೆರಳಲಿದೆ. ಈ ನಿಲ್ದಾಣಗಳಲ್ಲಿ ಮಾತ್ರವೇ ಸಮಯ ಬದಲಾವಣೆ ಆಗಿದ್ದು ತುಮಕೂರು ನಿಲ್ದಾಣದ ಸಮಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನೂ ಯಶವಂತಪುರ ನಿಲ್ದಾಣಕ್ಕೆ ಸಂಜೆ 19:21ಕ್ಕೆ ತಲುಪಿ 19:23 ಗಂಟೆಗೆ ನಿರ್ಗಮಿಸಲಿದೆ.
4. ಬೆಳಗಾವಿ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ರೈ: ಈಲು (26751) ಮೇಲೆ ತಿಳಿಸಿದ ಸಮಯದಂತೆ ಕ್ರಮವಾಗಿ ಹಾವೇರಿ ನಿಲ್ದಾಣ (08:42/08:44 ), ದಾವಣಗೆರೆ ನಿಲ್ದಾಣ (09:28/09:30 ), ತುಮಕೂರು ರೈಲು ನಿಲ್ದಾಣ (12:15/12:17 ) ಹಾಗೂ ಯಶವಂತಪುರ (13:23/13:25 ಗಂಟೆ) ನಿಲ್ದಾಣಗಳಲ್ಲಿ ಮೇಲಿನ ಪರಿಷ್ಕೃತ ಸಮಯದಂತೆ ಸಂಚಾರ ಮಾಡಲಿದೆ.
5. ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ರೈ: ಈ ಲು (20704) ಪರಿಷ್ಕೃತ ಸಮಯದ ಪ್ರಕಾರ ಹಿಂದೂಪುರ ನಿಲ್ದಾಣಕ್ಕೆ ಮಧ್ಯಾಹ್ನ 15:55ಕ್ಕೆ ಆಗಮಿಸಿ 15:57ಕ್ಕೆ ಅಲ್ಲಿಂದ ತೆರಳುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20703) ಹಿಂದೂಪುರದಲ್ಲಿ ಹೊಸ ಸಮಯದ (12:17/12:19) ನಿಲುಗಡೆ ನೀಡಿ ಸಂಚರಿಸುತ್ತದೆ.
6. ಕಲಬುರಗಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು (22231) ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (11:13/11:15 ಗಂಟೆ) ಮತ್ತು ಯಲಹಂಕ (12:58/13:00 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯದೊಂದಿಗೆ ನಿಲುಗಡೆ ನೀಡಿ ಸಂಚರಿಸುತ್ತದೆ.
ಮರಳಿ ಅದೇ ದಿಕ್ಕಿನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22232) ಯಲಹಂಕ ನಿಲ್ದಾಣ (15:09/15:11ಗಂಟೆ) ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (16:45/16:47 ಗಂಟೆ) ನಿಲ್ದಾಣಗಳಲ್ಲಿ ತಿಳಿಸಲಾದ ಪರಿಷ್ಕೃತ ಸಮಯದೊಂದಿಗೆ ಸಂಚಾರ ಮಾಡಲಿದೆ.
7. ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು (20642) ಹೊಸೂರು ರೈಲು ನಿಲ್ದಾಣದಲ್ಲಿ ಮಧ್ಯಾಹ್ನ 12:13 ಗಂಟೆಗೆ ಅಗಮಿಸಿ ಅಲ್ಲಿಂದ 12:15ಗಂಟೆಗೆ ತೆರಳುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications